Prayagraj, Uttar Pradesh News:
ಈ ಬಾರಿಯ KUMBH MELA ದಲ್ಲಿ ಜನದಟ್ಟಣೆ ನಿಯಂತ್ರಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಲಾಗಿದೆ.ಇಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾವೇಶವಾಗಿರುವ KUMBH MELA ದಲ್ಲಿ ಕಾಲ್ತುಳಿತದಂಥ ಘಟನೆಗಳನ್ನು ತಡೆಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.ಆದರೆ, ದೊಡ್ಡ ಪ್ರಮಾಣದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಾಲ್ತುಳಿತ ಉಂಟಾಗುವುದು ಭಾರತದ ಧಾರ್ಮಿಕ ಉತ್ಸವಗಳ ಆಚರಣೆಯಲ್ಲಿ ಕಪ್ಪು ಚುಕ್ಕೆಯಾಗಿದೆ.
ಸೋಮವಾರ ಪ್ರಾರಂಭವಾದ ಮತ್ತು ಮುಂದಿನ ಆರು ವಾರಗಳ ಕಾಲ ನಡೆಯುವ ಹಿಂದೂ ಭಕ್ತಿ ಮತ್ತು ಧಾರ್ಮಿಕ ಸ್ನಾನದ ಸಹಸ್ರಮಾನಗಳಷ್ಟು ಹಳೆಯ ಪವಿತ್ರ ಪ್ರದರ್ಶನವಾದ KUMBH MELA ಕ್ಕೆ 400 ಮಿಲಿಯನ್ ಯಾತ್ರಾರ್ಥಿಗಳು ಭೇಟಿ ನೀಡಬಹುದು ಎಂದು ಸಂಘಟಕರು ಅಂದಾಜಿಸಿದ್ದಾರೆ.
“ಸೂಕ್ಷ್ಮ ಸ್ಥಳಗಳಲ್ಲಿ ಏಕಕಾಲಕ್ಕೆ ದೊಡ್ಡ ಮಟ್ಟದ ಜನಸಂದಣಿ ಉಂಟಾಗುವುದನ್ನು ತಡೆಯಲು ಎಐ ನಮಗೆ ಸಹಾಯ ಮಾಡುತ್ತಿದೆ.” ಎಂದು ಅವರು ತಿಳಿಸಿದರು.”ಪ್ರತಿಯೊಬ್ಬರೂ ತಮ್ಮ ಆಧ್ಯಾತ್ಮಿಕ ಕರ್ತವ್ಯಗಳನ್ನು ಪೂರೈಸಿದ ನಂತರ ಸಂತೋಷದಿಂದ ಮನೆಗೆ ಮರಳಬೇಕೆಂದು ನಾವು ಬಯಸುತ್ತೇವೆ” ಎಂದು ಉತ್ಸವದಲ್ಲಿ ಟೆಕ್ ಕಾರ್ಯಾಚರಣೆಗಳ ನೇತೃತ್ವ ವಹಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಎಎಫ್ಪಿಗೆ ತಿಳಿಸಿದರು.
A stampede took place in 1954: 1954ರ KUMBH MELA ದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಒಂದೇ ದಿನ 400 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಇದು ಜಾಗತಿಕವಾಗಿ ಜನಸಂದಣಿ ಸಂಬಂಧಿತ ದುರಂತದಲ್ಲಿ ಅತಿದೊಡ್ಡ ಸಾವು – ನೋವುಗಳಲ್ಲಿ ಒಂದಾಗಿದೆ. ಈ ಹಿಂದೆ 2013ರಲ್ಲಿ ಪ್ರಯಾಗ ರಾಜ್ ನಗರದಲ್ಲಿ ಕೊನೆಯ ಬಾರಿಗೆ KUMBH MELA ನಡೆದಿತ್ತು.
