spot_img
spot_img

LALBAGH FLOWER SHOW : ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ನಡೆದು ಬಂದ ಹಾದಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

ಸಸ್ಯಕಾಶಿಯಲ್ಲಿ ಮೊದಲ ಬಾರಿಗೆ 1836ರಲ್ಲಿ ವಿಲಿಯಂ ಮುನ್ರೋ ನಿರ್ವಹಣೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆದಿತ್ತು. ಈ ಫಲಪುಷ್ಪ ಪ್ರದರ್ಶನದ ಕುರಿತು ಈಟಿವಿ ಭಾರತದ ಪ್ರತಿನಿಧಿ ರಮೇಶ್​ ಬನ್ನಿಕುಪ್ಪೆ ಅವರ ವಿಶೇಷ ವರದಿ.ಉದ್ಯಾನ ನಗರಿ ಎಂತಲೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದ ಸಸ್ಯಕಾಶಿ LALBAGHನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ಪರಿಕಲ್ಪನೆ ಚಿಗುರೊಡೆಯುವುದಕ್ಕೂ ಮುನ್ನ ಸಂಶೋಧನೆಗಾಗಿ ಆರಂಭವಾಗಿ ಮನೋರಂಜನೆಯ ಕೇಂದ್ರವಾಗಿ ಬದಲಾಗಿದೆ.

ಆದರೆ, LALBAGH ಉದ್ಯಾನವನ ತೋಟಗಾರಿಕೆಗೆ ಸಂಬಂಧಿಸಿದ ಸಂಶೋಧನೆಗಳ ಕೇಂದ್ರವಾಗಿತ್ತು.ಸುಮಾರು 200 ವರ್ಷಗಳ ಹಿಂದೆ ಭಾರತವನ್ನು ಬ್ರಿಟೀಷರು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಕೃಷಿ ಅಥವಾ ತೋಟಗಾರಿಕೆ ವಿಶ್ವವಿದ್ಯಾಲಯಗಳೂ ಇರಲಿಲ್ಲ.ಈ ವೀಕ್ಷಣೆಗೆ ಪ್ರಾರಂಭದಲ್ಲಿ ವಿವಿಧ ಭಾಗಗಳಿಂದ ಸಂಶೋಧಕರು, ಸಸ್ಯಶಾಸ್ತ್ರಜ್ಞರು, ವಿದ್ಯಾರ್ಥಿಗಳು ಹರಿದು ಬರುತ್ತಿದ್ದರು.LALBAGHನಲ್ಲಾದ ಸಂಶೋಧನೆಗಳು, ದೇಶ – ವಿದೇಶಗಳಿಂದ ತಂದು ಬೆಳೆದ ಅಪರೂಪದ ಹೂವು – ಹಣ್ಣುಗಳು, ತರಕಾರಿಗಳನ್ನು ಪರಿಚಯಿಸಲು ತೋಟಗಾರಿಕೆ ಪ್ರದರ್ಶನ (ಇಂದಿನ ಫಲಪುಷ್ಪ ಪ್ರದರ್ಶನ)ವೂ ನಡೆದು ಬಂದಿದ್ದು, ಮುಂದುವರೆದು ಇಡೀ ದೇಶದ ಗಮನ ಸೆಳೆಯಿತು.

First performance in 1836: ಸಸ್ಯಕಾಶಿಯಲ್ಲಿ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಶನ ನಡೆದಿದ್ದು 1836ರಲ್ಲಿ. ಅಂದು ಉದ್ಯಾನ ನಿರ್ವಹಣೆ ಮಾಡುತ್ತಿದ್ದವರು ವಿಲಿಯಂ ಮುನ್ರೋ. ಸತತ ನಾಲ್ಕು ವರ್ಷಗಳ ಕಾಲ ಸಾಕಷ್ಟು ಸಂಶೋಧನೆ ನಡೆಸಿ, ಉದ್ಯಾನ ಅಭಿವೃದ್ಧಿಪಡಿಸಿದ್ದರು.

