spot_img
spot_img

MAHA KUMBH MELA 2025 TRAVELING TIPS : ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದೀರಾ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Maha Kumbh Mela 2025 Traveling Tips:

ಈ ಕುಂಭಮೇಳಕ್ಕೆ ಸ್ವದೇಶಿ ಮಾತ್ರವಲ್ಲದೆ ವಿದೇಶಿ ಯಾತ್ರಾರ್ಥಿಗಳೂ ತೆರಳುತ್ತಾರೆ. ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಪ್ರಾರಂಭವಾಗಲಿರುವ MAHA KUMBH MELA ನೀವೂ ಹೋಗಲು ಬಯಸುತ್ತೀರಾ? ಹಾಗಾದರೆ, ಈ ಕೆಲವು ಸಲಹೆಗಳನ್ನು ಪಾಲಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಈ ಸಲಹೆಗಳನ್ನು ಅನುಸರಿಸಿದರೆ ಸಂತೋಷದಾಯಕ ಪ್ರಯಾಣ ನಿಮ್ಮದಾಗುತ್ತದೆ.ಪ್ರತಿ 12 ವರ್ಷಕ್ಕೊಮ್ಮೆ ಜರುಗುವ MAHA KUMBH MELAವು ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮವಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಮುಕ್ತಿ, ಮೋಕ್ಷ ಮಾರ್ಗವೆಂದು ಭಾವಿಸಿ ಪುಣ್ಯನದಿಗಳಲ್ಲಿ ಸ್ನಾನ ಮಾಡಲು ತೆರಳುತ್ತಾರೆ.

Book Travel & Stay in Advance:ಅಲ್ಲಿಗೆ ಹೋದ ನಂತರ ಯಾವುದೇ ತೊಂದರೆಯಾಗದಂತೆ ನೀವು ಮುಂಚಿತವಾಗಿ ಪ್ಲಾನ್​ ಮಾಡಬೇಕು. ಕುಂಭಮೇಳಕ್ಕೆ ಹೋಗುವುದು ಹೇಗೆ? ಹೋದ ನಂತರ ಎಲ್ಲಿ ಉಳಿಯಬೇಕೆಂದು ಮೊದಲೇ ತಿಳಿದುಕೊಳ್ಳಿ. ಅಗತ್ಯವಿದ್ದರೆ ಸರ್ಕಾರಿ ಟ್ರಾವೆಲ್ ಏಜೆನ್ಸಿಗಳ ಸಹಾಯವನ್ನು ತೆಗೆದುಕೊಳ್ಳಬಹುದು.MAHA KUMBH MELA ಹೋಗಬೇಕಾದರೆ ಪ್ರಯಾಣ ಮತ್ತು ತಂಗುವುದು ಮುಂಗಡ ಕಾಯ್ದಿರಿಸಿಕೊಳ್ಳುವುದು ಉತ್ತಮ. ಏಕೆಂದರೆ ಲಕ್ಷಾಂತರ ಪ್ರವಾಸಿಗರು ಹಾಗೂ ಭಕ್ತರು ಪ್ರಪಂಚದಾದ್ಯಂತದ ಪ್ರಯಾಗ್ರಾಜ್ ಕುಂಭಮೇಳಕ್ಕೆ ಆಗಮಿಸುತ್ತಾರೆ.

Packing Essentials:ನಡೆಯಲು ಸೂಕ್ತವಾದ ಪಾದರಕ್ಷೆಗಳನ್ನು ಧರಿಸಿಕೊಳ್ಳಬೇಕಾಗುತ್ತದೆ. ಸ್ನಾನದ ನಂತರ, ಒದ್ದೆಯಾದಾಗ ಪಾದಗಳು ಜಾರದಂತೆ ಗ್ರಿಪ್ ಆಗಿರುವ ಸ್ಯಾಂಡಲ್ ಮತ್ತು ಶೂಗಳನ್ನು ಆಯ್ಕೆ ಮಾಡುವುದು ಉತ್ತಮವಾಗಿದೆ. ಅಲ್ಲಿನ ತಾಪಮಾನಕ್ಕೆ ಅನುಗುಣವಾಗಿ ಡ್ರೆಸ್ಸಿಂಗ್ ಮಾಡಬೇಕು. ಅಲ್ಲದೆ, ಔಷಧಗಳನ್ನು ಬಳಸುತ್ತಿರುವವರು ಸಹ ಅವುಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.ಕುಂಭಮೇಳಕ್ಕೆ ಹೋಗುವ ಮೊದಲು, ನೀವು ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಬೇಕಾಗುತ್ತದೆ. ಅಲ್ಲಿಗೆ ತೆರಳಿದ ನಂತರ, ನಿಮಗೆ ಬೇಕಾಗಿರುವ ವಸ್ತುಗಳು ಇಲ್ಲ ಎನ್ನುವ ಒತ್ತಡಕ್ಕೆ ಒಳಗಾಗದಂತೆ ಬೇಕಾದ ಎಲ್ಲ ವಸ್ತುಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಬೇಕು.

