Hyderabad News:
ಸಿಸಿಎಲ್ ಹಿನ್ನೆಲೆ ಹೈದರಾಬಾದ್ಗೆ ತೆರಳಿರುವ ನಟ KICCHA SUDEEP ತಮ್ಮ ತಂಡದ ಆಟಗಾರರೊಂದಿಗೆ ಮೆಟ್ರೋದಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ತಲುಪಿದರು. 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆಯುತ್ತಿದ್ದು, ಕರ್ನಾಟಕ ಬುಲ್ಡೋಜರ್ ತಂಡದ ನಾಯಕನಾಗಿ KICCHA SUDEEP ಇದ್ದಾರೆ.
ನಾಳೆ (ಫೆಬ್ರವರಿ 14) ಕರ್ನಾಟಕ ತಂಡ ಚೆನ್ನೈನ ರೈನೊಸ್ ತಂಡವನ್ನು ಎದುರಿಸಲಿದೆ. ಜೊತೆಗೆ ಫೆಬ್ರವರ 15ರಂದು ತೆಲುಗು ವಾರಿಯರ್ಸ್ ಮತ್ತು ಚೆನ್ನೈ ರೈನೋಸ್ ತಂಡ ಕೂಡ ಸೆಣಸಲಿದ್ದು, ಇದಕ್ಕಾಗಿ ಸ್ಟೇಡಿಯಂ ಮುಂದೆ ಬಿಗಿ ಪೊಲೀಸ್ ಭದ್ರತೆ ಕೂಡ ಮಾಡಲಾಗಿದೆ.
KICCHA SUDEEP ಹೈದರಾಬಾದ್ ಹೈದರಾಬಾದ್ನ ಮೆಟ್ರೋದಲ್ಲಿ ಪ್ರಯಾಣ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL)ಗಾಗಿ ಹೈದರಾಬಾದ್ಗೆ ತೆರಳಿದ ಅವರು ತಮ್ಮ ತಂಡದ ಸದಸ್ಯರೊಂದಿಗೆ ಉಪ್ಪಾಳ್ ಸ್ಟೇಡಿಯಂಗೆ ಮೆಟ್ರೋದಲ್ಲಿ ಬುಧವಾರ ಸಂಜೆ ಪ್ರಯಾಣಿಸಿದರು.
ಈ ವೇಳೆ ತಮ್ಮ ನೆಚ್ಚಿನ ನಟನನ್ನು ಕಂಡ ಅನೇಕ ಅಭಿಮಾನಿಗಳು ಮತ್ತು ಮೆಟ್ರೋ ಸಿಬ್ಬಂದಿಗಳು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಸಾಮಾನ್ಯ ಜನರಂತೆ ಮೆಟ್ರೋದಲ್ಲಿ ಪ್ರಯಾಣಿಸಿದ ಸುದೀಪ್ ಅವರ ನಡೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
Victory for Karnataka team:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯನಲ್ಲಿ ಫೆಬ್ರವರಿ 8ರಂದು ಕರ್ನಾಟಕ ಬುಲ್ಡೋಜರ್ ಮತ್ತು ತೆಲುಗು ವಾರಿಯರ್ ನಡುವೆ ಪಂದ್ಯ ನಡೆದಿದ್ದು, ಇದರಲ್ಲಿ ತೆಲುಗು ತಂಡ 46 ರನ್ಗಳಿಂದ ಸೋಲು ಕಂಡಿತು. ತೆಲುಗು ವಾರಿಯರ್ ತಂಡದ ನೇತೃತ್ವವನ್ನು ಅಕ್ಕಿನೇನಿ ಅಖಿಲ್ ವಹಿಸಿದ್ದರೆ, ಕರ್ನಾಟಕ ತಂಡಕ್ಕೆ ಸುದೀಪ್ ಸಾರಥ್ಯವಿದೆ.
ಮೆಟ್ರೋದಲ್ಲಿ ಇವರನ್ನು ಕಂಡ ಸಹ ಪ್ರಯಾಣಿಕರು ಸುದೀಪ್ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ ಅವರ ಸರಳತೆಗೆ ಮನಸೋತರು. ತೆಲುಗಿನ ‘ಈಗಾ’ ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಬಹುಭಾಷಾ ನಟ ಸುದೀಪ್ ತೆಲುಗು ನಾಡಿನಲ್ಲಿಯೂ ತಮ್ಮದೇ ಆದ ಅಭಿಮಾನ ಬಳಗ ಹೊಂದಿದ್ದಾರೆ.
Tight security for CCL:
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮ್ಯಾಚ್ಗೆ ಜನರು ತಮ್ಮ ನೆಚ್ಚಿನ ನಟರನ್ನು ಕಣ್ತುಂಬಿಕೊಳ್ಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಉಪ್ಪಾಳ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಮ್ಯಾಚ್ಗಳು ನಡೆಯಲಿದೆ. ಈ ನಿಟ್ಟಿನಲ್ಲಿ ಬಿಗಿ ಭದ್ರತೆ ನಡೆಸಲಾಗಿದೆ.
ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತರು ಸಿಸಿಎಲ್ ಮ್ಯಾಚ್ಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ನಡೆಸಲು ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಮ್ಯಾಚ್ನಲ್ಲಿ ಪ್ರತಿಯೊಬ್ಬರ ಚಲನವನದ ಮೇಲೂ ಕಣ್ಣಿಡಲಾಗಿದೆ. ಹಾಗೇ ವಾಹನ ಪಾರ್ಕಿಂಗ್ಗೆ ವ್ಯವಸ್ಥೆ ನಡೆಸಲಾಗಿದೆ ಎಂದರು.
ಇದನ್ನು ಓದಿರಿ : JK Govt Issues Bid For Golden Card Scheme Insurer With Curtailed Surgeries, Decreased Budget