Mangalore News:
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದು ಹೋಗಿದ್ದ ಬಾಲಕನ ಚಿನ್ನದ ಸರವನ್ನು ಸಿಐಎಸ್‌ಎಫ್ ಸಿಬ್ಬಂದಿ ತನಿಖೆ ಮಾಡಿ ಅದೇ ದಿನ ಹುಡುಕಿ ಕೊಟ್ಟಿದ್ದಾರೆ.ಮಹಿಳೆಯ ಕುಟುಂಬಸ್ಥರು ಬಳಿಕ ಏರ್ಪೋರ್ಟ್‌ಗೆ ಆಗಮಿಸಿ GOLD CHAINದ ಸರ ಪಡೆದು ತೆರಳಿದ್ದಾರೆ.
ಈ ಬಗ್ಗೆ ಸ್ವತಃ ರಚನಾ ಅವರೇ ವಿಡಿಯೋ ಮಾಡಿ “ಮಂಗಳೂರು ವಿಮಾನ ನಿಲ್ದಾಣದಲ್ಲಿ CISF ತಂಡ ಮಾಡಿದ ಶ್ಲಾಘನೀಯ ಕೆಲಸಕ್ಕೆ ನಾನು ಸಾಕ್ಷಿಯಾಗಲು ಬಯಸುತ್ತೇನೆ. ಅವರಿಗೆ ಹ್ಯಾಟ್ಸ್ ಆಫ್. ನಾನು ಮಂಗಳೂರಿನಿಂದ ಬೆಂಗಳೂರಿಗೆ ವಿಮಾನ ಹತ್ತುತ್ತಿದ್ದೆ, ಅದು ಇಂಡಿಗೊದ ವಿಮಾನ. ನಾನು ಬೆಳಿಗ್ಗೆ 8.30ಕ್ಕೆ ವಿಮಾನ ನಿಲ್ದಾಣದಲ್ಲಿ ಇಳಿದಿದ್ದೆ, ಮತ್ತು 30 ನಿಮಿಷಗಳ ಅವಧಿಯಲ್ಲಿ, ಸರ ಕಾಣೆಯಾಗಿದೆ ಎಂದು ನಮಗೆ ಅರಿವಾಯಿತು. ಆಗ ನಾನು ನನ್ನ ಮಗನನ್ನು ತಪಾಸಣೆ ಮಾಡುತ್ತಿದ್ದ CISF ಸಿಬ್ಬಂದಿಗೆ ದೂರು ನೀಡಿದ್ದೆ. ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ದೂರು ನೀಡಿದ್ದೆ ಮತ್ತು ಸಂಜೆ 7 ಗಂಟೆಯ ಹೊತ್ತಿಗೆ, ಅವರು ಸರ ತೆಗೆದುಕೊಂಡ ವ್ಯಕ್ತಿಯನ್ನು ಪತ್ತೆಹಚ್ಚಿದರು ಮತ್ತು ಅದೇ ದಿನ ನನ್ನ ಕುಟುಂಬ ಸದಸ್ಯರಿಗೆ ಸರವನ್ನು ಹಸ್ತಾಂತರಿಸಲಾಯಿತು. ಇಂದು ನಾನು ತುಂಬಾ ಭಾವುಕನಾಗಿದ್ದೆ, ಆದರೆ ಇದು ಒಂದು ಪವಾಡದಂತೆ ನಡೆದಿದೆ. ಇಂದು ಈ ಶೋಧ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತುಂಬಾ ಧನ್ಯವಾದಗಳು. ಭಾರತವು ಇಂತಹ ತಂಡದೊಂದಿಗೆ ಉತ್ತಮ ಕೈಯಲ್ಲಿದೆ ಎಂದು ನಾನು ಹೇಳಬಲ್ಲೆ” ಎಂದಿದ್ದಾರೆ.
ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಮಗುವಿನ ಕಳೆದು ಹೋಗಿದ್ದ GOLD CHAINದ ಸರವನ್ನು ಸಿಐಎಸ್‌ಎಫ್ ಸಿಬ್ಬಂದಿ ವಾಪಸ್ ದೊರಕಿಸಿಕೊಟ್ಟಿದ್ದಾರೆ.
ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಆಗ ಏರ್ಪೋರ್ಟ್ ಮೇಲಂತಸ್ತಿನಲ್ಲಿ ಕಾರಿನಿಂದ ಇಳಿದು ಒಳಗೆ ಬರುವಾಗಲೇ ಮಗುವಿನ ಸರ ಬಿದ್ದು ಹೋಗಿರುವುದು ತಿಳಿದು ಬಂದಿದೆ. ಅಲ್ಲದೆ, ಆ ಸರ ವಾಹನವೊಂದರ ಚಾಲಕನಿಗೆ ಸಿಕ್ಕಿದ್ದು, ಆತ ಅದನ್ನು ತೆಗೆದುಕೊಂಡು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಆದ್ದರಿಂದ ಆ ವಾಹನದ ನಂಬರ್ ಮೂಲಕ ಚಾಲಕನ ಪತ್ತೆ ಮಾಡಿ ಪೊಲೀಸರು ಕರೆ ಮಾಡಿದ್ದರು. ಈ ವೇಳೆ, ಸರ ಬಿದ್ದು ಸಿಕ್ಕಿರುವುದನ್ನು ಒಪ್ಪಿಕೊಂಡ ಚಾಲಕ, ಅದನ್ನು ವಾರಸುದಾರರಿಗೆ ನೀಡುತ್ತೇನೆ ಎಂದು ಹೇಳಿದ್ದಾನೆ.ಜ.26ರಂದು ಬೆಳಗ್ಗೆ 8.30ಕ್ಕೆ ರಚನಾ ಮಾರ್ಲ ಎಂಬ ಮಹಿಳೆ ತಮ್ಮ ಮಗುವಿನೊಂದಿಗೆ ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಆಗಿ ವಿಮಾನದ ಬಳಿ ಬರುತ್ತಿದ್ದರು.
ಈ ವೇಳೆ ಮಗುವಿನ ಕತ್ತಿನಲ್ಲಿ ಸರ ಇಲ್ಲದಿರುವುದು ಗಮನಕ್ಕೆ ಬಂದಿದೆ. ಆದರೆ ಹೊರಗೆ ಬಂದು ಸರ ಬಿದ್ದು ಹೋಗಿದೆಯೇ ಎಂದು ಪರಿಶೀಲನೆ ಮಾಡುವಷ್ಟು ಸಮಯವೂ ಇರಲಿಲ್ಲ. ಆದ್ದರಿಂದ ಅವರು ಏರ್ಪೋರ್ಟ್ ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿಗೆ ಸರ ಬಿದ್ದುಹೋಗಿರುವ ಬಗ್ಗೆ ದೂರು ಕೊಟ್ಟು ಬೆಂಗಳೂರಿಗೆ ತೆರಳಿದ್ದರು.
ಇದನ್ನು ಓದಿರಿ : FREE FLIGHT TRAVEL FOR STUDENTS: ಬಳ್ಳಾರಿ ವೈಕಿಂಗ್ಸ್ ರೌಂಡ್ ಟೇಬಲ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಉಚಿತ ವಿಮಾನ ಪ್ರಯಾಣ