Haldwani News:
ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ KARNATAKA ಹೆಚ್ಚು ಪದಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.
ದೆಹಲಿ 2 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನೊಂದಿಗೆ ನಾಲ್ಕನೇ ಸ್ಥಾನ, ಒಡಿಶಾ ಒಂದು ಚಿನ್ನ, 3 ಕಂಚಿನೊಂದಿಗೆ ಐದನೇ, ಕೇರಳ ಒಂದು ಚಿನ್ನ, 2 ಕಂಚಿನೊಂದಿಗೆ ಆರನೇ, ಪಶ್ಚಿಮ ಬಂಗಾಳ ಒಂದು ಚಿನ್ನದೊಂದಿಗೆ ಏಳನೇ, ಗುಜರಾತ್ ಒಂದು ಬೆಳ್ಳಿ, 3 ಕಂಚು ಪಡೆದು ಎಂಟನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ 9ನೇ ಸ್ಥಾನ, ಅಸ್ಸೋಂ ಒಂದು ಬೆಳ್ಳಿ ಪದಕದೊಂದಿಗೆ ಹತ್ತನೇ ಸ್ಥಾನದಲ್ಲಿದೆ.
ಈವರೆಗೆ, ಮಹಿಳಾ ಮತ್ತು ಪುರುಷ ಆಟಗಾರರು 8 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನ ಪದಕ ಸೇರಿದಂತೆ ಒಟ್ಟು 15 ಪದಕಗಳನ್ನು ಗೆಲ್ಲುವ ಮೂಲಕ ಕ್ರೀಡಾಕೂಡದಲ್ಲಿ ರಾಜ್ಯವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಈವರೆಗೆ ಬೇರೆ ಯಾವುದೇ ರಾಜ್ಯಗಳು ಈ ಅಂಕಿಅಂಶವನ್ನು ದಾಟಲು ಸಾಧ್ಯವಾಗಿಲ್ಲ.ಮಹಾರಾಷ್ಟ್ರ 3 ಚಿನ್ನ, 6 ಬೆಳ್ಳಿ ಮತ್ತು 3 ಕಂಚು ಸೇರಿದಂತೆ 12 ಪದಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ತಮಿಳುನಾಡು 2 ಚಿನ್ನ, 5 ಬೆಳ್ಳಿ ಮತ್ತು 3 ಕಂಚಿನ ಪದಕ ಸೇರಿದಂತೆ 10 ಪದಕಗಳನ್ನು ಗೆಲ್ಲುವ ಮೂಲಕ ಮೂರನೇ ಸ್ಥಾನದಲ್ಲಿದೆ.
Karnataka dominates in swimming competition:200 ಮೀಟರ್ ಫ್ರೀಸ್ಟೈಲ್ ಈಜು ಮತ್ತು 100 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆ, 4×100 ಫ್ರೀಸ್ಟೈಲ್ ಈವೆಂಟ್ ಸೇರಿ ಒಂದೇ ದಿನ ದಿನಿಧಿ ದೇಸಿಂಗು 3 ಚಿನ್ನ ಗೆದ್ದುಕೊಂಡರು. ಉಳಿದಂತೆ ಶ್ರೀಹರಿ ನಟರಾಜನ್ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
ನಡೆಯುತ್ತಿರುವ ರಾಷ್ಟ್ರೀಯ ಕ್ರೀಡೆಯಲ್ಲಿKARNATAKAಪ್ರಾಬಲ್ಯ ಸಾಧಿಸಿದೆ. ಒಟ್ಟು ನಾಲ್ಕು ಪದಕಗಳನ್ನು ಗೆದ್ದುಕೊಂಡಿದೆ. 14 ವರ್ಷದ ದಿನಿಧಿ ದೇಸಿಂಗು 3 ಪದಕ ಗೆದ್ದು ದಾಖಲೆ ಬರೆದಿದ್ದಾರೆ.
Congratulations to the athletes: ಕ್ರೀಡಾಕೂಟದ ಆತಿಥ್ಯ ವಹಿಸಿಕೊಂಡಿರುವ ನಮಗೆ ಹೆಮ್ಮೆಯ ಸಂಗತಿ ಆಗಿದೆ ಎಂದರು.ಉತ್ತರಾಖಂಡದ ಕ್ರೀಡಾ ಸಚಿವೆ ರೇಖಾ ಆರ್ಯ ಅವರು KARNATAKAದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.
Prime Minister’s Drive:ಜನವರಿ 28 ರಂದು ಪ್ರಾರಂಭವಾದ ಈ ಕ್ರೀಡಾಕೂಟಕ್ಕೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದರು.38ನೇ ರಾಷ್ಟ್ರೀಯ ಕ್ರೀಡಾಕೂಟವು ಉತ್ತರಾಖಂಡದಲ್ಲಿ ನಡೆಯುತ್ತಿದೆ.
ಇದನ್ನು ಓದಿರಿ :BUDGET 2025: ಕೇಂದ್ರ ಬಜೆಟ್ ಸ್ವಾಗತಿಸಿದ ರಾಜ್ಯ ಬಿಜೆಪಿ ನಾಯಕರು.