spot_img
spot_img

ನಂದಿನಿ ದೋಸೆ ಹಿಟ್ಟು ಬಿಡುಗಡೆ ನಿರ್ಧಾರ ಹಿಂಪಡೆದ ಕೆಎಂಎಫ್‌

spot_img
spot_img

Share post:

ಬೆಂಗಳೂರು: ‘ನಂದಿನಿ’ ಬ್ರ್ಯಾಂಡ್‌ನ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಿರಲು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳ (ಕೆಎಂಎಫ್‌) ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

‘ನಂದಿನಿ’ ಬ್ರ್ಯಾಂಡ್‌ನ ಮೌಲ್ಯ ವೃದ್ಧಿ ಹಾಗೂ ಮಾರುಕಟ್ಟೆ ವಿಸ್ತರಣೆ ನಿಟ್ಟಿನಲ್ಲಿ ಕೆಎಂಎಫ್‌, ನಂದಿನಿ ಹೆಸರಿನಲ್ಲಿ ಮಾರುಕಟ್ಟೆಗೆ ದೋಸೆ ಹಿಟ್ಟು ಪರಿಚಯಿಸಲು ಮುಂದಾಗಿತ್ತು. ಮುಖ್ಯವಾಗಿ ಬೆಂಗಳೂರು ಮಹಾನಗರದ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿತ್ತು.

‘ನಂದಿನಿ’ ಬ್ರ್ಯಾಂಡ್‌ನ ಮೌಲ್ಯ ವೃದ್ಧಿ ಹಾಗೂ ಮಾರುಕಟ್ಟೆ ವಿಸ್ತರಣೆ ನಿಟ್ಟಿನಲ್ಲಿ ಕೆಎಂಎಫ್‌ ನಂದಿನಿ ಹೆಸರಿನಲ್ಲಿ ಮಾರುಕಟ್ಟೆಗೆ ಇಡ್ಲಿ, ದೋಸೆ ಹಿಟ್ಟು ಪರಿಚಯಿಸಲು ಮುಂದಾಗಿತ್ತು. ಅದರಲ್ಲೂ ಮುಖ್ಯವಾಗಿ ಬೆಂಗಳೂರು ಮಹಾನಗರದ ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿತ್ತು. ಆದರೆ ಇದೀಗ ಏಕಾಏಕಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ದೋಸೆ ಹಿಟ್ಟಿನ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ನಂದಿನಿ ಬ್ರ್ಯಾಂಡ್‌ಗೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬಂದಿದೆ.

ಬಾಹ್ಯ ಕಂಪನಿಯು ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ದೋಸೆ ಹಿಟ್ಟು ಉತ್ಪಾದಿಸಿ, ಮಾರಾಟ ಮಾಡಲು ಆಸಕ್ತಿ ತೋರಿತ್ತು. ಆದರೆ, ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶಕ್ಕೆ ಕೆಎಂಎಫ್‌ ಆಡಳಿತ ಮಂಡಳಿಯು ದೋಸೆ ಹಿಟ್ಟಿನ ಮಾರಾಟದ ನಿರ್ಧಾರದಿಂದ ಹಿಂದೆ ಸರಿದಿದೆ.

“ದೋಸೆ ಹಿಟ್ಟಿನ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ನಂದಿನಿ ಬ್ರ್ಯಾಂಡ್‌ಗೆ ಕೆಟ್ಟ ಹೆಸರು ಬರುತ್ತದೆ. ಇದು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕವಿದೆ.

ಈ ಕಾರಣಕ್ಕೆ ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ,” ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ತಿಳಿಸಿದ್ದಾರೆ.

ಇದೇ ವೇಳೆ ದೇಶದ ರಾಜಧಾನಿ ಹೊಸದಿಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ರಾಜ್ಯದ ‘ನಂದಿನಿ’ ಹಾಲಿನ ವಹಿವಾಟಿಗೆ ಉತ್ತರ ಭಾರತದ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್‌ಗಳು ಅಡ್ಡಗಾಲು ಹಾಕಿವೆ. ನಂದಿನಿ ಹಾಲು ಸ್ಥಳೀಯ ಗ್ರಾಹಕರ ಕೈಸೇರದಂತೆ ವ್ಯವಸ್ಥಿತ ಪಿತೂರಿ ನಡೆಸಿವೆ.

ದೇಶದ ಸಹಕಾರಿ ಹೈನು ಉದ್ಯಮದಲ್ಲಿ ಗುಜರಾತ್‌ನ ಅಮುಲ್‌ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ನಂದಿನಿ ಇದೆ. ಈಗಾಗಲೇ ನಂದಿನಿ ವಿದೇಶಕ್ಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೂ ತನ್ನ ವಹಿವಾಟು ವಿಸ್ತರಿಸಿದೆ.

