spot_img
spot_img

ಪ್ರಯಾಗರಾಜ್​ದಲ್ಲಿ ಜ.10 ರಿಂದ ಮಹಾ ಕುಂಭಮೇಳ

spot_img
spot_img

Share post:

ಹುಬ್ಬಳ್ಳಿ: ಪ್ರಯಾಗರಾಜ್​ನಲ್ಲಿ ಮಹಾ ಕುಂಭಮೇಳ ನಡೆಯುವ ಸಂದರ್ಭದಲ್ಲಿ ಭಕ್ತರ ಉಪಯೋಗಕ್ಕಾಗಿ ಐಆರ್​​ಸಿಟಿಸಿಯು ವಿಶೇಷ ಟೆಂಟ್ ವ್ಯವಸ್ಥೆ ಕಲ್ಪಿಸುತ್ತಿದೆ.
ಪ್ರತಿ 12 ವರ್ಷಕ್ಕೊಮ್ಮೆ ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಮಹಾ ಕುಂಭಮೇಳ ನಡೆಯುತ್ತದೆ. ಜನವರಿ 10 ರಿಂದ ಫೆ.28 ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ಐಆರ್​​ಸಿಟಿಸಿಯು (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ಪ್ರಯಾಗರಾಜ್​ನಲ್ಲಿ ಟೆಂಟ್ ಸಿಟಿ ನಿರ್ಮಾಣ ಮಾಡಿದೆ ಎಂದು ಐಆರ್​​ಸಿಟಿಸಿ ಟೂರಿಸಂ ಕಾರ್ಪೊರೇಷನ್ ಮೇಲ್ವಿಚಾರಕರಾದ ಹರ್ಷದೀಪ್ ಹಾಗೂ ನವೀನ್ ಅವರು ಮಾಹಿತಿ ನೀಡಿದ್ದಾರೆ.
ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರದಲ್ಲಿ ಪವಿತ್ರ ಸ್ನಾನ ಮಾಡಲು ಬರುವ ಭಕ್ತರಿಗೆ ಈ ವಸತಿ ವ್ಯವಸ್ಥೆ ಅನುಕೂಲವಾಗಲಿದೆ. ಪ್ರಾರಂಭಿಕ 6,995 ರೂ.ಗಳಿಂದ ವಿವಿಧ ಬಗೆಯ ದರ ನಿಗದಿಪಡಿಸಲಾಗಿದೆ. ಅದರಲ್ಲೂ‌ ಪ್ರಮುಖವಾಗಿ, ಡಿಲಕ್ಸ್ ಹಾಗೂ ಪ್ರೀಮಿಯಂ ವಿಧಗಳಿದ್ದು, ಸಿಂಗಲ್ ಹಾಗೂ ಡಬಲ್ ಟೆಂಟ್​​ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿದ್ದು, ಆಸಕ್ತರು ಆನ್​ಲೈನ್ ಹಾಗೂ ಆಫ್​​ಲೈನ್​ನಲ್ಲಿ ಹುಬ್ಬಳ್ಳಿ, ಬೆಂಗಳೂರು, ಮೈಸೂರು ರೈಲ್ವೆ ನಿಲ್ದಾಣದ ಕಚೇರಿಗಳಲ್ಲಿ ಬುಕ್ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಮಹಾ ಕುಂಭಮೇಳವು ನಾಲ್ಕು ಪವಿತ್ರ ಸ್ಥಳಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಸುವ ಹಿಂದೂಗಳ ತೀರ್ಥಯಾತ್ರೆಯಾಗಿದೆ. ಹೀಗಾಗಿ, ಈ‌ ಬಾರಿ ಪ್ರಯಾಗ್​ರಾಜ್​ಗೆ ಲಕ್ಷಾಂತರ ಜನ ಬರುತ್ತಾರೆ. ಸಂಗಮದಲ್ಲಿ ಸ್ನಾನ ಮಾಡಿ ಪಾಪ ನಿವಾರಣೆಯಾಗಿ ಮೋಕ್ಷ ಪ್ರಾಪ್ತಿಗಾಗಿ ಪ್ರಾರ್ಥಿಸುತ್ತಾರೆ. ಅಲ್ಲಿಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಐಆರ್​​ಸಿಟಿಸಿ ಸುಸಜ್ಜಿತವಾದ ಅತ್ಯಾಧುನಿಕ ಟೆಂಟ್ ನಿರ್ಮಿಸಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಎರಡು ವಿಧದ ಟೆಂಟ್ ವ್ಯವಸ್ಥೆ ಇದ್ದು, ಅದಕ್ಕೆ ತಕ್ಕಂತೆ ದರ ನಿಗದಿ ಪಡಿಸಲಾಗಿದೆ. ಬೆಳಗಿನ‌ ಉಪಹಾರ, ಭೋಜನವೂ ಇದರಲ್ಲಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಬೆಲೆಬಾಳುವ ಮಲಗುವ ಕೋಣೆಗಳು, ಎನ್-ಸೂಟ್ ಸುಸಜ್ಜಿತವಾದ ಸ್ನಾನಗೃಹಗಳು, ರೂಮ್ ಹೀಟರ್ ಮತ್ತು ಬಿಸಿ ನೀರಿನ ವ್ಯವಸ್ಥೆ ಇರಲಿದೆ.
ಈವೆಂಟ್​​ಗಳ ಲೈವ್ ಸ್ಟ್ರೀಮಿಂಗ್​ನೊಂದಿಗೆ ಹೆಚ್ಚುವರಿಯಾಗಿ ಏರ್ ಕಂಡೀಷನರ್, ಎಲ್​ಇಡಿ ಟಿವಿಗಳನ್ನು‌ ಇದು ಒಳಗೊಂಡಿದೆ‌.
24 ಗಂಟೆಗಳ ಭದ್ರತೆ, ಫೈರ್-ರೆಸಿಸ್ಟೆಂಟ್ ಟೆಂಟ್ಸ್ ಇದಾಗಿದೆ , ಆರಾಮದಾಯಕ ಡೈನಿಂಗ್ ಹಾಲ್​​​ಗಳಲ್ಲಿ ಅತಿಥಿಗಳಿಗಾಗಿ ಬಫೆ ಕ್ಯಾಟರಿಂಗ್​ ಸೇವೆಗಳು ಲಭ್ಯವಿದೆ.
24 ಗಂಟೆಗಳ ವೈದ್ಯಕೀಯ ಸೇವೆ ಇರಲಿದೆ , ಆಕರ್ಷಣೆಗಳು ಮತ್ತು ಸ್ನಾನದ ಪ್ರದೇಶಗಳಿಗೆ ಶಟರ್ ಸೇವೆಗಳನ್ನು ಹೊಂದಿವೆ.
ಸುಲಭ ಚಲನಶೀಲತೆಗಾಗಿ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಕಾರ್ಟ್​ಗಳು ಇರಲಿವೆ.
ಸೆಲೆಬ್ರಿಟಿಗಳು/ಪ್ರಮುಖ ವ್ಯಕ್ತಿಗಳಿಂದ ದೈನಂದಿನ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಅಧ್ಯಾತ್ಮಿಕ ಪ್ರವಚನಗಳು ನಡೆಯಲಿದೆ , ಯೋಗ/ಬೈಕಿಂಗ್/ಸ್ಟಾ ಸೌಲಭ್ಯ ಒದಗಿಸಲಾಗುತ್ತದೆ.
ಇನ್ ಹೌಸ್ ಅತಿಥಿಯಾಗಿ ನದಿ ದಂಡೆಯ ಬಳಿ ಕಾರ್ಯನಿರ್ವಾಹಕ ಕೋಣೆ, ತಿನಿಸುಗಳು, ವಾಶರೂಂಗಳ ಸೌಲಭ್ಯವೂ ಲಭ್ಯವಿರಲಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...