ಆ ವರ್ಷ ಉತ್ತಮ ಪ್ರದರ್ಶನ ಮಾಡಿದ್ದಕ್ಕೆ ಗೌರವಕ್ಕೆ ಪಾತ್ರರಾಗಿದ್ದರು.ಅದಾದ ನಂತರ ಇದರ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಲಂಡನ್‌ನ ಕ್ಯು ರಾಯಲ್ ಬೊಟಾನಿಕಲ್ ಗಾರ್ಡನ್‌ನಿಂದ ವಿಲಿಯಂ ನ್ಯೂ ಎಂಬ ಸಸ್ಯಶಾಸ್ತ್ರಜ್ಞನನ್ನು ಕ್ಯುರೇಟರ್ ಆಗಿ ಮಾಡಿತ್ತು. ಅವರು 1863ರಲ್ಲಿ ಬ್ಯಾಂಡ್‌ಸ್ಟ್ಯಾಂಡ್ ನಿರ್ಮಿಸಿ, ಅದರ ಸುತ್ತಲೂ ಫಲ-ಪುಷ್ಪ ಪ್ರದರ್ಶನ ಏರ್ಪಡಿಸುತ್ತಿದ್ದರು. 1867ರಿಂದ ಕ್ರಮಬದ್ಧವಾಗಿ ಈ ಪ್ರದರ್ಶನ ಆರಂಭವಾಗಿತ್ತು ಎಂಬುದಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಈ ನಡುವೆ ಮದ್ರಾಸ್ ಸರ್ಕಾರವು ಸೈನಿಕರಿಗೆ ಬೇಕಾಗುವ ಹಣ್ಣು-ತರಕಾರಿ ಬೆಳೆಯಲು ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಹ್ಯೂಗ್ ಕ್ಲೆಗಾರ್ನ್ ಎಂಬವರನ್ನು LALBAGHಗೆ ನೇಮಕ ಮಾಡಿತ್ತು. ಅವರು ಲಾಲ್‌ಬಾಗ್‌ನ್ನು ಬೊಟಾನಿಕಲ್ ಗಾರ್ಡನ್ ಆಗಿ ಮೇಲ್ದರ್ಜೆಗೇರಿಸಲು ಶ್ರಮಿಸಿದ್ದರು.

Annual Exhibition: ಅಲ್ಲದೇ, ಅವರು ಕೃಷಿ – ತೋಟಗಾರಿಕಾ ಪ್ರದರ್ಶನ ಸಮಿತಿಯನ್ನೂ ರಚಿಸಿ ಇಂಗ್ಲೆಂಡ್ ಮಾದರಿಯಲ್ಲಿ ಇಲ್ಲಿಯೂ ವಿದೇಶಿ ಜಾತಿಯ ಗಿಡಗಳನ್ನು ಬೆಳೆಸಿ, ಸಂರಕ್ಷಿಸಲು ಮುಂದಾಗಿದ್ದರು. 1889ರಲ್ಲಿ ಮೈಸೂರು ಮಹಾರಾಜ ಚಾಮರಾಜ ಒಡೆಯರು 75 ಸಾವಿರ ಅನುದಾನ ನೀಡಿದರು.

ಅದರಿಂದಲೇ ಈಗಿನ ಗಾಜಿನ ಮನೆ ನಿರ್ಮಾಣವಾಗುತ್ತದೆ.1873-74ರಲ್ಲಿ ಬಂದ ಕ್ಯುರೇಟರ್ ಜಾನ್ ಕ್ಯಾಮರಾನ್ ಈ ಪ್ರದರ್ಶನಕ್ಕೆ ಹೊಸ ಸ್ಪರ್ಶ ನೀಡಿದರು. ಅದು ಕೃಷಿ, ತೋಟಗಾರಿಕೆ, ಗಿಡಮೂಲಿಕೆ, ಆಹಾರ, ಪಶುಸಂಗೋಪನೆ ಸೇರಿದಂತೆ ಸಮಗ್ರವಾದ ದೃಷ್ಟಿಕೋನ ಒಳಗೊಂಡಿತ್ತು.ಅವರು LALBAGHಗೆ ಸೀಮಿತವಾಗಿದ್ದ ಉದ್ಯಾನವನ್ನು ನಗರದ ಪ್ರತಿಷ್ಠಿತರ ಮನೆ ಬಾಗಿಲಿಗೆ ಕೊಂಡೊಯ್ದರು.

ಅಲ್ಲದೇ, ಮೈಸೂರು ಉದ್ಯಾನ ಕಲಾ ಸಂಘ ಪ್ರಾರಂಭವಾಗಿ ಅದರ ಸಹಭಾಗಿತ್ವದಲ್ಲಿ 1912ರಿಂದ ನಿರಂತರವಾಗಿ ಈ ಸಂಘವು ಪ್ರದರ್ಶನ ನಡೆಸಿಕೊಂಡು ಬರುತ್ತಿದೆ.ಈ ಗಾಜಿನ ಮನೆಯಲ್ಲಿ ಉಷ್ಣವಲಯ, ಸಮಶೀತೋಷ್ಣವಲಯದ ಗಿಡಗಳು, ಕಳ್ಳಿಜಾತಿಯ ಗಿಡಗಳು, ಗುಲಾಬಿ, ಔಷಧೀಯ ಸಸ್ಯಗಳು ಹೀಗೆ ವರ್ಗೀಕರಿಸಿ ಪ್ರದರ್ಶನಕ್ಕೆ ಇಡಲಾಗುತ್ತಿತ್ತು. ಈ ರೀತಿಯ ವರ್ಗೀಕರಣ ದೇಶದಲ್ಲಿ ಎಲ್ಲಿಯೂ ಇರಲಿಲ್ಲ. ನಂತರ ಅಂದರೆ 1908ರಲ್ಲಿ ಬಂದವರು ಕ್ರುಂಬಿಗಲ್.

Exhibition in Capital Delhi too: ಜತೆಗೆ, ಸಂಯುಕ್ತ ಭಾರತದ ಮುಖ್ಯ ಮಾರುಕಟ್ಟೆ ಅಧಿಕಾರಿಯಾಗಿದ್ದ ಅವರು LALBAGH ಮಾದರಿಯ ಪ್ರದರ್ಶನವನ್ನು ದೆಹಲಿಗೆ ಪರಿಚಯಿಸಿದರು. ಅಲ್ಲಿಯೂ ಫಲಪುಷ್ಪ ಪ್ರದರ್ಶನ ಶುರುವಾಗಲು ಇದು ಪ್ರಮುಖ ಕಾರಣವಾಯಿತು.1932ರಲ್ಲಿ ಮೊದಲ ದೇಶೀಯ ವ್ಯಕ್ತಿ ತೋಟಗಾರಿಕಾ ಅಧಿಕಾರಿಯಾಗಿ ರಾವ್ ಬಹದ್ದೂರ್ ಜವರಾಯ ಎಂಬುವರು ನೇಮಕಗೊಂಡರು.

ಪರಿಣಾಮ ಪ್ರತಿಷ್ಠಿತ ಮತ್ತು ಯೂರೋಪಿಯನ್‌ರಿಗೆ ಸೀಮಿತವಾಗಿದ್ದ ಪ್ರದರ್ಶನವನ್ನು ವರ್ಷದಲ್ಲಿ ಎರಡು ಬಾರಿ ಆಯೋಜಿಸಿ ಸಾಮಾನ್ಯ ವರ್ಗವೂ ಭಾಗಿಯಾಗುವಂತೆ ಅವಕಾಶ ಮಾಡಿಕೊಟ್ಟಿದ್ದರು.1947ರಲ್ಲಿ ಡಾ.ಎಂ.ಎಚ್. ಮರಿಗೌಡ ಅವರು ಈ ಫಲಪುಷ್ಪ ಪ್ರದರ್ಶನಕ್ಕೆ ಹೊಸ ಆಯಾಮ ನೀಡಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ರೈತರು ಬೆಳೆದ ತೋಟಗಾರಿಕಾ ಬೆಳೆಗಳಿಗೂ ಈ ಪ್ರದರ್ಶನದಲ್ಲಿ ವೇದಿಕೆ ಕಲ್ಪಿಸಿದರು.

