spot_img
spot_img

ಚಳಿಗೆ ನಡಗುತ್ತಿದೆ ಕೋಟೆ ನಾಡು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬಾಗಲಕೋಟೆ: ವರ್ಷವಿಡಿ ಬೇಸಿಗೆಯಲ್ಲಿ ಕಳೆಯುವ ಜಿಲ್ಲೆಯ ಜನರಿಗೆ ಚಳಿಗಾಲ ಖುಷಿ ಕೊಟ್ಟಿದೆ. ಒಂದೆರಡು ತಿಂಗಳಾದರೂ ಸೆಕೆಯ ಕಾಟವಿಲ್ಲ ಎನ್ನುವ ನಿರಾಳತೆ. ಜಿಲ್ಲೆಯಲ್ಲಿ ತಾಪಮಾನ ಗರಿಷ್ಠ 29 ರಷ್ಟಿದ್ದರೆ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರು ಬೆಳಗ್ಗೆ 4 ರಿಂದ ಬೆಳಗ್ಗೆ 8 ಗಂಟೆಯವರೆಗಿನ ಚಳಿಯ ತೀವ್ರತೆಯಿಂದ ಬೆಚ್ಚಗಿರುವಂತೆ ಸೂಚಿಸಿದ್ದಾರೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಆವರಿಸುವ ಚಳಿ, ನೆತ್ತಿಗೆ ಬಿಸಿಲು ತಾಕಿದರೂ ಕಣ್ಣು ಹಾಯಿಸಿದಲ್ಲೆಲ್ಲ ಮಂಜು !.

ಕಳೆದ ಒಂದು ವಾರದಿಂದ ಜಿಲ್ಲೆಯ ಅನುಭವಿಸುತ್ತಿರುವ ಚಳಿಯ ವಾತಾವರಣವಿದು. ನವೆಂಬರ್‌ ಅಂತ್ಯಕ್ಕೆ ಆವರಿಸುತ್ತಿರುವ ಚಳಿ ಬಿಸಿಲಿಗೆ ಬೆವರು ಕೋಟೆಯ ನಾಡಿಗೆ ಅಕ್ಷರಶ: ತಣ್ಣನೆಯ ಹಿತಾನುಭವ ನೀಡಿದೆ.
ಬಾಗಲಕೋಟೆ ನಗರದ ಹಿನ್ನೀರು ಆವರಿಸಿರುವ ಪಾರಖನಾಥ ದೇವಸ್ಥಾನ, ಸಿಮೆಂಟ್‌ ಕ್ವಾರಿ ಸುತ್ತೆಲ್ಲ ಮಟ ಮಟ ಮಧ್ಯಾಹ್ನವೂ ಮಂಜು ಕಾಣಿಸುತ್ತದೆ.

ದೂರದಲ್ಲಿ ಕಾಣುತ್ತಿದ್ದ ಸಾಳಗುಂದಿ, ಕದಾಂಪೂರ ಗ್ರಾಮಗಳು ಮಂಜಿನ ಮುಸುಕಿಗೆ ಮಂದವಾಗಿ ಕಾಣುತ್ತವೆ. ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಬೆಳಗ್ಗೆ ಹೊರಟರೆ ಹಚ್ಚ ಹಸಿರು ಆವರಿಸಿರುವ ಗಿಡಗಳ ಮಧ್ಯೆ ಮಂಜು ಇಣುಕುತ್ತದೆ. ಅನಗವಾಡಿಯ ಘಟಪ್ರಭಾ ನದಿ ಸೇತುವೆ, ಜಮಖಂಡಿಯ ಕೋಟೆ ಕೆರೆಗಳ ಪಕ್ಕದಲ್ಲಿ ನಿಂತರೆ ಮಂಜಿನ ರಾಶಿ.

ಬೆಳಗ್ಗೆಯಿಂದ ಮಫ್ಲರ್‌, ಮಂಕಿ ಕ್ಯಾಪ್‌, ಸ್ವೆಟರ್‌, ಪುಲ್‌ ಓವರ್‌ ಹಾಕಿಕೊಂಡು ಓಡಾಡುವ ಜನ ಮಧ್ಯಾಹ್ನದವರೆಗೂ ಚಳಿ ಅನುಭವಿಸುತ್ತಾರೆ. ಗಡ ಗಡ ನಡುಗಿಸುವ ಚಳಿಯಲ್ಲಿ ಚಹಾ ಕುಡಿಯುವ ಮಜಾ. ಇನ್ನು ಯುವಕ, ಯುವತಿಯರ ಪಡೆ, ಜೋಡಿಗಳು ಬೆಳಗ್ಗೆ ಬೈಕ್‌ನಲ್ಲಿ ಲಾಂಗ್‌ ರೈಡ್‌ ಹೋಗುವ ದೃಶ್ಯ ಸಾಮಾನ್ಯ. ಸಂಜೆಯಾಗುತ್ತಿದ್ದಂತೆ ಆವರಿಸುವ ಚಳಿ ರಾತ್ರಿ ಹೆಚ್ಚಾಗುತ್ತದೆ. ಮನೆಗಳಲ್ಲಿ ಫ್ಯಾನ್‌ ಕೂಡ ಅಗತ್ಯವಿಲ್ಲ ಎನ್ನುವಷ್ಟು ಚಳಿ ಈ ಬಾರಿ ಆವರಿಸಿದೆ.