ಉತ್ಸವದ ಸ್ಥಳದಲ್ಲಿ ಮತ್ತು ವಿಶಾಲವಾದ ಶಿಬಿರಕ್ಕೆ ಹೋಗುವ ರಸ್ತೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧರಿತ 300 ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆದರೆ, ಈ ಬಾರಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿರುವುದರಿಂದ ಜನಸಂದಣಿಯ ಗಾತ್ರಗಳ ನಿಖರವಾದ ಅಂದಾಜುಗಳನ್ನು ಸಂಗ್ರಹಿಸಲು ಸಹಾಯಕವಾಗಲಿದೆ ಹಾಗೂ ಸಂಭಾವ್ಯ ಸಮಸ್ಯೆಗೆ ಉತ್ತಮವಾಗಿ ಸಿದ್ಧರಾಗಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಂಗಾ ಮತ್ತು ಯಮುನಾ ನದಿಗಳ ಸಂಗಮದಲ್ಲಿರುವ ಉತ್ಸವದ ಆಧ್ಯಾತ್ಮಿಕ ಕೇಂದ್ರದಿಂದ ಸ್ವಲ್ಪವೇ ದೂರದಲ್ಲಿರುವ ಈ ಜಾಲವನ್ನು ಪೊಲೀಸ್ ಅಧಿಕಾರಿಗಳು ಮತ್ತು ತಂತ್ರಜ್ಞರ ಸಣ್ಣ ತಂಡವೊಂದು ಕಮಾಂಡ್ ಮತ್ತು ನಿಯಂತ್ರಣ ಕೊಠಡಿಯಲ್ಲಿ ಮೇಲ್ವಿಚಾರಣೆ ಮಾಡುತ್ತಿದೆ.”ವಿವಿಧ ಒಳಹರಿವುಗಳಲ್ಲಿ ಜನರ ಸಂಚಾರ, ಜನಸಂದಣಿ ಸಾಂದ್ರತೆಯನ್ನು ಪತ್ತೆಹಚ್ಚಲು ನಾವು ಎಐ ಅನ್ನು ಬಳಸುತ್ತಿದ್ದೇವೆ.
ಈ ಎಲ್ಲ ಮಾಹಿತಿಗಳನ್ನು ಸೇರಿಸುತ್ತೇವೆ ಮತ್ತು ನಂತರ ಅಲ್ಲಿಂದ ಇಂಟರ್ ಪೋಲ್ ಮಾಡುತ್ತೇವೆ. ಜನಸಂದಣಿಯು ಅಪಾಯದ ಮಟ್ಟಕ್ಕೆ ಹೆಚ್ಚಾಗುತ್ತಿದ್ದರೆ ಈ ವ್ಯವಸ್ಥೆಯು ಎಚ್ಚರಿಕೆ ನೀಡುತ್ತದೆ.” ಎಂದು ಕುಮಾರ್ ಮಾಹಿತಿ ನೀಡಿದರು.”ನಾವು ಇಲ್ಲಿಂದ ಇಡೀ KUMBH MELA ವನ್ನು ನೋಡಬಹುದು. ಕ್ಯಾಮೆರಾಗಳ ಮೂಲಕ ನಾವು ಸಂಪೂರ್ಣ ದೇಹಗಳನ್ನು ನೋಡಲಾಗದಿದ್ದರೂ ತಲೆ ಅಥವಾ ಮುಂಡಗಳನ್ನು ಬಳಸಿ ಜನಸಂದಣಿಯನ್ನು ಎಣಿಸುತ್ತೇವೆ.
iರೈಲ್ವೆ ಮತ್ತು ಬಸ್ ನಿರ್ವಾಹಕರ ದತ್ತಾಂಶವನ್ನು ಕ್ರಾಸ್ – ಚೆಕ್ ಮಾಡಿ, ಪ್ರತಿ ದಿಕ್ಕಿನಲ್ಲಿಯೂ ಮೈಲುಗಳಷ್ಟು ವಿಸ್ತರಿಸಿರುವ ಜನಸಮೂಹದ ಒಟ್ಟಾರೆ ಅಂದಾಜು ನೀಡುವ ಎಐ ಅಲ್ಗಾರಿದಮ್ಗೆ ಫುಟೇಜ್ ಅನ್ನು ಸೇರಿಸಲಾಗುತ್ತದೆ” ಎಂದು ಕುಮಾರ್ ತಿಳಿಸಿದರು.
ಇದನ್ನು ಓದಿರಿ : TRUMP TAKES VICTORY RALLY : ಟ್ರಂಪ್ ವಿಜಯೋತ್ಸವ; ಇಂದು ಪ್ರಮಾಣ