kerala (shabarimale) :
ಶಬರಿಮಲೆ ಸನ್ನಿಧಾನದಲ್ಲಿ ಡಿ.25ರಂದು ವಿಶೇಷ ದೀಪಾರಾಧನೆ, ಡಿ.26 ಸಂಜೆ ಮಂಡಲಪೂಜೆ ನಡೆಯಲಿದೆ.ಅಯ್ಯಪ್ಪನಿಗೆ ‘ತಂಗ ಅಂಗಿ’ ಆಭರಣ ತೊಡಿಸಲಾಗುತ್ತದೆ. ರಾತ್ರಿ 11ಕ್ಕೆ ಹರಿವರಾಸನಂ ಗಾಯನದೊಂದಿಗೆ ನಡೆ ಮುಚ್ಚುವುದರೊಂದಿಗೆ ಈ ಬಾರಿಯ ಮಂಡಲ ಕಾಲ ತೀರ್ಥಾಟನೆ ಸಂಪನ್ನಗೊಳ್ಳಲಿದೆ. ಡಿ.31ರ ಮುಂಜಾನೆ 3 ರಿಂದ ಮಕರಜ್ಯೋತಿ ಪೂಜೆಗಳು ಆರಂಭವಾಗಲಿದೆ.
ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪನಿಗೆ ‘ತಂಗ ಅಂಗಿ’ ಆಭರಣ ತೊಡಿಸಿ ದೀಪಾರಾಧನೆ ಡಿ.25ರಂದು ಸಂಜೆ ಹಾಗೂ ಮಂಡಲಪೂಜೆ ಡಿ.26ರಂದು ಮಧ್ಯಾಹ್ನ ನೆರವೇರಲಿದೆ.ಆರನ್ಮುಳ ಪಾರ್ಥ ಸಾರಥಿ ದೇವಳದಿಂದ ವಿಶೇಷವಾಗಿ ಸಿದ್ಧಪಡಿಸಿದ ರಥದಲ್ಲಿ ಪೊಲೀಸ್ ಭದ್ರತೆಯಲ್ಲಿ ಭಾನುವಾರ ಬೆಳಗ್ಗೆ ಹೊರಟ ‘ತಂಗ ಅಂಗಿ’ ಮೆರವಣಿಗೆಯನ್ನು ನಾನಾ ಕ್ಷೇತ್ರಗಳಲ್ಲಿ ಸ್ವಾಗತಿಸಿದ ಬಳಿಕ ರಾತ್ರಿ ಓಮಲ್ಲೂರು ರಕ್ತಕಂಠಸ್ವಾಮಿ ದೇವಸ್ಥಾನ ತಲುಪಿದೆ.
ಸೋಮವಾರ ಬೆಳಗ್ಗೆ ಅಲ್ಲಿಂದ ಹೊರಟು ಕೊಡುಂತರ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಪತ್ತನಂತಿಟ್ಟ ಊರಮ್ಮನ್‌ಕೋವಿಲ್ ಸಹಿತ ನಾನಾ ಕ್ಷೇತ್ರಗಳಲ್ಲಿ ಸ್ವಾಗತಿಸಿದ ಬಳಿಕ ಸಂಜೆ ಕೊನ್ನಿ ಚಿರಕ್ಕಲ್ ದೇವಸ್ಥಾನದ ಮೂಲಕ ಕೊನ್ನಿ ಪೇಟೆ ಆಗಮಿಸಿ ರಾತ್ರಿ ಮುರಿಂಙ ಮಂಗಲಂ ದೇವಸ್ಥಾನದಲ್ಲಿ ಕೊನೆಗೊಂಡಿದೆ. 25 ರಂದು ಲಾಹ ಸತ್ರಂ, ಪ್ಲಾಪಳ್ಳಿ, ನಿಲಕ್ಕಲ್ ದೇವಸ್ಥಾನ, ಚಾಲಕ್ಕಯಂ ಮೂಲಕ ಮಧ್ಯಾಹ್ನ 12.30ಕ್ಕೆ ಪಂಪಾ ತಲುಪಲಿದೆ. ಪಂಪಾ ಗಣಪತಿ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ಇರಿಸಲಾಗುವುದು.
ಸಂಜೆ 3ಕ್ಕೆ ಅಲ್ಲಿಂದ ಹೊರಟು ನೀಲಿಮಲ, ಅಪ್ಪಾಚ್ಚಿಮೇಡ್, ಶಬರಿಪೀಠದ ಮೂಲಕ ಸಂಜೆ 5ಕ್ಕೆ ಶರಂಗುತ್ತಿ ತಲುಪಲಿದೆ. ಹದಿನೆಂಟು ಮೆಟ್ಟಿಲ ಮೂಲಕ ಬರುವ ಮೆರವಣಿಗೆಯನ್ನು ಕೊಡಿ ಮರದ ಬುಡದಲ್ಲಿ ದೇವಸ್ವಂ ಮಂಡಳಿ ಅಧ್ಯಕ್ಷರು, ಸದಸ್ಯರು ಸ್ವಾಗತಿಸುವರು. ದೇಗುಲದ ಮುಂಭಾಗ ತಲುಪಿದಾಗ ತಂತ್ರಿ ಮತ್ತು ಪ್ರಧಾನ ಅರ್ಚಕರು ತಂಗ ಅಂಗಿ ಆಭರಣಗಳನ್ನು ಸ್ಚೀಕರಿಸಿ ಗರ್ಭಗುಡಿಗೆ ಕೊಂಡೊಯ್ದು ಅಯ್ಯಪ್ಪ ಸ್ವಾಮಿಗೆ ತೊಡಿಸುವರು. ಸಂಜೆ 6.30ಕ್ಕೆ ದೀಪಾರಾಧನೆ ಹಾಗೂ ಡಿ.26 ರಂದು ಮಧ್ಯಾಹ್ನ 12.30ಕ್ಕೆ ತಂಗ ಅಂಗಿ ತೊಡಿಸಿ ಮಂಡಲಪೂಜೆ ನೆರವೇರಲಿದೆ.
