Prayagraj (Uttar Pradesh) News:
ಜನವರಿ 13ರಿಂದ ಪ್ರಾರಂಭವಾದ ಈ ಮಹಾ ಕುಂಭದಲ್ಲಿ 17 ದಿನದಲ್ಲಿ 15 ಕೋಟಿ ಯಾತ್ರಿಕರು ಈಗಾಗಲೇ MAHA KUMBH HOLY DIP ನಡೆಸಿದ್ದಾರೆ. ನಾಳೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಸಿದ್ಧತೆ ನಡೆಸಲಾಗಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಈಗಾಗಲೇ ಮಕರ ಸಂಕ್ರಾಂತಿ, ಪೌರ್ಣಿಮೆ ಸೇರಿದಂತೆ ಮಹತ್ವದ ದಿನಗಳಂದು ಮಹಾಕುಂಭದಲ್ಲಿ ಕೋಟ್ಯಂತರ ಭಕ್ತರು MAHA KUMBH HOLY DIP ಮಾಡಿದ್ದಾರೆ.
ನಾಳೆ ಅಂದರೆ, ಬುಧವಾರ ಮೌನಿ ಅಮಾವಾಸ್ಯೆಯಾಗಿದ್ದು, ಇದೂ ಕೂಡ ಮತ್ತೊಂದು MAHA KUMBH HOLY DIPಕ್ಕೆ ಪ್ರಮುಖವಾದ ದಿನವಾಗಿದೆ. ಈ ದಿನ 10 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ನಡೆಸುವ ಸಾಧ್ಯತೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ.
ಈ ನಿಟ್ಟಿನಲ್ಲಿ ಭದ್ರತಾ ಕ್ರಮಕ್ಕೆ ಮುಂದಾಗಿದೆ. ಉತ್ತರ ಪ್ರದೇಶ ಸರ್ಕಾರದ ಪ್ರಕಾರ, ಮಕರ ಸಂಕ್ರಾಂತಿ ಒಂದೇ ದಿನ 3.5 ಕೋಟಿ ಭಕ್ತರು, ಸಂತರು ಮತ್ತು ಕಲ್ಪವಾಸಿಗಳು ಅಮೃತ್ ಸ್ನಾನ ನಡೆಸಿದ್ದರು. ನಾಳೆ ಮೇಳದ ಪ್ರದೇಶದಲ್ಲಿ ಎಐಚಾಲಿತ ಸಿಸಿಟಿವಿ ಕ್ಯಾಮೆರಾ, ಡ್ರೋನ್ಗಳ ಮೂಲಕ ತ್ರಿವೇಣಿ ಸಂಗಮದ ಜೊತೆಗೆ ಹರಡಿರುವ ಹಲವು ಹೆಕ್ಟೇರ್ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಮೇಳ ಪ್ರದೇಶವನ್ನು ಮುಂದಿನ ಕೆಲವು ದಿನಕ್ಕಾಗಿ ವಾಹನಮುಕ್ತ ವಲಯವಾಗಿ ಘೋಷಿಸಲಾಗಿದೆ.
ಪ್ರಯಾಗ್‌ರಾಜ್ ಆಡಳಿತ ಕೂಡ ಸ್ಥಳೀಯರಿಗೂ ಕೂಡ ಹಿರಿಯ ನಾಗರಿಕರನ್ನು ಸಂಗಮದ ಬಳಿ ಕರೆತರಲು ದ್ವಿಚಕ್ರ ಅಥವಾ ನಡಿಗೆ ಮೂಲಕ ಬನ್ನಿ ಎಂದು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಮಂದರ್ ತಿಳಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನರ ಆಗಮನವಾಗುವ ಹಿನ್ನೆಲೆಯಲ್ಲಿ ನಗರದಲ್ಲಿ 1 ರಿಂದ 18 ತರಗತಿಯ ಎಲ್ಲಾ ಶಾಲೆಗೆ ಜನವರಿ 28, 29 ಮತ್ತು 30ರಂದು ರಜೆ ಘೋಷಣೆ ಮಾಡಲಾಗಿದೆ.
ಅಲಹಾಬಾದ್ ಹೈಕೋರ್ಟ್ ಕೂಡ ಮೌನಿ ಅಮವಾಸ್ಯೆಗೆ ರಜೆ ಘೋಷಿಸಿದೆ. ಇಂದು ಬೆಳಗ್ಗೆ ಕೂಡ 8ರ ಹೊತ್ತಿಗೆ 45 ಲಕ್ಷ ಜನರು MAHA KUMBH HOLY DIP ಮಾಡಿದ್ದಾರೆ. ಬುಧವಾರ ಮೌನಿ ಅವಮಾಸ್ಯೆ ಹಿನ್ನೆಲೆಯಲ್ಲಿ ಇದನ್ನು ವಿಶೇಷ ಎಂದು ಪರಿಗಣಿಸುವ ಕಾರಣ ಸಂಗಮದ ಸ್ಥಳದಲ್ಲಿ ಹೆಲಿಕಾಪ್ಟರ್ ಮೂಲಕ ಹೂವಿನ ದಳದ ಮಳೆ ಸುರಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.
ಇದನ್ನು ಓದಿರಿ : FIR AGAINST SANDALWOOD ACTRESS:ಸ್ಯಾಂಡಲ್ವುಡ್ ಪೋಷಕ ನಟಿ ವಿರುದ್ಧ ಎಫ್ಐಆರ್