ಗುಜರಾತ್‌ ಹಾಗೂ ಅಕ್ಕಪಕ್ಕದ ರಾಜ್ಯಗಳ ಹಾಲು ಒಕ್ಕೂಟಗಳು ರಾಜಧಾನಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚಿನ ಪ್ರಾಬಲ್ಯ ಸಾಧಿಸಿವೆ. ಈ ಮಧ್ಯೆ, ಕೆಎಂಎಫ್‌ ನವೆಂಬರ್‌ 21ರಂದು ಹೊಸದಿಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಆರಂಭಿಸಿದೆ.

ರಾಜ್ಯದಲ್ಲಿ ದೈನಂದಿನ ಹಾಲಿನ ಸಂಗ್ರಹಣೆ ಪ್ರಮಾಣ ಕೋಟಿ ಲೀಟರ್‌ನ ಗಡಿ ದಾಟಿದ್ದು, ನಿರೀಕ್ಷೆಗೂ ಮೀರಿ ಹಾಲು ಸಂಗ್ರಹಣೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್‌, ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ಹೊಸದಿಲ್ಲಿಯಲ್ಲೂ ಹಾಲಿನ ವಹಿವಾಟು ಆರಂಭಿಸಿತ್ತು.

ಕೆಎಂಎಫ್‌ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಉತ್ತರ ಭಾರತದ ಹಾಲು ಒಕ್ಕೂಟಗಳು ಕರುನಾಡಿನ ನಂದಿನಿ ಹಾಲಿನ ಮಾರಾಟಕ್ಕೆ ತೆರೆಮರೆಯಲ್ಲೇ ತಡೆಯೊಡ್ಡಲಾರಂಭಿಸಿವೆ.

ಮಂಡ್ಯ ಒಕ್ಕೂಟದಿಂದ ಹೊಸದಿಲ್ಲಿ, ಹರಿಯಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಆರಂಭಿಕ ಹಂತದಲ್ಲಿ ಟ್ಯಾಂಕರ್‌ಗಳ ಮೂಲಕ 2.50 ಲಕ್ಷ ಲೀ. ಹಾಲು ಕಳುಹಿಸಲಾಗುತ್ತಿದೆ. ಹೊಸದಿಲ್ಲಿ ಹೊರವಲಯದಲ್ಲಿ ನಂದಿನಿ ಹಾಲನ್ನು ಪ್ಯಾಕ್‌ ಮಾಡಿ ಸ್ಥಳೀಯ ಡೀಲರ್‌ಗಳ ಮೂಲಕ ಮಾರಾಟ ಮಾಡಿಸಲಾಗುತ್ತಿದೆ.

ಇದರಿಂದ ವಹಿವಾಟು ಕುಸಿಯುವ ಭೀತಿ ಎದುರಿಸುತ್ತಿರುವ ಆ ಭಾಗದ ಹಾಲು ಒಕ್ಕೂಟಗಳು, ತಾವೇ ಸ್ಥಳೀಯ ಡೀಲರ್‌ಗಳಿಂದ ನಂದಿನಿ ಹಾಲನ್ನು ಖರೀದಿಸುತ್ತಿವೆ. ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್‌ನ ಒಕ್ಕೂಟವೊಂದು ನಂದಿನಿ ಹಾಲಿನ ಖರೀದಿ ಉದ್ದೇಶಕ್ಕಾಗಿಯೇ ಹೊಸದಿಲ್ಲಿ ಹಾಗೂ ಸುತ್ತಮುತ್ತ 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದ್ದು, ಆ ಸಿಬ್ಬಂದಿ ಪ್ರತಿನಿತ್ಯ ನಂದಿನಿ ಹಾಲಿನ ಪ್ಯಾಕೆಟ್‌ಗಳನ್ನು ಖರೀದಿಸಿ, ರಸ್ತೆಗೆ ಚೆಲ್ಲುತ್ತಿದ್ದಾರೆ.

ಗುಜರಾತ್‌ ಹಾಗೂ ಅಕ್ಕಪಕ್ಕದ ರಾಜ್ಯಗಳ ಹಾಲು ಒಕ್ಕೂಟಗಳ ಷಡ್ಯಂತ್ರ ತಿಳಿದ ಕೆಎಂಎಫ್‌, ಅಧಿಕಾರಿಗಳ ತಂಡವೊಂದನ್ನು ಹೊಸದಿಲ್ಲಿಗೆ ಕಳುಹಿಸಿದೆ. ಹೊಸದಿಲ್ಲಿಯಲ್ಲೇ ಬೀಡು ಬಿಟ್ಟಿರುವ ಕೆಎಂಎಫ್‌ ಮಾರುಕಟ್ಟೆ ವಿಭಾಗದ ಅಧಿಕಾರಿಗಳು, ಸ್ಥಳೀಯ ಡೀಲರ್‌ಗಳನ್ನು ಭೇಟಿಯಾಗಿದ್ದು, ನಂದಿನಿ ಹಾಲಿನ ವಹಿವಾಟಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...