spot_img
spot_img

JUSTIN TRUDEAU EXPECTED TO RESIGN : ಸ್ವಪಕ್ಷದಲ್ಲೇ ಭುಗಿಲೆದ್ದ ಭಿನ್ನಮತ

spot_img
spot_img

Share post:

Ottawa (Canada) News:

ಗುರುತು ಬಹಿರಂಗಪಡಿಸದಂತೆ ಷರತ್ತು ವಿಧಿಸಿ ಪತ್ರಿಕೆಗೆ ಮಾಹಿತಿ ನೀಡಿದ ಕೆನಡಾ ಸರ್ಕಾರದ ಮೂಲಗಳು, ಟ್ರೂಡೋ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಕುರಿತು ನಿಖರ ಸಮಯ ಅನಿಶ್ಚಿತವಾಗಿದೆ. ಆದರೆ ಪಕ್ಷದ ರಾಷ್ಟ್ರೀಯ ನಾಯಕರ ಮಹತ್ವದ ಸಭೆಯಲ್ಲಿ ಈ ಬೆಳವಣಿಗೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ತಮ್ಮ ಪಕ್ಷದೊಳಗೆ ಅಸಮಾಧಾನ, ಭಿನ್ನಮತ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ JUSTIN TRUDEAU ಅವರು ಈ ವಾರವೇ ಲಿಬರ್ ಪಾರ್ಟಿ ಮುಖ್ಯಸ್ಥನ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ಕೆನಡಾದ ಪ್ರಮುಖ ದಿನಪತ್ರಿಕೆ ದಿ ಗ್ಲೋಬ್ ಆ್ಯಂಡ್ ಮೇಲ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಅದೇ ರೀತಿ, ಲಿಬರಲ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ನಾಯಕತ್ವ ಪರಿವರ್ತನೆಯನ್ನು ನಿರ್ವಹಿಸಲು ಯಾವ ರೀತಿ ಯೋಜನೆ ರೂಪಿಸಿಕೊಂಡಿದೆ ಎಂಬ ಕುರಿತು ಸ್ಪಷ್ಟನೆ ದೊರೆತಿಲ್ಲ. JUSTIN TRUDEAU ತಕ್ಷಣವೇ ಹುದ್ದೆಯಿಂದ ಕೆಳಗಿಳೀತಾರಾ ಅಥವಾ ಉತ್ತರಧಿಕಾರಿಯ ಆಯ್ಕೆಯವರೆಗೆ ಪ್ರಧಾನಿಯಾಗಿ ಮುಂದುವರೀತಾರಾ? ಎಂಬುದು ಕೂಡಾ ಅನಿಶ್ಚಿತವಾಗಿದೆ.

ಇನ್ನೊಂದು ಮೂಲದ ಪ್ರಕಾರ, ತನ್ನ ಪಕ್ಷದ ಸಂಸತ್ ಸದಸ್ಯರಿಂದಲೇ ತಾನು ಉಚ್ಛಾಟಿತನಾದೆ ಎಂಬ ಅವಮಾನದಿಂದ ಪಾರಾಗಲು ತಾನಾಗಿಯೇ ಪಕ್ಷದ ರಾಷ್ಟ್ರೀಯ ನಾಯಕರ ಸಭೆಗೂ ಮುನ್ನವೇ ರಾಜೀನಾಮೆ ಘೋಷಣೆ ಮಾಡುವುವುದು ಒಳಿತೆಂಬುದನ್ನು ಟ್ರೂಡೋ ಅರ್ಥಮಾಡಿಕೊಂಡಿದ್ದಾರೆ.ಮುಂದಿನ ನಾಯಕತ್ವದ ವಿಚಾರಗಳನ್ನು ನಿರ್ಧರಿಸುವ ಲಿಬರಲ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಈ ವಾರ ಸಭೆ ಸೇರಲಿದೆ.

ಈ ಸಭೆ ಪಕ್ಷದ ಸಂಸತ್ ಸದಸ್ಯರ ಅಧಿವೇಶನದ ನಂತರ ನಡೆಯಲಿದೆ ಎಂದು ದಿ ಗ್ಲೋಬ್ ಆ್ಯಂಡ್ ಮೇಲ್ ವರದಿ ಹೇಳಿದೆ.ಇದರ ಮಧ್ಯೆ ಪ್ರಮುಖ ಮೂರು ಪ್ರತಿಪಕ್ಷಗಳು ಹಾಲಿ ಸರ್ಕಾರವನ್ನು ಉರುಳಿಸಲು ಪಣ ತೊಟ್ಟಿವೆ ಎಂದು ರೇಡಿಯೋ ಕೆನಡಾ ವರದಿ ತಿಳಿಸಿದೆ.ಮುಖ್ಯವಾಗಿ, ರಾಜೀನಾಮೆಗೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಟ್ರೂಡೋ ಅವರ ಲಿಬರಲ್ ಪಕ್ಷದ ಸದಸ್ಯರು ಬುಧವಾರವೇ ಸಭೆ ಸೇರುವ ಸಾಧ್ಯತೆ ಗೋಚರಿಸಿದೆ.

ಇದಕ್ಕಾಗಿ ಎಂಪಿಗಳು ಜನವರಿ 27ಕ್ಕೆ ರಾಜಧಾನಿ ಒಟ್ಟಾವಗೆ ಆಗಮಿಸಬೇಕಿದೆ.ಕೆನಡಾದಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಾಜಕೀಯ ಪ್ರಕ್ಷುಬ್ದತೆ ಇದೆ. ಡಿಸೆಂಬರ್ 16ರಂದು ಮಾಜಿ ಪ್ರಧಾನಿ ಮತ್ತು ಹಣಕಾಸು ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ರಾಜೀನಾಮೆ ಘೋಷಿಸಿದ್ದರು. ನಂತರ ಟ್ರೂಡೋ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ.

ಇದನ್ನು ಓದಿರಿ : MYSURU BANDH : ಮೈಸೂರು ಬಂದ್ಗೆ ಮಿಶ್ರ ಪ್ರತಿಕ್ರಿಯೆ:

 

 

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...