Limited to Research Center Entertainment: ಸಂಶೋಧನೆ ಮತ್ತು ಶಾಸ್ತ್ರೀಯತೆ ಬದಲಿಗೆ ಸ್ಮಾರಕಕ್ಕೆ ಸೀಮಿತವಾಗುತ್ತಿದೆ. ಇದರಿಂದ ಭೇಟಿ ನೀಡುವವರ ಸಂಖ್ಯೆ ಮತ್ತು ಆದಾಯ ಹೆಚ್ಚಾಗಿರಬಹುದು. ಸಂಶೋಧನಾ ಕೇಂದ್ರದಿಂದ ಮನರಂಜನೆಯ ತಾಣವಾಗುತ್ತಿದೆ.ಹೊಸ ಆವಿಷ್ಕಾರಗಳ ಮೂಲಕ ಹೊರಬರುತ್ತಿದ್ದ ಫಲಪುಷ್ಪ ಪ್ರದರ್ಶನದ ಮೂಲ ಪರಿಕಲ್ಪನೆಯೇ ಇಂದು ಬದಲಾಗುತ್ತಿದೆ. ವೈವಿಧ್ಯತೆಯಿಂದ ಏಕತಾನತೆಯತ್ತ ಮುಖಮಾಡುತ್ತಿದೆ.

Changed concept: ಒಂದೇ ರೀತಿಯ ಹೂವುಗಳಿಂದ ಅಲಂಕರಿಸಿದ ಸ್ಮಾರಕಗಳನ್ನು ನಿರ್ಮಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಇದರಿಂದ ಸಂಶೋಧನೆಯ ಬದಲಾಗಿ ಮನೋರಂಜನೆಗೆ ಹೆಚ್ಚು ಆಸಕ್ತಿಯ ತಾಣವಾಗಿ ಪ್ರಾರಂಭವಾಯಿತು.2000ದಿಂದ ನಂತರದ ದಿನಗಳಿಂದ ಫಲಪುಷ್ಪ ಪ್ರದರ್ಶನದ ಪರಿಕಲ್ಪನೆ ಬದಲಾಯಿಸಲಾಯಿತು. ಒಂದೊಂದು ವಿಷಯ ವಸ್ತುಗಳನ್ನಿಟ್ಟುಕೊಂಡು ಜನಾಕರ್ಷಣೆಗೆ ಒತ್ತುಕೊಡಲು ಪ್ರಾರಂಭಿಸಲಾಯಿತು.

Event Management Access: ಪ್ರದರ್ಶನಕ್ಕಾಗಿಯೇ ‘ಇವೆಂಟ್ ಮ್ಯಾನೇಜರ್’ ಇದ್ದಾರೆ. ಡೆಕೋರೇಟರ್‌ಗಳ ಜತಗೆ ಪ್ರಾಯೋಜಕರೂ ಆಗಮಿಸಿದ್ದಾರೆ. ಹೀಗಾಗಿ, ರೈತರಿಗೆ ಕೃಷಿ ಶಿಕ್ಷಣ ನೀಡಬೇಕಾಗಿದ್ದ ಫಲಪುಷ್ಪ ಪ್ರದರ್ಶನ ಈಗ ಶಿಕ್ಷಣದ ಬದಲಿಗೆ ಪ್ರವಾಸಿಗರಿಗೆ ಮನಂರಜನೆ ನೀಡುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂ.