ಸಾಮಾನ್ಯವಾಗಿ ವರ್ಷವಿಡಿ ಬೇಸಿಗೆಯಲ್ಲಿ ಕಳೆಯುವ ಜಿಲ್ಲೆಯ ಜನರಿಗೆ ಚಳಿಗಾಲ ಖುಷಿ ಕೊಟ್ಟಿದೆ. ಒಂದೆರಡು ತಿಂಗಳಾದರೂ ಸೆಕೆಯ ಕಾಟವಿಲ್ಲ ಎನ್ನುವ ನಿರಾಳತೆ. ಜಿಲ್ಲೆಯಲ್ಲಿ ತಾಪಮಾನ ಗರಿಷ್ಠ 29 ರಷ್ಟಿದ್ದರೆ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

ತಾಪಮಾನ ಇನ್ನೂ ಕುಸಿದರೆ ಚಳಿ ತೀವ್ರವಾಗಲಿದೆ. ಕಳೆದ ವರ್ಷ ಭಾರಿ ಮಳೆಯಾಗದ ಕಾರಣ ಚಳಿ ಹೇಳಿಕೊಳ್ಳುವಂತಿರಲಿಲ್ಲ. ಈ ವರ್ಷ ಭರ್ತಿ ಮಳೆಯಾಗಿರುವ ಕಾರಣ ಚಳಿಯ ತೀವ್ರತೆ ಹೆಚ್ಚಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ತಾಪಮಾನ ಇನ್ನೂ ಕುಸಿಯಲಿದೆ. ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಈ ಬಾರಿ 4 ಡಿಗ್ರಿವರೆಗೆ ತಾಪಮಾನ ಕೆಳಗಿಳಿಯುವ ಸಾಧ್ಯತೆಯಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಈಗಾಗಲೇ ಚಳಿ ಹೆಚ್ಚಾಗಿದ್ದು, ಡಿಸೆಂಬರ್‌ ಹಾಗೂ ಜನವರಿಯಲ್ಲಿ ಕನಿಷ್ಠ ಉಷ್ಣಾಂಶ 8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್‌ ತನಕ ಕುಸಿಯಬಹುದು ಎಂದು ಹೇಳಲಾಗಿದೆ.

ಲ್ಯಾನಿನೋ ಸ್ಥಿತಿಯಿಂದಾಗಿ ರಾಜ್ಯದಲ್ಲಿಈ ಬಾರಿ ಚಳಿ ಪ್ರಮಾಣ ತೀವ್ರಗೊಳ್ಳಲಿದೆ. ಪೆಸಿಫಿಕ್‌ ಮಹಾಸಾಗರದಲ್ಲಿಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮುನ್ಸೂಚನೆ ಇದ್ದು, ಈ ಪ್ರಕ್ರಿಯೆಯನ್ನೇ ಲ್ಯಾನಿನೋ ಎನ್ನಲಾಗುತ್ತದೆ. ಸಾಮಾನ್ಯವಾಗಿ ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿಲ್ಯಾನಿನೋ ಪರಿಸ್ಥಿತಿ ಉಂಟಾಗಲಿದ್ದು, ಇದು ಜನವರಿ ಹಾಗೂ ಮಾರ್ಚ್ವರೆಗೂ ಮುಂದುವರಿಯಲಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಆಡಲು ಸ್ಪರ್ಧಿಗಳ ಹರಸಾಹಸ

ಕನ್ನಡದ ಬಿಗ್​ಬಾಸ್​ ಸೀಸನ್​ 11ರಲ್ಲಿ ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಸಖತ್​ ಸದ್ದು ಮಾಡುತ್ತಿದ್ದಾರೆ. ತಮ್ಮ ಹಳ್ಳಿ ಸೊಗಡಿನ ರೀತಿಯಲ್ಲೇ ಹಾಡು ಹಾಡಿ ವೀಕ್ಷಕರಿಗೆ ಮನರಂಜನೆ...

ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಕನ್ಯಾಕುಮಾರಿ ಮತ್ತು ಶ್ರೀಲಂಕಾ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮನ್ನಾರ್ ಗಲ್ಫ್...

ಹಿಂದುಳಿದ ವರ್ಗಗಳ ಮೀಸಲಾತಿಗೆ ಆಗ್ರಹ : ಪಂಚಮಸಾಲಿಗರ ಹೋರಾಟ ತೀವ್ರ!

ಬೆಂಗಳೂರು: ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ವಿರೋಧಿಸಿ ಸುವರ್ಣಸೌಧದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಎದುರು ವಿಪಕ್ಷ ನಾಯಕ ಆರ್, ಅಶೋಕ್ ನೇತೃತ್ವದಲ್ಲಿ...

ಆಸ್ತಿ ತೆರಿಗೆ ಕಟ್ಟಲು ನಿರಾಕರಣೆ : ರಸ್ತೆ ಸರಿಪಡಿಸಿದ ಪಂಚಾಯಿತಿ ಸದಸ್ಯರು

ಬೆಂಗಳೂರು: ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂಬ ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ...