Lemon With Honey Water Benefits:
ಜೇನುತುಪ್ಪವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿದೆ. ಇದು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆ್ಯಂಟಿಫಂಗಲ್ ಗುಣಗಳನ್ನು ಹೊಂದಿದೆ. ಜೇನುತುಪ್ಪವು ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ.
ರೋಗನಿರೋಧಕ ಶಕ್ತಿ ಹೆಚ್ಚಿಸಲು LEMON WITH HONEY WATER BENEFITS. ಜೇನುತುಪ್ಪವು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆ್ಯಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಜೇನುತುಪ್ಪದೊಂದಿಗೆ ನಿಂಬೆ ರಸ ಕುಡಿದರೆ ಪ್ರಯೋಜನಗಳು ಲಭಿಸುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
ಶುದ್ಧಕರಿಸಿದ ಜೇನುತುಪ್ಪ ಸೇವಿಸುವ ಬದಲು ಹಸಿ ಜೇನು ಹೆಚ್ಚು ಉತ್ತಮವಾಗಿದೆ. ನಿತ್ಯ ಜೇನುತುಪ್ಪದೊಂದಿಗೆ ನಿಂಬೆ ರಸವನ್ನು ನಿಯಮಿತವಾಗಿ ಕುಡಿದರೆ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
What are the health benefits of honey & lemon juice?:
- ಕ್ಯಾಲ್ಸಿಯಂ, ಕಬ್ಬಿಣ, ಸಲ್ಫರ್, ಸೋಡಿಯಂ, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಪ್ರೋಟೀನ್‌ಗಳು ಜೇನುತುಪ್ಪದಲ್ಲಿ ಇವೆ.
- ಗಾಢವಾದ ಹಳದಿ ಬಣ್ಣದ ಜೇನುತುಪ್ಪದಲ್ಲಿ ಆ್ಯಂಟಿ – ಆಕ್ಸಿಡೆಂಟ್‌ಗಳು ಹೇರಳವಾಗಿವೆ.
- ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಮತ್ತು ಅರ್ಧ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ಮಲಬದ್ಧತೆ ಹಾಗೂ ಎದೆ ನೋವು ಕಡಿಮೆ ಆಗುತ್ತದೆ.
- ಬೊಜ್ಜು ಕಡಿಮೆ ಮಾಡಿಕೊಳ್ಳಲು ಉಪವಾಸ ಮಾಡುವವರು ಜೇನು ಹಾಗೂ ನಿಂಬೆ ರಸ ಬೆರೆಸಿದ ನೀರು ಕುಡಿಯುವುದರಿಂದ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
- ಮದ್ಯ ಸೇವಿಸಿದ ನಂತರ ಉಂಟಾಗುವ ತಲೆನೋವಿನಂತಹ ಸಮಸ್ಯೆಗಳನ್ನು ಸಹ ಜೇನುತುಪ್ಪ ನಿವಾರಿಸುತ್ತದೆ. ಇದರ ನೈಸರ್ಗಿಕ ಸಕ್ಕರೆ ಫ್ರಕ್ಟೋಸ್ ಯಕೃತ್ತು ತ್ವರಿತವಾಗಿ ಆಲ್ಕೋಹಾಲ್ ನಶೆಯನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಆರಾಮದಾಯಕ ಭಾವವು ನಿಮ್ಮದಾಗುತ್ತದೆ.
- ಒಂದು ಟೀಸ್ಪೂನ್ ಜೇನುತುಪ್ಪ ಮತ್ತು ಒಂದು ಟೀಸ್ಪೂನ್ ನಿಂಬೆ ರಸವು ಸೇವಿಸಿದ ಶೀತ ಮತ್ತು ಕೆಮ್ಮಿನಿಂದ ಪರಿಹಾರ ಲಭಿಸುತ್ತದೆ.
- ಒಂದು ಟೀಸ್ಪೂನ್ ಜೇನುತುಪ್ಪವನ್ನು ಒಂದು ಕಪ್ ಹರ್ಬಲ್ ಚಹಾದೊಂದಿಗೆ ಬೆರೆಸಿ ಕುಡಿದರೆ, ದೇಹದಿಂದ ತ್ಯಾಜ್ಯ ಹೊರಹಾಕುತ್ತದೆ. ಜೊತೆಗೆ ಉತ್ತಮ ನಿರ್ವಿಶೀಕರಣವನ್ನು ನೀಡುತ್ತದೆ.
- ತೂಕ ಇಳಿಸಿಕೊಳ್ಳಲು ಬಯಸುವವರು ಒಂದು ಟೀಸ್ಪೂನ್ ಜೇನುತುಪ್ಪು, ಅರ್ಧ ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಜೊತೆಗೆ ಹಲ್ಲಿನ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.
- ಎರಡು ಟೀಸ್ಪೂನ್ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಟೀಸ್ಪೂನ್ ಜೇನುತುಪ್ಪದೊಂದಿಗೆ ಬೆರೆಸಿ ಕುಡಿದರೆ, ಸೈನಸ್ ನಿಯಂತ್ರಣದಲ್ಲಿರುತ್ತದೆ.
- ಜೇನುತುಪ್ಪ ಹಾಗೂ ರೋಸ್ ವಾಟರ್‌ನಲ್ಲಿರುವ ಉರಿಯೂತ ನಿವಾರಕ ಗುಣಗಳು ಕಲೆಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ರೋಸ್ ವಾಟರ್ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಚರ್ಮವನ್ನು ತಾಜಾ ಆಗಿರಿಸುತ್ತದೆ.
- ಆರೋಗ್ಯಕರ, ನೈಸರ್ಗಿಕವಾಗಿ ಬಣ್ಣದ ಕೂದಲನ್ನು ಹೊಂದಲು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಉಪಯುಕ್ತವಾಗಿದೆ. ಅದಕ್ಕಾಗಿ ಒಂದು ಟೀಸ್ಪೂನ್ ಜೇನುತುಪ್ಪದಲ್ಲಿ ಸಕ್ಕರೆ ಬೆರೆಸಿ ಮೃದುವಾಗಿ ಚರ್ಮದ ಮೇಲೆ ಉಜ್ಜಿದರೆ ಉತ್ತಮ ಫಲಿತಾಂಶ ಲಭಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಇದನ್ನು ಓದಿರಿ : CM SIDDARAMAIAH : ಎಷ್ಟಾದರೂ ಹಣ – ಸವಲತ್ತು ಕೇಳಿ, ಕೊಡ್ತೀನಿ