Mysore News:
ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಮಂಗಳವಾರ ಚಿರತೆ ಪ್ರತ್ಯಕ್ಷವಾಗಿದ್ದು, ಅದರ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇನ್ಫೋಸಿಸ್ ಅವರಣದಲ್ಲಿ ಚಿರತೆ ಸೆರೆ ಕಾರ್ಯಚರಣೆಯ ನೇತೃತ್ವ ವಹಿಸಿದ್ದಾರೆ. ನಗರದ ಹೆಬ್ಬಾಳು ಕೈಗಾರಿಕಾ ಪ್ರದೇದಲ್ಲಿ ಇರುವ ಇನ್ಫೋಸಿಸ್ ಅವರಣದಲ್ಲಿ ಮಂಗಳವಾರ ಕಾಣಿಸಿಕೊಂಡ ಚಿರತೆ ಸರೆ ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. ಡ್ರೋನ್ ಕ್ಯಾಮರಾ ಮೂಲಕ ಚಿರತೆಯ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಕಂಡುಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ಮಂಗಳವಾರ ಬೆಳ್ಳಗೆಯಿಂದಲೇ ಅರಣ್ಯ ಇಲಾಖೆಯ ಸುಮಾರು 40 ಜನರ ತಂಡ ಕಾರ್ಯಚರಣೆ ಅರಂಭಿಸಿದೆ. ಆದರೆ ಮಂಗಳವಾರ ಸಂಜೆ ವರೆಗೆ ಚಿರತೆ ಪತ್ತೆಯಾಗಿರಲಿಲ್ಲ.ಮೈಸೂರು ನಗರದ ಹೊರವಲಯದಲ್ಲಿರುವ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಸುಮಾರು 350 ಎಕರೆ ವಿಸ್ತೀರ್ಣದಲ್ಲಿ ಇರುವ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆಯೊಂದು ಕಾಣಿಸಿಕೊಂಡಿತ್ತು.
Operation continued on Wednesday:
ಮಂಗಳವಾರ ರಾತ್ರಿ ಇನ್ಫೋಸಿಸ್ ಕ್ಯಾಂಪಸ್ನ ಅಯಕಟ್ಟಿನ ಜಾಗಗಳಲ್ಲಿ ಟ್ರ್ಯಾಪ್ ಕ್ಯಾಮರಾ ಹಾಗೂ ಎರಡು ಬೋನ್ಗಳನ್ನು ಸಹ ಅಳವಡಿಸಲಾಗಿದೆ. ಆದರೆ ಮಂಗಳವಾರ ರಾತ್ರಿ ಚಿರತೆಯ ಸಂಚಾರ ಕ್ಯಾಂಪಸ್ನ ಎಲ್ಲಿಯೂ ಕಂಡು ಬಂದಿಲ್ಲ.ಚಿರತೆ ಸೆರೆಗೆ ಎರಡನೇ ದಿನವು ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾ ಬಳಸಿ ಕಾರ್ಯಚರಣೆ ಆರಂಭಿಸಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಡ್ರೋನ್ ಕ್ಯಾಮರಾಗಳಿಗೆ ಚಿರತೆ ಓಡಾಟದ ದೃಶ್ಯ ಕಂಡುಬಂದಿದೆ. ಚಿರತೆ ಸೆರೆಗೆ ಡಿಸಿಎಫ್ ಪ್ರಭುಗೌಡ ಹಾಗೂ ಡಿಸಿಎಫ್ ಬಸವರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಬುಧವಾರ ಬೆಳಗೆಯಿಂದಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆ ಕಾರ್ಯಪಡೆ ಹಾಗೂ ಪಶು ವೈದ್ಯರ ತಂಡ, ಅರಿವಳಿಕೆ ತಜ್ಞರ ಜೊತೆ ಕಾರ್ಯಾಚರಣೆ ಆರಂಭಿಸಿತ್ತು.
Note to personnel to be cautious:
ಯಾರೂ ಸಹ ಕ್ಯಾಂಪಸ್ನ ಒಳಗೆ ಓಡಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಯಾವುದೇ ಸಿಬ್ಬಂದಿ, ಹೊರಗಿನಿಂದ ಬರುವವರನ್ನು ಭದ್ರತಾ ಸಿಬ್ಬಂದಿ ಕ್ಯಾಂಪಸ್ ಒಳಗೆ ಬಿಡುತ್ತಿಲ್ಲ. ಆಡಳಿತ ಅಧಿಕಾರಿಗಳು ನೌಕರರನ್ನು ಮನೆಯಿಂದಲೇ ಕಾರ್ಯ ನಿರ್ವಹಿಸಿ ಎಂದು ಸೂಚಿಸಲಾಗಿದೆ.350 ಎಕರೆ ವಿಸ್ತೀರ್ಣದ ಬೃಹತ್ ಇನ್ಫೋಸಿಸ್ ಕ್ಯಾಂಪಸ್ ಇದಾಗಿದ್ದು, ಸಾವಿರಾರು ಮಂದಿ ದೇಶ, ವಿದೇಶಗಳಿಂದ ತರಬೇತಿಗೆ ಬಂದ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಜೊತೆಗೆ ಕ್ಯಾಂಪಸ್ನಲ್ಲಿ ಸಿಬ್ಬಂದಿಯೂ ಇದ್ದು, ಎಲ್ಲರೂ ಮುಂಜಾಗ್ರತಾ ಕ್ರಮ ವಹಿಸಬೇಕು. ಇಂದೂ ಸಹ ಹುಡುಕಾಟ ಮುಂದುವರೆದಿದ್ದು, ಅರಣ್ಯ ಇಲಾಖೆ ಡ್ರೋನ್ ಕ್ಯಾಮರಾ, ಟ್ರ್ಯಾಪ್ ಕ್ಯಾಮರಾ, ಬೋನ್ಗಳು ಹಾಗೂ ನುರಿತ ಸಿಬ್ಬಂದಿ ಜೊತೆಗೆ ಚಿರತೆ ಕಾರ್ಯಪಡೆಯೂ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಚಿರತೆಯು ಇನ್ಫೋಸಿಸ್ ಅವರಣದಲ್ಲಿ ಇರುವ ಸುಳಿವು ಡ್ರೋನ್ ಕ್ಯಾಮರಾದಲ್ಲಿ ಪತ್ತೆಯಾಗಿರುವ ಬಗ್ಗೆ ಕಾರ್ಯಾಚರಣೆಯಲ್ಲಿ ಇರುವ ಅಧಿಕಾರಿ ಒಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.