ಗಳನ್ನು ವೆಚ್ಚ ಮಾಡುತ್ತಿದ್ದು, ಅದರಿಂದ ಹೆಚ್ಚಿನ ಪ್ರಮಾಣದ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ತಜ್ಞ ಡಾ.ಹಿತ್ತಲಮನಿ ವಿವರಿಸಿದರು.ಮೈಸೂರು ಉದ್ಯಾನಕಲಾ ಸಂಘ ಆರಂಭವಾದ ದಿನಗಳಿಂದ ಹಲವು ವರ್ಷಗಳ ಕಾಲ ಕಡಿಮೆ ಬೆಲೆಯಲ್ಲೇ ಫಲಪುಷ್ಪ ಪ್ರದರ್ಶನ ಅಣಿಯಾಗುತ್ತಿತ್ತು.

ತೋಗಾರಿಕಾ ಬೆಳೆಗಳ ಬಗ್ಗೆಯೂ ನೋಡುಗರಿಗೆ ಒಂದು ರೀತಿ ಕೃಷಿ ಶಿಕ್ಷಣ ಇರುತ್ತಿತ್ತು. ಪ್ರದರ್ಶನ ವೀಕ್ಷಿಸುತ್ತಿದ್ದ ರೈತರು ಈ ರೀತಿಯ ಪ್ರಯೋಗಗಳನ್ನು ತಮ್ಮ ತೋಟದಲ್ಲೂ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ.

Fees from Rs.1 to Rs.100: ವೆಚ್ಚದಲ್ಲಿ ಆಯೋಜಿಸುತ್ತಿದ್ದು, ಅದರಿಂದ ಲಾಭವನ್ನು ಗಳಿಸಲಾಗುತ್ತಿದೆ. 2025ರ ಜನವರಿ ಫಲಪುಷ್ಪ ಪ್ರದರ್ಶನಕ್ಕೆ 2.75 ಕೋಟಿ ರೂ.ಗಳನ್ನು ವೆಚ್ಚಮಾಡಲಾಗಿದೆ. ಸುಮಾರು 10 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದ್ದು, 3 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿರುವುದಾಗಿ ತೋಟಗಾರಿಕಾ ಇಲಾಖೆಯ ನಿರ್ದೇಶಕ ರಮೇಶ್ ಮಾಹಿತಿ ನೀಡಿದರು.

ಪ್ರಾರಂಭದ ದಿನಗಳಲ್ಲಿ ಫಲಪುಷ್ಪ ಪ್ರದರ್ಶನ 1 ರೂ. ಇತ್ತು. ಈಗ ಅದರ ಬೆಲೆ 80ರಿಂದ 100 ರೂ.ಗೆ ಬಂದು ನಿಂತಿದೆ. ಫಲಪುಷ್ಪ ಪ್ರದರ್ಶನಕ್ಕೆ ಕೋಟ್ಯಾಂತರ ಹಣ ಚೆಲ್ಲಿ, ಅದೇ ರೀತಿಯಲ್ಲೇ ಹಣ ಪಡೆಯಲಾಗುತ್ತದೆ. ಈ ಹಿಂದೆ ಫಲಪುಷ್ಪ ಪ್ರದರ್ಶನವನ್ನು ಕೊಟ್ಯಂತರ ರೂ.

8 cancellations from start: ಮತ್ತು ಕೊರೋನಾ ಸಾಂಕ್ರಾಮಿಕ ರೋಗ ಬಂದ ಸಂದರ್ಭದಲ್ಲಿಯೂ ಮೂರು ಪ್ರದರ್ಶನಗಳನ್ನು ರದ್ದು ಮಾಡಲಾಗಿತ್ತು. ಇನ್ನುಳಿದಂತೆ ಪ್ರತಿ ಅವಧಿಯಲ್ಲಿಯೂ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ರೈತರು ಮತ್ತು ಯುವ ಜನಾಂಗಕ್ಕೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ವಿವರಿಸಿದರು.

