ಬಾಲಿವುಡ್ ತಾರಾ ಜೋಡಿ KIARA ADVANI ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2023ರಲ್ಲಿ ದಾಂಪತ್ಯ ಜೀವನ ಶುರು ಮಾಡಿದ ಇವರು ಇಂದು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಪೋಷಕರಾಗಿ ಬಡ್ತಿ ಪಡೆಯಲಿರುವ ಸೆಲೆಬ್ರಿಟಿ ಕಪಲ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳು, ಹಿತೈಷಿಗಳು ಮತ್ತು ಸಿನಿ ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ.
ರಾಕುಲ್ ಪ್ರೀತ್ ಸಿಂಗ್, ನೀನಾ ಗುಪ್ತಾ, ಸಮಂತಾ ರುತ್ ಪ್ರಭು, ಆಥಿಯಾ ಶೆಟ್ಟಿ ಸೇರಿದಂತೆ ಹಲವರು ಶೀಘ್ರದಲ್ಲೇ ತಂದೆ-ತಾಯಿಯಾಗಲಿರುವ ತಾರಾ ಜೋಡಿಗೆ ಶುಭಕೋರಿದ್ದಾರೆ.
ಸ್ಟಾರ್ ಕಪಲ್ ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಆಕರ್ಷಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಕೈಯಲ್ಲಿ ಬೇಬಿ ಸಾಕ್ಸ್ ಹಿಡಿದ ಫೋಟೋವನ್ನು ಪೋಸ್ಟ್ ಮಾಡಿದ್ದು, “ನಮ್ಮ ಜೀವನದ ಶ್ರೇಷ್ಠ ಕೊಡುಗೆ. ಶೀಘ್ರದಲ್ಲೇ ಬರಲಿದೆ” ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಶೇರ್ಷಾ (Shershaah) ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ನಡುವೆ ಪ್ರೇಮಾಂಕುರವಾಗಿತ್ತು. 2021ರಲ್ಲಿ ಬಿಡುಗಡೆಯಾದ ‘ಶೇರ್ಷಾ’ ಈ ಜೋಡಿ ತೆರೆಹಂಚಿಕೊಂಡ ಚೊಚ್ಚಲ ಚಿತ್ರ.
2022ರಲ್ಲಿ ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ಜನಪ್ರಿಯ ಶೋ ಕಾಫಿ ವಿತ್ ಕರಣ್‌ನಲ್ಲಿ ಸಿದ್ಧಾರ್ಥ್ ಲವ್ ಲೈಫ್ ಬಗ್ಗೆ ಸುಳಿವು ಬಿಟ್ಟುಕೊಟ್ಟರು. “ನಾನು ಉಜ್ವಲ ಮತ್ತು ಸಂತೋಷಕರ ಭವಿಷ್ಯವನ್ನು ಎದುರು ನೋಡುತ್ತಿದ್ದೇನೆ. ಅದು ಅವಳಾಗಿದ್ದರೆ, ಜೀವನ ಉತ್ತಮವಾಗಿರುತ್ತದೆ” ಎಂದು ಹೇಳಿದ್ದರು. ಇಲ್ಲಿ ಕಿಯಾರಾ ಅವರ ಹೆಸರನ್ನು ಉಲ್ಲೇಖಿಸರಿರಲಿಲ್ಲ.
ಆದಾಗ್ಯೂ, ಕಿಯಾರಾ ಅವರು “ಸ್ನೇಹಿತನಿಗಿಂತ ಹೆಚ್ಚು” ಎಂದು ಹೇಳುವ ಮೂಲಕ ಸಂಬಂಧವನ್ನು ಬಹುತೇಕ ಖಚಿತಪಡಿಸಿದರು. ನಂತರ, 2023ರ ಫೆಬ್ರವರಿ 7ರಂದು ಅದ್ಧೂರಿಯಾಗಿ ಹಸೆಮಣೆ ಏರಿದರು. ಅದೊಂದು ಡ್ರೀಮೀ ವೆಡ್ಡಿಂಗ್ ಆಗಿತ್ತು.
The couple’s film career:
ಸಿದ್ ಕೊನೆಯದಾಗಿ ರಾಶಿ ಖನ್ನಾ ಮತ್ತು ದಿಶಾ ಪಟಾನಿ ಅವರೊಂದಿಗೆ ‘ಯೋಧ’ ಸಿನಿಮಾದಲ್ಲಿ ಕಾಣಿಸಿಕೊಂಡರು. ಅವರ ಮುಂದಿನ ಪ್ರಾಜೆಕ್ಟ್ ಜಾಹ್ನವಿ ಕಪೂರ್ ಅವರೊಂದಿಗಿದೆ. ದಿನೇಶ್ ವಿಜನ್ ಅವರ ಮುಂಬರುವ ಚಿತ್ರ ‘ಪರಮ ಸುಂದರಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಕಿಯಾರಾ ಇತ್ತೀಚೆಗಷ್ಟೇ ರಾಮ್ ಚರಣ್ ಜೊತೆ ಗೇಮ್ ಚೇಂಜರ್ ಚಿತ್ರದಲ್ಲಿ ಕಾಣಿಸಿಕೊಂಡರು. ಡಾನ್ 3 ಮತ್ತು ವಾರ್ 2 ನಟಿಯ ಮುಂದಿನ ಚಿತ್ರಗಳು. ಅಲ್ಲದೇ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಟಾಕ್ಸಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳೋದು ಬಹುತೇಕ ಪಕ್ಕಾ ಆಗಿದೆ. ಶೂಟಿಂಗ್ ಲೊಕೇಶನ್ನಲ್ಲಿ ಯಶ್ ಹಾಗೂ ಕಿಯಾರಾ ಕಾಣಿಸಿಕೊಂಡಿದ್ದ ವೀಡಿಯೊ ಕೆಲ ಸಮಯದ ಹಿಂದೆ ವೈರಲ್ ಆಗಿತ್ತು. ಅಭಿಮಾನಿಗಳು ಅಧಿಕೃತ ಘೋಷಣೆಯನ್ನು ನಿರೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: Poco M7 5G Launch Date Confirmed In India: Everything We Know About The Budget Smartphone