ರಾತ್ರಿ 11ಕ್ಕೆ ಹರಿವರಾಸನಂ ಗಾಯನದೊಂದಿಗೆ ನಡೆ ಮುಚ್ಚುವುದರೊಂದಿಗೆ ಈ ಬಾರಿಯ ಮಂಡಲ ಕಾಲ ತೀರ್ಥಾಟನೆ ಸಂಪನ್ನಗೊಳ್ಳಲಿದೆ. ಸನ್ನಿಧಾನದಲ್ಲಿ ಸಂಜೆ ನಡೆ ತೆರೆದ ಮೇಲೆ ದೇಗುಲದಲ್ಲಿ ಪೂಜಿಸಿದ ಹೂಮಾಲೆಗಳನ್ನು ತಂಗ ಅಂಗಿಗೆ ಅರ್ಪಿಸಿ ಮೆರವಣಿಗೆಯನ್ನು ಸ್ವಾಗತಿಸುವ ತಂಡವನ್ನು ಶಬರಿಮಲೆ ತಂತ್ರಿಗಳು ಕಳಿಸುವರು. ವಾದ್ಯಗೋಷ್ಠಿ ಮತ್ತು ವಿಶೇಷ ವ್ಯವಸ್ಥೆಗಳೊಂದಿಗೆ ಮೆರವಣಿಗೆ ಸನ್ನಿಧಾನಕ್ಕೆ ಬರಲಿದೆ. ಹದಿನೆಂಟು ಮೆಟ್ಟಿಲ ಮೂಲಕ ಬರುವ ಮೆರವಣಿಗೆಯನ್ನು ಕೊಡಿ ಮರದ ಬುಡದಲ್ಲಿ ದೇವಸ್ವಂ ಮಂಡಳಿ ಅಧ್ಯಕ್ಷರು, ಸದಸ್ಯರು ಸ್ವಾಗತಿಸುವರು. ದೇಗುಲದ ಮುಂಭಾಗ ತಲುಪಿದಾಗ ತಂತ್ರಿ ಮತ್ತು ಪ್ರಧಾನ ಅರ್ಚಕರು ತಂಗ ಅಂಗಿ ಆಭರಣಗಳನ್ನು ಸ್ಚೀಕರಿಸಿ ಗರ್ಭಗುಡಿಗೆ ಕೊಂಡೊಯ್ದು ಅಯ್ಯಪ್ಪ ಸ್ವಾಮಿಗೆ ತೊಡಿಸುವರು.
ಸಂಜೆ 6.30ಕ್ಕೆ ದೀಪಾರಾಧನೆ ಹಾಗೂ ಡಿ.26 ರಂದು ಮಧ್ಯಾಹ್ನ 12.30ಕ್ಕೆ ತಂಗ ಅಂಗಿ ತೊಡಿಸಿ ಮಂಡಲಪೂಜೆ ನೆರವೇರಲಿದೆ. ರಾತ್ರಿ 11ಕ್ಕೆ ಹರಿವರಾಸನಂ ಗಾಯನದೊಂದಿಗೆ ನಡೆ ಮುಚ್ಚುವುದರೊಂದಿಗೆ ಈ ಬಾರಿಯ ಮಂಡಲ ಕಾಲ ತೀರ್ಥಾಟನೆ ಸಂಪನ್ನಗೊಳ್ಳಲಿದೆ. ಮಕರ ಜ್ಯೋತಿ ತೀರ್ಥಾಟನೆಗಾಗಿ ಡಿ.30 ರಂದು ಸಂಜೆ 5ಕ್ಕೆ ದೇಗುಲ ಮತ್ತೆ ತೆರೆಯಲಿದೆ. ಡಿ.31ರ ಮುಂಜಾನೆ 3ರಿಂದ ಮಕರಜ್ಯೋತಿ ಪೂಜೆಗಳು ಆರಂಭವಾಗಲಿದೆ.
Special train run :
ಕ್ರಿಸ್ಮಸ್ ಹಾಗೂ ಶಬರಿಮಲೆ ಸೀಸನ್ ಸಮಯದಲ್ಲಿ ಪ್ರಯಾಣದ ಸಮಸ್ಯೆಗಳನ್ನು ಪರಿಹರಿಸಲು ಕೇರಳಕ್ಕೆ 10 ವಿಶೇಷ ರೈಲುಗಳನ್ನು ಮಂಜೂರು ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಕ್ರಿಸ್ಮಸ್ ಹಬ್ಬ ಹಾಗೂ ಶಬರಿಮಲೆ ಸೀಸನ್ ಗಮನದಲ್ಲಿಟ್ಟುಕೊಂಡು ನಾನಾ ವಲಯಗಳಿಂದ ಒಟ್ಟು 149 ಟ್ರಿಪ್‌ಗಳನ್ನು ಮಂಜೂರು ಮಾಡಲಾಗಿದೆ. ಶಬರಿಮಲೆ ಯಾತ್ರೆಗೆ 416 ವಿಶೇಷ ಟ್ರಿಪ್‌ಗಳನ್ನು ಸಹ ಮಂಜೂರು ಮಾಡಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೇಂದ್ರ ಸಚಿವ ಕುರಿಯನ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಯಾಣದ ಸಂಕಷ್ಟ ಪರಿಹರಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು.