ಹುಬ್ಬಳ್ಳಿ: ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಲ್ಲ ಅಂತಾ ಭಾವಿಸೋದು ಬೇಡ. ಮಹದಾಯಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಆಗಮಿಸಲಿದ್ದೇವೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.
ಭೈರತಿ ರಣಗಲ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಗರದ ಅಪ್ಸರಾ ಚಿತ್ರ ಮಂದಿರಕ್ಕೆ ಪತ್ನಿ ಗೀತಾ ಜತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಭೇಟಿ ನೀಡಿದರು. ನೆಚ್ಚಿನ ನಟನನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ಬಳಿಕ ಮಾತನಾಡಿದ ನಟ ಶಿವರಾಜ್‌ಕುಮಾರ್, ನಮ್ಮ ಕುಟುಂಬಕ್ಕೂ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿದೆ. ಅಪ್ಪಾಜಿ ಹಾಗೂ ಅವರ ತಾಯಿ ಸಿದ್ದರೂಢ ಮಠದಲ್ಲಿ ಬೆಳೆದಿದ್ದಾರೆ. ಹೀಗಾಗಿ ಹುಬ್ಬಳ್ಳಿ ನಮಗೆ ಹೊಸದೇನಲ್ಲ. ಆಗಾಗ ಬಂದು ಹೋಗುತ್ತಿರುತ್ತೇವೆ ಎಂದರು.
ಈ ಭಾಗದಲ್ಲೂ ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಹೋರಾಟ ನಡೆಸಲಿದೆ. ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಲ್ಲ ಅಂತಾ ಭಾವಿಸೋದು ಬೇಡ. ಭೈರತಿ ರಣಗಲ್ ಚಿತ್ರದ ಪ್ರಚಾರಾರ್ಥವಾಗಿ ಥಿಯೇಟರ್ಗೆ ಭೇಟಿ ನೀಡಿದ್ದೇನೆ. ಭೈರತಿ ರಣಗಲ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಮಫ್ತಿ ಸಿನಿಮಾದಲ್ಲಿ ನನ್ನ ಪಾತ್ರವನ್ನು ಎಲ್ಲರೂ ಇಷ್ಟಪಟ್ಟಿದ್ದರು. ಭೈರತಿ ರಣಗಲ್ ಚಿತ್ರ ಎಲ್ಲರ ಹೃದಯಕ್ಕೆ ಮುಟ್ಟಿದೆ. ಮಫ್ತಿ ಸೀಕ್ವೆಲ್ ಶೀಘ್ರದಲ್ಲೇ ಸೆಟ್ಟೇರಲಿದ್ದು, 45 ಸಿನಿಮಾದ ಚಿತ್ರೀಕರಣ ಮುಗಿದಿದೆ ರಿಲೀಸ್ಗೆ ರೆಡಿಯಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲೂ ಕೌಟುಂಬಿಕ ಕಥಾಹಂದರ ಚಿತ್ರಗಳು ಬರಲಿವೆ ಮುಂದಿನ ವಾರ ವಿದೇಶಕ್ಕೆ ತೆರಳುತ್ತಿದ್ದೇನೆ. ನನಗೆ ಶಸ್ತ್ರಚಿಕಿತ್ಸೆ ಬಳಿಕ ಚಿತ್ರದ ಬಗ್ಗೆ ಮುಹೂರ್ತದ ಬಗ್ಗೆ ಚರ್ಚೆ ಮಾಡಲಿದ್ದೇನೆ. ನಮ್ಮದೇ ಬ್ಯಾನರ್ ಎ ಅಡಿ ಫಾರ್ ಆನಂದ್ ಚಿತ್ರ ಮೂಡಿಬರಲಿದೆ. ಮುಂದಿನ ಚಿತ್ರಕ್ಕಾಗಿ ಎಲ್ಲ ತಯಾರಿ ನಡೆದಿದೆ ಎಂದು ಹೇಳಿದರು.
ಮಹದಾಯಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಆಗಮಿಸಲಿದ್ದೇವೆ. ಕನ್ನಡ ಚಿತ್ರರಂಗದ ಬಗ್ಗೆ ಈ ಭಾಗದಲ್ಲಿರುವ ಕೊರಗು ನೀಗಿಸುತ್ತೇವೆ. ಯಾವುದೇ ಸಮಸ್ಯೆ ಇದ್ದರೂ ನಾವೆಲ್ಲ ಒಗ್ಗಟ್ಟಾಗಿ ಈ ಭಾಗದಲ್ಲೂ ಹೋರಾಟದಲ್ಲಿ ಭಾಗಿಯಾಗಲಿದ್ದೇವೆ ಎಂದು ಭರವಸೆ ನೀಡಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now