spot_img
spot_img

MAHAKUMBH BUSINESS:ಕರ್ನಾಟಕದ ಬಜೆಟ್ ಗಾತ್ರ ಮೀರಿಸಿದ ಮಹಾ ಕುಂಭಮೇಳದ ಆರ್ಥಿಕ ವಹಿವಾಟು!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ಈ ಬಗ್ಗೆ ಬುಧವಾರ ಮಾಹಿತಿ ಹಂಚಿಕೊಂಡಿರುವ ಅಖಿಲ ಭಾರತ BUSINESSಗಳ ಒಕ್ಕೂಟದ (CAIT) ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, “ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಉತ್ಸವದಲ್ಲಿ ಸರಕು ಮತ್ತು ಸೇವೆಗಳ ಮೂಲಕ 3 ಲಕ್ಷ ಕೋಟಿ ರೂಪಾಯಿ (360 ಬಿಲಿಯನ್ ಅಮೆರಿಕನ್​ ಡಾಲರ್​)ಗಿಂತ ಹೆಚ್ಚಿನ ವ್ಯವಹಾರವನ್ನು ಗಳಿಸಿದೆ.

ಇದು ಭಾರತದ ಅತಿದೊಡ್ಡ ಆರ್ಥಿಕ ಕಾರ್ಯಕ್ರಮಗಳಲ್ಲಿ ಒಂದು” ಎಂದು ಹೇಳಿದರು.ಸನಾತನ ಧರ್ಮದ ಐತಿಹಾಸಿಕ ಉತ್ಸವ ಮಹಾ ಕುಂಭಮೇಳದ ಆತಿಥ್ಯ ವಹಿಸಿರುವ ಉತ್ತರ ಪ್ರದೇಶದ ‘ಪ್ರಯಾಗ್​ರಾಜ್’ ಕಂಡುಕೇಳರಿಯದ ಆರ್ಥಿಕ ವ್ಯವಹಾರ ನಡೆಸಿ ದಾಖಲೆ ನಿರ್ಮಿಸಿದೆ.ಪ್ರಯಾಗ್​ರಾಜ್​​ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಸಂಬಂಧಿಸಿದ ಆರ್ಥಿಕ ವಹಿವಾಟು ಹೆಚ್ಚೂ ಕಡಿಮೆ ಕರ್ನಾಟಕ ರಾಜ್ಯದ ಬಜೆಟ್​​ ಗಾತ್ರದಷ್ಟಿದೆ.45 ದಿನ ನಡೆಯುವ ಕುಂಭಮೇಳದಲ್ಲಿ 38 ದಿನಗಳಲ್ಲೇ 3 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ವ್ಯವಹಾರ ನಡೆಸಿದೆ.

ಇದು 2024-25ರ ಕರ್ನಾಟಕ ರಾಜ್ಯ ಬಜೆಟ್​​ನ (3.70 ಲಕ್ಷ ಕೋಟಿ ರೂ) ಗಾತ್ರ ಮತ್ತು 2025-26ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ರಕ್ಷಣಾ ವಲಯಕ್ಕೆ(6.81 ಲಕ್ಷ ಕೋಟಿ ರೂ) ಮೀಸಲಿಟ್ಟ ಅನುದಾನದಲ್ಲಿ ಅರ್ಧಭಾಗವಾಗಿದೆ.”144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾ ಕುಂಭಮೇಳವು ಜನವರಿ 13ರಿಂದ ಆರಂಭವಾಗಿದೆ. ಕಳೆದ 38 ದಿನಗಳಲ್ಲಿ 3 ಲಕ್ಷ ಕೋಟಿ ರೂಪಾಯಿಯಷ್ಟು ಅಗಾಧವಾದ ಆರ್ಥಿಕ ವ್ಯವಹಾರವಾಗಿದೆ. ಪ್ರಯಾಗ್​ರಾಜ್​​ಗೆ ಈವರೆಗೂ 56 ಕೋಟಿಗೂ ಅಧಿಕ ಜನರು ಭೇಟಿ ನೀಡಿದ್ದಾರೆ” ಎಂದು ಅವರು ಅಂಕಿಅಂಶ ನೀಡಿದರು.