Be concerned about health: ನೀವು ತಿನ್ನುವ ಆಹಾರ ಮತ್ತು ಕುಡಿಯುವ ನೀರಿನ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ತಿಂಡಿ ತಿನ್ನಬೇಕೆನಿಸಿದಾಗ ಹೊರಗಡೆ ತಿನ್ನುವ ಬದಲು ಮನೆಯಲ್ಲಿ ತಯಾರಿಸಿದ ಪದಾರ್ಥಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಜೊತೆಗೆ ಸಾಕಷ್ಟು ಹಣ್ಣುಗಳನ್ನೂ ತೆಗೆದುಕೊಂಡು ಹೋಗಬೇಕು. ಪ್ರತ್ಯೇಕ ನೀರಿನ ಬಾಟಲಿಗಳನ್ನು ಕೊಂಡೊಯ್ಯಲು ಸಹ ತಜ್ಞರು ಸೂಚನೆ ನೀಡುತ್ತಾರೆ.ಕುಂಭಮೇಳಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಈ ಸಮಯದಲ್ಲಿ ವೈರಸ್‌ಗಳು ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. ಚೀನಾದ ಎಚ್​ಎಂಪಿ ವೈರಸ್ ಈಗಾಗಲೇ ಜನರನ್ನು ಭಯಭೀತಗೊಳಿಸುತ್ತಿರುವುದರಿಂದ, ಮಾಸ್ಕ್​ ಮತ್ತು ಸ್ಯಾನಿಟೈಸರ್‌ಗಳನ್ನು ನಿಮ್ಮೊಂದಿಗೆ ತೆಗೆದುಕೊಳ್ಳಬೇಕು.

Do not carry valuables:ಮೊಬೈಲ್ ಫೋನ್, ಹಣ ಮತ್ತು ಗುರುತಿನ ಚೀಟಿಗಳನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕಾಗುತ್ತದೆ. ಒಂಟಿಯಾಗಿ ಹೋಗುವ ಬದಲು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೋಗಬೇಕಾಗುತ್ತದೆ. ಜೊತೆಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.ಜನಸಂದಣಿ ಇರುವ ಪ್ರದೇಶಗಳಿಗೆ ಹೋಗುವಾಗ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗದಿರುವುದು ಉತ್ತಮ.

Take care while bathing:ಸ್ನಾನಕ್ಕೆ ನದಿಯಲ್ಲಿರುವ ನೀರು ಪ್ರವೇಶಿಸುವಾಗ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಹೆಚ್ಚಿನ ಜನರು ಇರುವಾಗ ಕಾಲ್ತುಳಿತದ ಅಪಾಯವಿರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಸ್ನಾನ ಮಾಡಬೇಕು. ಈಜು ಬಾರದವರು ಆಳವಾದ ಸ್ಥಳಗಳಿಗೆ ಹೋಗಬಾರದು. ನದಿಯ ದಡದಲ್ಲಿ ಸ್ನಾನ ಮಾಡಬಾರದು ಎಂದು ತಜ್ಞರು ಸೂಚಿಸುತ್ತಾರೆ.

Keep Cash Close:ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಪಾವತಿಗಳು ಹೆಚ್ಚು ಸಾಮಾನ್ಯವಾಗಿದೆ. ಆದರೆ, ಇಂತಹ ಅಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಹೋಗುವಾಗ ನಗದು ಹಣ ಹತ್ತಿರ ಇಟ್ಟುಕೊಳ್ಳಬೇಕು, ತುರ್ತು ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ ಎನ್ನುತ್ತಾರೆ ತಜ್ಞರು.Maha Kumbh Mela 2025 Traveling Tips: ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳವು ದೊಡ್ಡ ಆಧ್ಯಾತ್ಮಿಕ ಹಬ್ಬವಾಗಿದೆ. ಕುಂಭಮೇಳಕ್ಕೆ ಹೋಗುವವರು ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ, ನಿಮ್ಮ ಪ್ರಯಾಣ ಸುಖಕರ & ಸುರಕ್ಷಿತವಾಗಿರುತ್ತದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...