Haveri News:
ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ವಿದ್ಯುತ್ ಕಂಬ ದುರಸ್ತಿ ಪಡಿಸಲು ಇಬ್ಬರು LINEMAN ADVENTURE ಆಳವಾದ ಕೆರೆಯನ್ನು ಈಜಿದ್ದಾರೆ. ಹೌದು.. ಇಲ್ಲಿ ಇಬ್ಬರು ಲೈನ್ಮ್ಯಾನ್ಗಳು ಹತ್ತಿಮತ್ತೂರು ಗ್ರಾಮದಲ್ಲಿನ ಆಳದ ಕೆರೆಯಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಕಂಬ ಏರಿ ಇನ್ಸುಲೇಟರ್ ಬದಲಾಯಿಸಿದ್ದಾರೆ. ಕೆರೆಯ ನಡುವೆ ಇದ್ದ ವಿದ್ಯುತ್ ಕಂಬ ಏರಿ ಲೈನ್ಮ್ಯಾನ್ ರಾಘವೇಂದ್ರ ಅವರು ದುರಸ್ತಿಪಡಿಸಿದ್ದಾರೆ.
LINEMAN ADVENTURE ಅವರಿಗೆ ಲೈನ್ಮ್ಯಾನ್ ಹನುಮಂತಪ್ಪ ಸಾಳಂಕಿ ಸಾಥ್ ನೀಡಿದ್ದಾರೆ.ಸ್ವಲ್ಪ ಹೊತ್ತು ವಿದ್ಯುತ್ ಪೂರೈಕೆ ಕಡಿತವಾದರೆ ಸಾಕು ವಿದ್ಯುತ್ ಕಂಪನಿಗಳ ಸಿಬ್ಬಂದಿ ಮೇಲೆ ಗರಂ ಆಗುತ್ತೇವೆ. ಅವರೇ ಉದ್ದೇಶ ಪೂರ್ವಕವಾಗಿಯೇ ವಿದ್ಯುತ್ ಪೂರೈಕೆ ಸ್ಥಗಿತ ಮಾಡಿದರು ಎಂದು ಕೋಪಗೊಳ್ಳುತ್ತೇವೆ. ಆದರೆ ಅವರು ತಮ್ಮ ಜೀವದ ಹಂಗು ತೊರೆದು ಮಾಡುವ ಕೆಲಸ ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ಇದಕ್ಕೆ ನಿದರ್ಶನ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ಮಂಗಳವಾರ ನಡೆದ ಘಟನೆ.
ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಹೆಸ್ಕಾಂ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಘವೇಂದ್ರ 2015ರಲ್ಲಿ ಕೆಲಸಕ್ಕೆ ಸೇರಿದ್ದು, ಹನುಮಂತಪ್ಪ 1999ರಿಂದ ಲೈನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ.
We are here to serve the public:
“ನೆರೆ ಬಂದಾಗ, ಈ ರೀತಿ ಸಮಸ್ಯೆ ಬಂದಾಗ ನಾವು ಜೀವದ ಹಂಗು ತೊರೆದು ಕೆಲಸ ಮಾಡುತ್ತೇವೆ. ನಾವಷ್ಟೇ ಅಲ್ಲಾ ನಮ್ಮಂತಹ ಸಾಕಷ್ಟು ಲೈನ್ಮ್ಯಾನ್ಗಳು ಜೀವದ ಹಂಗು ತೊರೆದು ಈ ರೀತಿ ಕೆಲಸ ಮಾಡುತ್ತಾರೆ. ಹೀಗೆ ಸೇವೆ ಸಲ್ಲಿಸುವುದು ನಮ್ಮ ಅಹಂ ಅಲ್ಲಾ, ಇದು ನಮ್ಮ ಕರ್ತವ್ಯ. ಬಂದಿರುವುದೇ ಸಾರ್ವಜನಿಕರಿಗೆ ಸೇವೆ ಮಾಡಲು. ಈ ರೀತಿ ವಿದ್ಯುತ್ ಅನಾನುಕೂಲವಾದಾಗ ನಾವು ಸಾರ್ವಜನಿಕರಿಗೆ ಅನುಕೂಲ ಒದಗಿಸಬೇಕಾಗುತ್ತದೆ.
LINEMAN ADVENTURE ನಮ್ಮ ಗ್ರಿಡ್ ವ್ಯಾಪ್ತಿಯಲ್ಲಿ ಕೆಲವು ಕೆರೆಗಳಲ್ಲಿ ಈ ರೀತಿ ವಿದ್ಯುತ್ ಕಂಬಗಳಿವೆ.ಇದೇ ವೇಳೆ ಮಾತನಾಡಿದ ಲೈನ್ಮ್ಯಾನ್ ಹನುಮಂತಪ್ಪ, ನಾನು 1999ರಿಂದ ಲೈನ್ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಸರ್ಕಾರ ನಮಗೆ ಹೆಲ್ಮೆಟ್, ಬೂಟ್, ಬಟ್ಟೆ ಸೇರಿದಂತೆ ವಿದ್ಯುತ್ ದುರಸ್ತಿಗೆ ಬೇಕಾಗುವ ವಸ್ತುಗಳನ್ನು ಪೂರೈಸುತ್ತದೆ. ಆದರೆ ಈ ರೀತಿಯ ಘಟನೆಗಳದಾಗ ಬೋಟ್ ಬೇಕಾಗುತ್ತದೆ. ಕೆಲವರಿಗೆ ಈಜು ಬರುವುದಿಲ್ಲಾ ಅಂತವರಿಗೆ ಲೈಫ್ ಜಾಕೆಟ್ ಬೇಕು. ಅವುಗಳನ್ನು ಒದಗಿಸಿದರೆ ಇನ್ನೂ ಹೆಚ್ಚು ಕೆಲಸ ಮಾಡಲು ಅನುಕೂಲವಾಗುತ್ತೆ” ಎಂದು ಇಂಗಿತ ವ್ಯಕ್ತಪಡಿಸಿದರು.
ಈ ಕಂಬಗಳಲ್ಲಿ ಏನಾದರೂ ದುರಸ್ತಿ ಬಂದಾಗ ನಮ್ಮ ಹಿರಿಯ ಅಧಿಕಾರಿಗಳ ಸಲಹೆ ಮತ್ತು ಮಾರ್ಗದರ್ಶನ ಮೇರೆಗೆ ಹೀಗೆ ದುರಸ್ತಿ ಮಾಡುತ್ತೇವೆ. ಹತ್ತಿಮತ್ತೂರು ಕೆರೆಯಲ್ಲಿ ಪ್ರಥಮ ಬಾರಿಗೆ ಈ ರೀತಿಯಾಗಿದೆ” ಎಂದು ಲೈನ್ಮ್ಯಾನ್ ರಾಘವೇಂದ್ರ ತಿಳಿಸಿದರು.
ಇದನ್ನು ಓದಿರಿ : COLDPLAY ROCK BAND:ಕ್ರಿಕೆಟಿಗ ಬುಮ್ರಾರನ್ನು ಹಾಡುಗಳ ಮೂಲಕವೇ ಗೌರವಿಸಿದ ಸಿಂಗರ್.