Sudeep News :
ಕನ್ನಡ ಚಿತ್ರರಂಗದ ಬಹುಬೇಡಿಕೆಯ KICHCHA SUDEEP ಚಿತ್ರರಂಗ ಪ್ರವೇಶಿಸಿ 29 ವರ್ಷಗಳಾಗಿವೆ. ಅಭಿಮಾನಿ ಬಳಗ ಕೂಡಾ ಲೆಕ್ಕಕ್ಕೆ ಸಿಗದಷ್ಟಿದೆ. ಹೀಗೆ, ತಮ್ಮ ನಡೆ, ನುಡಿ, ನಟನಾ ಪ್ರತಿಭೆ ಮೂಲಕ ಸದಾ ಚರ್ಚೆಯ ವಿಷಯವಾಗಿರುವ KICHCHA SUDEEP ಚಿತ್ರರಂಗ ಪ್ರವೇಶಿಸಿ 29 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮನದುಂಬಿ ಮಾತನಾಡಿದ್ದಾರೆ.
KICHCHA SUDEEP. ಚಂದನವನ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ವಿಭಿನ್ನ ಸ್ಟಾರ್ಡಮ್ ಹೊಂದಿರುವ ಸೂಪರ್ ಸ್ಟಾರ್. ಅಭಿನಯ ಚಕ್ರವರ್ತಿ ಎಂಬ ಬಿರುದೇ ಸಾಕು ಇವರ ಮುನ್ನುಡಿಗೆ. ಕರುನಾಡಿನಲ್ಲಿ ಮನೆ ಮನೆ ಮಾತಾಗಿರುವ ಇವರ ವರ್ಚಸ್ಸು ವರ್ಣನಾತೀತ.
Kichcha Sudeep X Post:
”29 ವರ್ಷಗಳು, ನನ್ನೀ ಪ್ರಯಾಣಕ್ಕೆ ಕೃತಜ್ಞನಾಗಿದ್ದೇನೆ. ಪ್ರೇಕ್ಷಕರನ್ನು ಮನರಂಜಿಸುವುದು ಮತ್ತು ಅನೇಕರೊಂದಿಗೆ ಪ್ರತಿಧ್ವನಿಸುವ ಕಥೆಗಳನ್ನು ಹಂಚಿಕೊಳ್ಳುವುದು ಒಂದು ಗೌರವಕರ ಕ್ಷಣ. ನಿಮ್ಮೆಲ್ಲರಿಂದ ನನಗೆ ದೊರೆತ ಪ್ರೀತಿ ಮತ್ತು ಬೆಂಬಲವು ನಿರಂತರ ಪ್ರೇರಣೆಯ ಮೂಲ. ನನ್ನ ಕೆಲಸ ಅಂಥ ಸಮರ್ಪಿತ ಅಭಿಮಾನಿಗಳನ್ನು ಹೊಂದಿರುವುದು ನಿಜವಾಗಿಯೂ ಸೌಭಾಗ್ಯ. ನಿಮ್ಮ ಅಚಲ ಪ್ರೋತ್ಸಾಹ ಪ್ರತೀ ಸವಾಲನ್ನು ಸಾರ್ಥಕಗೊಳಿಸಿದೆ. ಅದು ನನಗೆ ಎಷ್ಟು ಅರ್ಥಪೂರ್ಣ ಎಂಬುದನ್ನು ವ್ಯಕ್ತಪಡಿಸಲು ಪದಗಳಿಲ್ಲ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಹೃದಯತುಂಬಿ “ಧನ್ಯವಾದಗಳು” ಎಂದು ನಾನು ಹೇಳಬಲ್ಲೆ” ಎಂದು KICHCHA SUDEEP ಬರೆದುಕೊಂಡಿದ್ದಾರೆ.
Not just acting…:
ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕ, ಸ್ಕ್ರೀನ್ರೈಟರ್, ನಿರೂಪಕ, ಗಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಬ್ಲಾಕ್ಬಸ್ಟರ್ ಸಿನಿಮಾಗಳ ಜೊತೆಗೆ ಬಿಗ್ ಬಾಸ್ ಸಾರಥಿ ಎಂದೇ KICHCHA SUDEEP ಜನಪ್ರಿಯರಾಗಿದ್ದಾರೆ. 29 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಒದಗಿಸುತ್ತಾ ಬಂದಿರುವ ಅಭಿನಯ ಚಕ್ರವರ್ತಿ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸುವ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ಸದ್ದು ಮಾಡಿದ್ದಾರೆ.
