New Delhi News:
ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪಡೆಯುವ ಬಡ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ 10.33 ಕೋಟಿ ಎಲ್ಪಿಜಿ ಸಂಪರ್ಕಗಳನ್ನು ನೀಡಲಾಗಿದೆ. ಈ ಯೋಜನೆಯ ಪ್ರಾರಂಭದಿಂದ, ಸುಮಾರು 222 ಕೋಟಿ ಎಲ್ಪಿಜಿ ರೀಫಿಲ್ಗಳನ್ನು ಪಿಎಂಯುವೈ ಮನೆಗಳಿಗೆ ತಲುಪಿಸಲಾಗಿದೆ. ಯೋಜನೆಯಡಿ ಪ್ರತಿದಿನ ಸುಮಾರು 13 ಲಕ್ಷ ರೀಫಿಲ್ಗಳನ್ನು ಪೂರೈಸಲಾಗುತ್ತಿದೆ.
ಅಲ್ಲದೆ ಎಲ್ಲಾ ಉಜ್ವಲ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ಗೆ 300 ರೂ.ಗಳ ಸಬ್ಸಿಡಿ ನೀಡಲಾಗುತ್ತಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. 2014ರಲ್ಲಿ 14.52 ಕೋಟಿ ಇದ್ದ ಗೃಹಬಳಕೆ ಅಡುಗೆ ಅನಿಲ LPG CONNECTIONS ಸಂಖ್ಯೆ 2024ರ ನವೆಂಬರ್ 1ರ ವೇಳೆಗೆ ದ್ವಿಗುಣಗೊಂಡು 32.83 ಕೋಟಿಗೆ ತಲುಪಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ವರ್ಷಾಂತ್ಯದ ಪರಾಮರ್ಶೆ ವರದಿಯಲ್ಲಿ ತಿಳಿಸಿದೆ.
“ಸರ್ಕಾರದ ಪ್ರಯತ್ನಗಳಿಂದ ಉಜ್ವಲ ಫಲಾನುಭವಿ ಕುಟುಂಬಗಳಲ್ಲಿ ಎಲ್ಪಿಜಿ ಬಳಕೆಯಲ್ಲಿ ಹೆಚ್ಚಳವಾಗಿದೆ. 14.2 ಕೆಜಿ ದೇಶೀಯ LPG CONNECTIONS ಸಿಲಿಂಡರ್ಗಳ ಸಂಖ್ಯೆಯಲ್ಲಿ ತಲಾ ಬಳಕೆಯು 2019-20ರಲ್ಲಿ ಇದ್ದ 3.01 ರಿಂದ 2023-24ರಲ್ಲಿ 3.95 ಕ್ಕೆ ಏರಿದೆ. ಇನ್ನೂ ಪ್ರಗತಿಯಲ್ಲಿರುವ ಪ್ರಸಕ್ತ ವರ್ಷದಲ್ಲಿ, ತಲಾ ಬಳಕೆಯು 4.34 ಕ್ಕೆ ತಲುಪಿದೆ (ಅಕ್ಟೋಬರ್ 2024 ರವರೆಗೆ ಪ್ರೋ-ರಾಟಾ ಆಧಾರದ ಮರುಪೂರಣ)” ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
2014 ಕ್ಕೆ ಹೋಲಿಸಿದರೆ LPG CONNECTIONS ವಿತರಕರ ಸಂಖ್ಯೆ ನವೆಂಬರ್ 1, 2024 ರ ವೇಳೆಗೆ 13,896 ರಿಂದ 25,532 ಕ್ಕೆ ಏರಿಕೆಯಾಗಿದೆ. ಇದು ಗ್ರಾಹಕರಿಗೆ ಅಡುಗೆ ಅನಿಲದ ಲಭ್ಯತೆಯನ್ನು ಹೆಚ್ಚಿಸಿದೆ. ಶೇಕಡಾ 90 ಕ್ಕೂ ಹೆಚ್ಚು ಹೊಸ ವಿತರಕರು ಗ್ರಾಮೀಣ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನವೆಂಬರ್ 2024 ರ ಹೊತ್ತಿಗೆ, ಸುಮಾರು 30.43 ಕೋಟಿ ಎಲ್ಪಿಜಿ ಗ್ರಾಹಕರು ಸರ್ಕಾರದ ಪಹಲ್ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.
ಈ ಯೋಜನೆಯಡಿ ವರ್ಷಕ್ಕೆ 10 ಲಕ್ಷ ರೂ.ಗಿಂತ ಕಡಿಮೆ ಆದಾಯದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಎಲ್ಪಿಜಿ ಸಬ್ಸಿಡಿಗಳನ್ನು ನೇರವಾಗಿ ವರ್ಗಾಯಿಸಲಾಗುತ್ತದೆ. ಇಲ್ಲಿಯವರೆಗೆ, 1.14 ಕೋಟಿಗೂ ಹೆಚ್ಚು ಗ್ರಾಹಕರು ‘ಗಿವ್ ಇಟ್ ಅಪ್’ ಅಭಿಯಾನದ ಅಡಿಯಲ್ಲಿ ತಮ್ಮ ಎಲ್ಪಿಜಿ ಸಬ್ಸಿಡಿಯನ್ನು ತ್ಯಜಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸುಮಾರು 10,805 ಕಿ.ಮೀ ನೈಸರ್ಗಿಕ ಅನಿಲ ಕೊಳವೆ ಮಾರ್ಗದ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.
ಈ ಪೈಪ್ ಲೈನ್ ಗಳು ಪೂರ್ಣಗೊಂಡ ನಂತರ, ರಾಷ್ಟ್ರೀಯ ಅನಿಲ ಗ್ರಿಡ್ ಪೂರ್ಣಗೊಳ್ಳಲಿದೆ ಮತ್ತು ಭಾರತದ ಎಲ್ಲಾ ಪ್ರಮುಖ ಬೇಡಿಕೆ ಮತ್ತು ಪೂರೈಕೆ ಕೇಂದ್ರಗಳನ್ನು ಸಂಪರ್ಕಿಸಲಿದೆ. ಇದು ಎಲ್ಲಾ ಪ್ರದೇಶಗಳಲ್ಲಿ ನೈಸರ್ಗಿಕ ಅನಿಲದ ಸುಲಭ ಲಭ್ಯತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನೈಸರ್ಗಿಕ ಅನಿಲ ಪೈಪ್ ಲೈನ್ ಉದ್ದವು 2014 ರಲ್ಲಿ ಇದ್ದ 15,340 ಕಿ.ಮೀ.ನಿಂದ 2024 ರಲ್ಲಿ 24,945 ಕಿ.ಮೀ.ಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ಇದನ್ನು ಓದಿರಿ : SPEAKING ENGLISH GLOBAL AVERAGE : ವಿಶ್ವದಲ್ಲೇ ಅತ್ಯುತ್ತಮವಾಗಿ ಇಂಗ್ಲಿಷ್ ಮಾತನಾಡುವ ದೇಶ ಭಾರತ