ಸಾಂಕ್ರಾಮಿಕ ಪಿಡುಗಾದಂತಹ ಪ್ಲೇಗ್​ ಕಾಯಿಲೆ ಹರಡಿದ ಸಂದರ್ಭದಲ್ಲಿ ಮೂರು ಅವಧಿಯ ಪ್ರದರ್ಶನವನ್ನು ರದ್ದು ಮಾಡಲಾಗಿತ್ತು. ಬಳಿಕ ಡಾ.ರಾಜ್​ಕುಮಾರ್​ ಅಪಹರಣ ಸಂದರ್ಭದಲ್ಲಿ ಎರಡು ಪ್ರದರ್ಶನವನ್ನು ರದ್ದು ಮಾಡಲಾಗಿತ್ತು.

Lal Bagh, which was a laboratory: 1856 ಸಪೋಟಾ, ಸೀಮೆ ಬದನೆಕಾಯಿ ನಮ್ಮ ಕಾಲದಲ್ಲಿ ಇರಲಿಲ್ಲ. ಈ ಹಣ್ಣಿನ ಮೇಳಗಳನ್ನು ಮಾಡುವ ಮೂಲಕ ಜನರಿಗೆ ತಿಳಿಸುವ ಕಾರ್ಯ ನಡೆಯುತ್ತಿತ್ತು. ಆ ರೀತಿಯ ಹಣ್ಣುಗಳು ಏನು ಮಾಡಬೇಕು ಎಂಬುದರ ಕುರಿತು ನಮ್ಮ ಜನರಿಗೆ ಮಾಹಿತಿ ನೀಡುವ ಕಾರ್ಯ ನಡೆಯುತ್ತಿತ್ತು.

ಅಲ್ಲದೇ, LALBAGH​ನಲ್ಲಿ ಹಣ್ಣುಗಳ ಗಿಡಗಳನ್ನು ಬೆಳೆಸಿ ಬಳಿಕ ಅಲ್ಲಿಂದ ಇತರೆ 400 ತೋಟಗಳಿಗೂ ಕಳಿಸಿ ಅಲ್ಲಿನ ರೈತರಿಗೆ ಸಲ್ಲಿಸುವ ಕಾರ್ಯ ನಡೆದಿತ್ತು. ಇದಕ್ಕಾಗಿ LALBAGH​​ ಒಂದು ಪ್ರಯೋಗ ಶಾಲೆಯಾಗಿತ್ತು ಎಂದು ವಿವರಿಸಿದರು.ರಾಜ್ಯ ತೋಟಗಾರಿಕೆ ಇಲಾಖೆಗೆ ಮರಿಗೌಡ ಅವರು ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ರಾಜ್ಯ ಸುಮಾರು 400 ಇಲಾಖೆಗಳ ವತಿಯಿಂದ ತೋಟಗಳನ್ನು ಪ್ರಾರಂಭಿಸಲಾಗಿತ್ತು.

Since its popularity has spread elsewhere: ಪ್ರಾರಂಭದಲ್ಲಿ ದೆಹಲಿ, ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಮಾತ್ರ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈ ಪ್ರದರ್ಶನಗಳಿಂದ ಆಗುತ್ತಿರುವ ಜನಪ್ರಿಯತೆ ಮತ್ತು ಮಾಹಿತಿಯಿಂದಾಗಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂದು ವಿವರಿಸಿದರು.

ಇದನ್ನು ಓದಿರಿ : US CONSULATE IN BENGALURU : ನಾಳೆ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SPECIAL VILLAGE SAGA : 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ

Nalgonda, Telangana News: ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು...

ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

Mangalore News: ಕೋಟೆಕಾರು ULLAL BANK ROBBERY ಪ್ರಕರಣ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ, ಎಲ್ಲ ಟೋಲ್​ಗಳಲ್ಲಿ ತಪಾಸಣೆ ಹಾಗೂ ಕೇರಳ ಗಡಿಯಲ್ಲಿನ ಸಿಸಿ...

HIGH COURT : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ

Bangalore News: HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...

SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

Mumbai (Maharashtra) News: ಬಾಲಿವುಡ್​​ ನಟ SAIF ಅಲಿ ಖಾನ್ ಅವರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ಘಟನೆ ಬಾಲಿವುಡ್ ಮಾತ್ರವಲ್ಲದೇ...