KICHCHA SUDEEP 1997ರಲ್ಲಿ ತಾಯವ್ವ ಸಿನಿಮಾ ಮೂಲಕ ಸಿನಿಪಯಣ ಆರಂಭಿಸಿದ ಸುದೀಪ್ ನಂತರ ಸ್ಪರ್ಶ ಸಿನಿಮಾದಲ್ಲಿ ಕೆಲಸ ಮಾಡಿದ್ರು. 2001ರಲ್ಲಿ ಬಂದ ಹುಚ್ಚ ಸಿನಿಮಾ ಕಿಚ್ಚನ ವೃತ್ತಿಜೀವನದಲ್ಲೇ ದೊಡ್ಡ ಮೈಲಿಗಲ್ಲಾಯಿತು. ನಂತರ ನಟ ಹಿಂತಿರುಗಿ ನೋಡಲೇ ಇಲ್ಲ.
ನಂದಿ, ಕಿಚ್ಚ, ಸ್ವಾತಿ ಮುತ್ತು, ಮೈ ಆಟೋಗ್ರಾಫ್, ಶಾಂತಿ ನಿವಾಸ, ಮುಸ್ಸಂಜೆ ಮಾತು, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ವಿಷ್ಣುವರ್ಧನ, ಕೆಂಪೇಗೌಡ, ಈಗ, ಮಾಣಿಕ್ಯ, ರನ್ನ, ಕೋಟಿಗೊಬ್ಬ 2, ಹೆಬ್ಬುಲಿ, ದಿ ವಿಲೆನ್, ವಿಕ್ರಾಂತ್ ರೋಣ ಹೀಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕೊನೆಯದಾಗಿ, 2024ರ ಡಿಸೆಂಬರ್ನಲ್ಲಿ ಬಿಡುಗಡೆ ಆದ ‘ಮ್ಯಾಕ್ಸ್’ ಸೂಪರ್ ಹಿಟ್ ಆಗಿದ್ದು, ನಟನ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.
A talent that has risen to the top through ups and downs:
1996ರ ಜನವರಿ 31ರಂದು ಕಂಠೀರವ ಸ್ಟುಡಿಯೋದಲ್ಲಿ ‘ಬ್ರಹ್ಮ’ ಸಿನಿಮಾ ಮೂಲಕ KICHCHA SUDEEP ಸಿನಿಪಯಣ ಶುರುವಾಯಿತು. ಬ್ರಹ್ಮ ಸಿನಿಮಾದಲ್ಲಿ ಕೆಲಸ ಮಾಡಿದ್ರೂ ಆ ಪ್ರಾಜೆಕ್ಟ್ ಪೂರ್ಣಗೊಳ್ಳಲಿಲ್ಲ. ನಂತರ ತಾಯವ್ವ ಸಿನಿಮಾ ಬಿಡುಗಡೆ ಆಯಿತು. ಇನ್ನೊಂದು ವರ್ಷ ಕಳೆದರೆ ಸುದೀಪ್ ಸಿನಿರಂಗದಲ್ಲಿ 3 ದಶಕ ಪೂರೈಸಲಿದ್ದಾರೆ. ಇವರ ಸಿನಿಪಯಣವೇನೂ ಅಷ್ಟು ಸುಲಭವಿರಲಿಲ್ಲ.
ಏರಿಳಿತ ಕಂಡೇ ಶಿಖರ ಏರಿದ ಪ್ರತಿಭೆ. ತಮ್ಮ ಅಮೋಘ ಅಭಿನಯ, ವಾಕ್ಚಾತುರ್ಯ, ಸಮಾಜ ಸೇವೆ, ವರ್ಚಸ್ಸಿನಿಂದ ಕೋಟ್ಯಂತರ ಕಟ್ಟಾ ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿ ಆಗಿದ್ದಾರೆ ಕಿಚ್ಚ.
ಇದನ್ನು ಓದಿರಿ : TRIBUTE TO MAHATMA GANDHI : ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಗೌರವ ನಮನ