World’s Largest Human Festival:“ಉತ್ತರ ಪ್ರದೇಶದ ಆರ್ಥಿಕತೆಗೆ ಗಮನಾರ್ಹ ಉತ್ತೇಜನ ನೀಡಿದೆ. ಹೊಸ BUSINESS ಅವಕಾಶಗಳನ್ನು ಸೃಷ್ಟಿಸಿದೆ. ಆತಿಥ್ಯ, ವಸತಿ, ಆಹಾರ, ನೀರು, ಸಾರಿಗೆ, ಸಾಗಣೆ, ಧಾರ್ಮಿಕ ಉಡುಪು, ಪೂಜಾ ಸಾಮಗ್ರಿ, ಕರಕುಶಲ ವಸ್ತುಗಳು, ಜವಳಿ, ಆರೋಗ್ಯ, ಮಾಧ್ಯಮ, ಜಾಹೀರಾತು, ಮನರಂಜನೆ, ನಾಗರಿಕ ಸೇವೆಗಳಾದ ಟೆಲಿಕಾಂ, ಮೊಬೈಲ್, ಎಐ ಆಧಾರಿತ ತಂತ್ರಜ್ಞಾನ, ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಉಪಕರಣಗಳು ಸೇರಿದಂತೆ ಹಲವಾರು BUSINESS ವಲಯಗಳು ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆ ನಡೆಸಿವೆ” ಎಂದು ಖಂಡೇಲ್ವಾಲ್ ತಿಳಿಸಿದರು.

“ಮಹಾ ಕುಂಭಮೇಳವು ವಿಶ್ವದಲ್ಲಿಯೇ ನಡೆದ ಅತಿದೊಡ್ಡ ಮಾನವ ಉತ್ಸವವಾಗಿದೆ. ನಂಬಿಕೆ ಮತ್ತು ಆರ್ಥಿಕತೆಯ ನಡುವಿನ ಸಂಪರ್ಕವಾಗಿದೆ. ಡೈರಿಗಳು, ಕ್ಯಾಲೆಂಡರ್‌ಗಳು, ಸೆಣಬಿನ ಚೀಲಗಳು ಮತ್ತು ಲೇಖನ ಸಾಮಗ್ರಿಗಳಂತಹ ಉತ್ಪನ್ನಗಳ ಮಾರಾಟದಿಂದ ಸ್ಥಳೀಯ ವ್ಯಾಪಾರಕ್ಕೆ ಜೀವಕಳೆ ಬಂದಿದೆ” ಎಂದರು.

Business within 150 km radius of Prayag:ಮಹಾಕುಂಭ ಆರಂಭಕ್ಕೂ ಮುನ್ನ, 40 ಕೋಟಿ ಭಕ್ತರ ಆಗಮನ ಮತ್ತು ಸುಮಾರು 2 ಲಕ್ಷ ಕೋಟಿ ರೂಪಾಯಿಗಳ ವ್ಯಾಪಾರ-ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನಿರೀಕ್ಷೆಗಳು ಮೀರಿದ ಭಕ್ತರು ಆಗಮಿಸುತ್ತಿದ್ದಾರೆ. ಕುಂಭಮೇಳವು ಫೆಬ್ರವರಿ 26ರಂದು ಸಂಪನ್ನವಾಗಲಿದ್ದು, ಸುಮಾರು 60 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದು ಮತ್ತಷ್ಟು ಕೋಟಿಗಳ ವ್ಯಾಪಾರ ವಹಿವಾಟಿಗೆ ಸಾಕ್ಷಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಯಾಗ್​ರಾಜ್​ ಮಾತ್ರವಲ್ಲದೇ, ಅದರ 150 ಕಿ.ಮೀ ವ್ಯಾಪ್ತಿಯಲ್ಲಿ ಗಮನಾರ್ಹ ವ್ಯಾಪಾರ ಕಂಡುಬಂದಿದೆ. ಮಹಾ ಕುಂಭಮೇಳದಲ್ಲಿ ಮಿಂದೇಳಲು ಬಂದ ಭಕ್ತರು ಅಯೋಧ್ಯೆ, ಕಾಶಿ, ವಾರಾಣಸಿ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇದು ಸ್ಥಳೀಯ ಆರ್ಥಿಕತೆಗೆ ಬಲ ತುಂಬಿದೆ ಎಂದು ವಿಶ್ಲೇಷಿಸಲಾಗಿದೆ.

How much did the government spend?: ಇದರಲ್ಲಿ ಫ್ಲೈಓವರ್‌ಗಳು, ರಸ್ತೆಗಳು, ಅಂಡರ್‌ಪಾಸ್‌ಗಳು, ಘಾಟ್​ಗಳನ್ನು ನಿರ್ಮಿಸಲಾಗಿದೆ. ಮಹಾಕುಂಭಕ್ಕಾಗಿಯೇ 1,500 ಕೋಟಿ ರೂಪಾಯಿ ಮೀಸಲಿಡಲಾಗಿದೆ.ಪ್ರಯಾಗ್‌ರಾಜ್‌ನಲ್ಲಿ ಮೂಲಸೌಕರ್ಯಗಳ ವ್ಯವಸ್ಥೆಗೆ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರವು 7,500 ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿದೆ.

 

ಇದನ್ನು ಓದಿರಿ :New India Cooperative Bank Case: Mumbai Police EOW Summons Auditors For Questioning

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...