ಹುಬ್ಬಳ್ಳಿ: ರೈತರ ಜಮೀನುಗಳ ಪಹಣಿಗಳಲ್ಲಿ ವಕ್ಫ್ ಮಂಡಳಿಯ ಹೆಸರು ಕಾಣಿಸಿಕೊಂಡಿದ್ದು ಕರ್ನಾಟಕದಲ್ಲೀಗ ಲ್ಯಾಂಡ್ ಜಿಹಾದ್ ನಡೆಯುತ್ತಿದೆ ಎಂದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ ವಿಚಾರವಾಗಿ ಬಿಜಾಪುರದಲ್ಲಿ ಹೋರಾಟದ ಹಿನ್ನೆಲೆ ಸಂಸದ ಗೋವಿಂದ್ ಕಾರಜೋಳ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಲವ್ ಜಿಹಾದಿ ಬದಲು ಲ್ಯಾಂಡ್ ಜಿಹಾದಿ ಆರಂಭವಾಗಿದೆ ಎಂದು ತಿಳಿಸಿದರು.
ರೈತರೊಂದಿವೆ ಸಂವಾದ ಹಾಗೂ ಅಧಿಕಾರಿಗಳ ಜೊತೆ ಸಭೆಯನ್ನ ಮಾಡಿ ಸುಮಾರು 45 ರಿಂದ 46 ಜನರಿಗೆ ನೋಟಿಸ್ ನೀಡಲಾಗಿದೆ. ನಾವು ಅಲ್ಲಿ ಹೋದ ನಂತರ ರಾಜ್ಯ ಸರ್ಕಾರದಿಂದ ಎಲ್ಲಾ ನೋಟಿಸ್ ಅನ್ನ ಹಿಂಪಡೆಯಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ವಕ್ಫಗೆ ಸಂಬಂಧ ಪಟ್ಟಂತೆ ಅಮೆಂಡಮೆಂಟ್ ತರುವ ವೇಳೆ ಜಮೀರ್ ಅಹ್ಮದ್ ವಿಶೇಷ ಮುತುವರ್ಜಿ ವಹಿಸಿದ್ದಾರೆ.
ನಡಾವಳಿಯಲ್ಲಿ ಮುಖ್ಯಮಂತ್ರಿ ಮೌಖಿಕ ಆದೇಶದ ಮೇರೆಗೆ 15 ದಿನಗಳ ಒಳಗೆ ಎಲ್ಲಾ ಹೆಸರನ್ನು ಕೂರಿಸಬೇಕಂತೆ ಅಧಿಕಾರಿಗಳ ಮೇಲೆ ಒತ್ತಡ ತರಲಾಗಿದೆ. ಜಮೀರ್ ಅಹ್ಮದ್ ಅವರು ನೇರವಾಗಿ ಈ ವಿಷಯದಲ್ಲಿ ಭಾಗಿಯಾಗಿದ್ದಾರೆ ಅಂತ ನಿನ್ನ ಗೊತ್ತಾಗಿದೆ ಎಂದು ಆರೋಪಿಸಿದರು.
ಧಾರವಾಡ, ಗದಗ, ಯಾದಗಿರಿ ಜಿಲ್ಲೆ ಸೇರಿ ಹಲವು ಕಡೆಗಳಲ್ಲಿ ಅನೇಕ ಭೂಮಿಗಳನ್ನು ಕಬಳಿಸಿದ್ದಾರೆ.
ಸರ್ಕಾರಿ ದಾಖಲೆಗಳಲ್ಲಿ ಬಂದಿರುವಂತಹ ಸಂಗತಿ ಇದು ನಡವಳಿಯಲ್ಲಿ ಏನಾಗಿದೆ ಅಂತ ನಾನು ಬಹಿರಂಗಪಡಿಸಿ ತೋರಿಸ್ತೇನೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.
ಲ್ಯಾಂಡ್ ಹೊಡೆದು ಅಲ್ಪಸಂಖ್ಯಾತರಿಗೆ ಕೊಟ್ಟು ದುರ್ಬಳಕೆ ಮಾಡುವ ವಿಚಾರ ನಡೆದಿದೆ. ಈ ಎಲ್ಲಾ ದಾಖಲೆಗಳು ತಂದಿದ್ದೇನೆ ಅದನ್ನು ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಪಹಣಿಯಲ್ಲಿ ಖಾತೆ 9 ಮತ್ತು 11ರಲ್ಲಿ ಹೆಸರು ಕೂರಿಸಿದ್ದಾರೆ. ಹೆಸರು ಕೂರಿಸಲು ಆರು ತಿಂಗಳು ಗಟ್ಟಲೆ ಸಮಯಾವಕಾಶ ತೆಗೆದುಕೊಳ್ಳುತ್ತದೆ ಇದನ್ನು ನೋಡಿದರೆ ಬಹಳ ಬೇಗ ಹೆಸರು ಕೂರಿಸುವ ಕೆಲಸ ಆಗಿದೆ . ಕೇಂದ್ರ ಸರ್ಕಾರ ವಕ್ಫಗೆ ಸಂಬಂಧ ಪಟ್ಟಂತೆ ಅಮೆಂಡಮೆಂಟ್ ತರುವ ವೇಳೆ ಜಮೀರ್ ಅಹ್ಮದ್ ವಿಶೇಷ ಮುತುವರ್ಜಿ ವಹಿಸಿದ್ದಾರೆ.