Mysore News:
30 ವರ್ಷಗಳ ಬಳಿಕ ನನ್ನ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವುದು ನನ್ನ ಭಾಗ್ಯ ಎಂದು ಗೊ.ರು. ಚನ್ನಬಸಪ್ಪ ಹೇಳಿದ್ದಾರೆ.1994ರಲ್ಲಿ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ ಚದುರಂಗ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು.
ರಾಜಕೀಯವಾಗಿ ಸದಾ ಜಾಗೃತವಾಗಿರುವ, ಸಾಮಾಜಿಕವಾಗಿ ಸೌಹಾರ್ದತೆಯನ್ನು ಒಳಗೊಂಡಿರುವ, ಆರ್ಥಿಕವಾಗಿ ಸಮೃದ್ಧವಾದ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಮತ್ತು ಸಾಹಿತ್ಯಿಕವಾಗಿಯೂ ಹೆಸರು ಮಾಡಿರುವ ಜಿಲ್ಲೆ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿರುವುದು ಅತ್ಯಂತ ಸಂತೋಷ ಹಾಗೂ ಸಂಭ್ರಮದ ಸಂಗತಿ ಎಂದು ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.
“ಈ ಸಮ್ಮೇಳನದ ಬಗ್ಗೆ ವಿಶೇಷ ಅಭಿಮಾನದ ಸಂಗತಿಯೆಂದರೆ, 1994ರಲ್ಲಿ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ ಚದುರಂಗ ಎಂದೇ ಹೆಸರಾಗಿದ್ದ ಸುಬ್ರಹ್ಮಣ್ಯರಾಜೇ ಅರಸ್ ಅವರ ಸರ್ವಾಧ್ಯಕ್ಷತೆಯಲ್ಲಿ 63ನೇ ಅಖಿಲ ಭಾರತ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸುವ ಅವಕಾಶ ನನಗೆ ದೊರಕಿತ್ತು.
ಅದಾದ 30 ವರ್ಷಗಳ ನಂತರ ನನ್ನ ಸರ್ವಾಧ್ಯಕ್ಷತೆಯಲ್ಲೇ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಒಂದು ಯೋಗಾಯೋಗ ಎಂದೇ ನಾನು ಭಾವಿಸಿದ್ದೇನೆ. ಮಂಡ್ಯದ ಇತಿಹಾಸದಲ್ಲಿ ಇದು ಮೂರನೇ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ” ಎಂದರು.
ಮಂಡ್ಯ ಜಿಲ್ಲೆಯು ರೈತಾಪಿಗಳ ನಾಡು. ಕಬ್ಬು ಮತ್ತು ಬತ್ತ ಬೆಳೆಯುತ್ತಿರುವ ನೇಗಿಲಯೋಗಿಗಳ ಬೀಡು. ಇಂತಹ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನನಗೆ ನೀಡಿರುವುದು ನನ್ನ ಜೀವನದ ಮಹತ್ವದ ಗೌರವ ಎಂದು ನಾನು ಭಾವಿಸಿದ್ದೇನೆ.
ನಾನು ಇದಕ್ಕೆ ಎಷ್ಟರಮಟ್ಟಿಗೆ ಅರ್ಹ ಎನ್ನುವುದು ಬೇರೆ” ಎಂದು ಅಭಿಪ್ರಾಯಪಟ್ಟರು.ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು ಅಧ್ಯಕ್ಷೀಯ ಭಾಷಣ ಮಾಡಿದ ಅವರು, “ಅಪ್ಪಟ ಕನ್ನಡ ಜಿಲ್ಲೆ, ಇಲ್ಲಿ ಅನ್ಯ ಭಾಷಿಕರ ಪ್ರಮಾಣ ಕಡಿಮೆ.