New Delhi News:
KAILASH MANSAROVAR YATRA ಮತ್ತು ಭಾರತ-ಚೀನಾ ನಡುವೆ ನೇರ ವಿಮಾನಯಾನ ಸಂಪರ್ಕವನ್ನು ಪುನರಾರಂಭಿಸಲು ಎರಡೂ ದೇಶಗಳು ತಾತ್ವಿಕವಾಗಿ ಒಪ್ಪಿವೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಬೀಜಿಂಗ್ನಲ್ಲಿ ಚೀನಾದ ಉಪ ವಿದೇಶಾಂಗ ಸಚಿವ ಸನ್ ವೀಡಾಂಗ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರಗಳನ್ನು ಘೋಷಿಸಲಾಯಿತು. 2020ರಲ್ಲಿ ಸ್ಥಗಿತಗೊಳಿಸಲಾಗಿದ್ದ KAILASH MANSAROVAR YATRA ಹಾಗೂ ಉಭಯ ದೇಶಗಳ ನಡುವೆ ನೇರ ವಿಮಾನಯಾನವನ್ನು ಪುನರಾರಂಭಿಸಲು ಚೀನಾ ಹಾಗೂ ಭಾರತ ನಿರ್ಧರಿಸಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ತಿಳಿಸಿದೆ.
ಈ ಸಭೆಯ ಫಲವಾಗಿ, 2025ರ ಬೇಸಿಗೆಯಲ್ಲಿ KAILASH MANSAROVAR YATRA ಪುನರಾರಂಭಿಸಲು ತೀರ್ಮಾನಿಸಲಾಗಿದೆ. ಅಸ್ತಿತ್ವದಲ್ಲಿರುವ ಒಪ್ಪಂದಗಳಂತೆ, ಈ ನಿರ್ಧಾರಕ್ಕೆ ಸಂಬಂಧಿಸಿದ ಕಾರ್ಯವಿಧಾನಗಳ ಕುರಿತು ಚರ್ಚಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಬೀಜಿಂಗ್ನಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಮಿಶ್ರಿ, ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ವಿಭಾಗದ ಸಚಿವ ಲಿಯು ಜಿಯಾನ್ಚಾವೊ ಅವರನ್ನು ಭೇಟಿ ಮಾಡಿದರು. ಮಿಶ್ರಿ ಹಾಗೂ ಸನ್ ಅವರು ಭಾರತ- ಚೀನಾ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಗತಿಯನ್ನು ಸಮಗ್ರವಾಗಿ ಪರಿಶೀಲಿಸಿದರು.
ನಂತರ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಿರಗೊಳಿಸಲು ಹಾಗೂ ಪುನರ್ಮಿಸಲು ಕೆಲವು ಜನಕೇಂದ್ರಿತ ಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಿಕೊಂಡರು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅದಷ್ಟೇ ಅಲ್ಲದೆ, ಗಡಿಯಾಚೆಗಿನ ನದಿಗಳಿಗೆ ಸಂಬಂಧಿಸಿದ ಜಲವಿಜ್ಞಾನ ದತ್ತಾಂಶ ಮತ್ತು ಇತರ ವಿಚಾರಗಳಲ್ಲಿ ಸಹಕಾರ ಒದಗಿಸುವ ಪುನರಾರಂಭದ ಬಗ್ಗೆ ಚರ್ಚಿಸಲು ಭಾರತ-ಚೀನಾ ತಜ್ಞರ ಮಟ್ಟದ ಕಾರ್ಯವಿಧಾನದ ಆರಂಭಿಕ ಸಭೆಯನ್ನು ನಡೆಸಲು ಸಹ ಒಪ್ಪಿಕೊಂಡಿದೆ.
ಪೂರ್ವ ಲಡಾಖ್ನಲ್ಲಿ ಎರಡೂ ದೇಶಗಳು ತಮ್ಮ ಸೇನೆಗಳನ್ನು ರದ್ದುಗೊಳಿಸಿದ ಎರಡೂವರೆ ತಿಂಗಳ ಬಳಿಕ ಎರಡೂ ದೇಶಗಳ ವಿವಿಧ ನಗರಗಳ ನಡುವೆ ನೇರ ವಾಯು ಸೇವೆಗಳನ್ನು ಪುನರಾರಂಭಿಸಲು ತಾತ್ವಿಕ ಒಪ್ಪಿಗೆ ದೊರೆತಿದೆ. ಎರಡೂ ದೇಶಗಳ ಸಂಬಂಧಿತ ತಾಂತ್ರಿಕ ಅಧಿಕಾರಿಗಳು ಶೀಘ್ರದಲ್ಲಿ ಭೇಟಿಯಾಗಿ KAILASH MANSAROVAR YATRA ಈ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ.
2025 ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75ನೇ ವರ್ಷಾಚರಣೆಯಾಗಿದೆ. ಈ ವರ್ಷ ಉಭಯ ದೇಶಗಳ ನಡುವೆ ನಂಬಿಕೆ ಹಾಗೂ ವಿಶ್ವಾಸವನ್ನು ಮರುಸ್ಥಾಪಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ದ್ವಿಗುಣಗೊಳಿಸಲು ನಿರ್ಧರಿಸಿರುವುದಾಗಿ ಸಚಿವಾಲಯ ತಿಳಿಸಿದೆ. ಕಳೆದ ವರ್ಷದ ಅಕ್ಟೋಬರ್ನಲ್ಲಿ ರಷ್ಯಾದ ಕಜಾನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ಮಾತುಕತೆ ನಡೆದಿತ್ತು.
ಇದನ್ನು ಓದಿರಿ : MAHA KUMBH STAMPEDE : ಕಾಲ್ತುಳಿತದಲ್ಲಿ ಬಿಹಾರದ 10 ಮಹಿಳಾ ಭಕ್ತರು ಮೃತ, ಹಲವರು ಇನ್ನೂ ನಾಪತ್ತೆ