ಕನ್ನಡದ ಬಿಗ್ ರಿಯಾಲಿಟಿ ಶೋ ಸೀಸನ್ 11ಕ್ಕೆ ಹಳೆಯ ಕಂಟೆಸ್ಟೆಂಟ್ಗಳ ಆಗಮನವಾಗಿದೆ. ನಿನ್ನೆಯ ಎಪಿಸೋಡ್ನಲ್ಲಿ ಬಿಗ್ಬಾಸ್ ಮನೆಗೆ ಅಚ್ಚರಿಯ ರೀತಿಯಲ್ಲಿ ಡ್ರೋನ್ ಪ್ರತಾಪ್ ಎಂಟ್ರಿ ಕೊಟ್ಟಿದ್ದರು.
ಇದಾದ ಬಳಿಕ ಬೆಂಕಿ ಅಂತಲೇ ಫೇಮಸ್ ಆಗಿರೋ ತನಿಷಾ ಕುಪ್ಪಂಡ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ತನಿಷಾ ಬಳಿಕ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಂದು ನಾಮಿನೇಷನ್ ಪ್ರಕ್ರಿಯೆಯನ್ನು ನಡೆಸಿದ್ದಾರೆ.
ಇನ್ನೂ ಇಂದು ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಬಿಗ್ಬಾಸ್ ಮನೆಗೆ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ ಮನೆಗೆ ಪ್ರವೇಶ ಮಾಡುತ್ತಿದ್ದಂತೆ ನಾಮಿನೇಷನ್ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ.
ಕಾರ್ತಿಕ್ ಮಹೇಶ್ ಸಮ್ಮುಖದಲ್ಲಿ ಗೌತಮಿ, ಮೋಕ್ಷಿತಾಗೆ ನಾಮಿನೇಟ್ ಮಾಡಿದ್ದಾರೆ. ಈ ಮೂಲಕ ಗೆಳತಿಯ ಮಧ್ಯೆ ಮತ್ತೆ ಗಲಾಟೆಯಾಗುತ್ತಾ ಅಥವಾ ಎಲ್ಲವನ್ನೂ ಮರೆತು ಮತ್ತೆ ಈ ಜೋಡಿ ಒಂದಾಗುತ್ತಾರಾ ಅಂತ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now