Mahakumbha Nagar (Uttar Pradesh) News:
ಮಂಗಳವಾರ ಶ್ರೀ ಪಂಚಾಯತಿ ಆಖಾಡಾ ಮಹಾನಿರ್ವಾಣಿ ಸದಸ್ಯರು ಮತ್ತು ಶ್ರೀ ಶಂಭು ಪಂಚಾಯತಿ ಅಟಲ್ ಅಖಾಡಾ ಸದಸ್ಯರು ಮೊದಲು ‘ಅಮೃತ ಸ್ನಾನ’ ಮಾಡಿದರು. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ MAHAKUMBHA MELAದ ಮೊದಲ ಅಮೃತ ಸ್ನಾನಕ್ಕಾಗಿ ನಿರಂಜನಿ ಅಖಾಡದ ಮೆರವಣಿಗೆಗೆ ಆಧ್ಯಾತ್ಮಿಕ ನಾಯಕ ಸ್ವಾಮಿ ಕೈಲಾಶಾನಂದ ಗಿರಿ ಚಾಲನೆ ನೀಡಿದರು.
ವಿವಿಧ ಅಖಾಡಾಗಳ ಸಂತರು ಮತ್ತು ನಾಗಾ ಸಾಧುಗಳು ಸೇರಿದಂತೆ ಸುಮಾರು 3.5 ಕೋಟಿ ಭಕ್ತರು ಮಕರ ಸಂಕ್ರಾಂತಿ ದಿನದಂದು ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ MAHAKUMBHA MELAದ ‘ಅಮೃತ ಸ್ನಾನ’ ಮಾಡಿ ಪುನೀತರಾಗಿದ್ದಾರೆ. ಸೋಮವಾರ ‘ಪುಷ್ಯ ಪೂರ್ಣಿಮಾ’ ದಿನದಂದು ಮೊದಲ ‘ಸ್ನಾನ’ ನಡೆದಿತ್ತು. MAHAKUMBHA MELAದಲ್ಲಿ ವಿವಿಧ ಪಂಗಡಗಳ 13 ಅಖಾಡಗಳು ಭಾಗವಹಿಸುತ್ತವೆ.
ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಗೆ ಒತ್ತು ನೀಡುವ ಮೂಲಕ ಹೆಸರುವಾಸಿಯಾಗಿರುವ ನಿರಂಜನಿ ಅಖಾಡಾ ಈ MAHAKUMBHA MELAದಲ್ಲಿ ಭಾಗವಹಿಸುವ ಪ್ರಮುಖ ಅಖಾಡಾಗಳಲ್ಲಿ ಒಂದಾಗಿದೆ. ಇದು ಆಧ್ಯಾತ್ಮ ಬಗ್ಗೆ ಒಲವು ಹೊಂದಿರುವವರಿಗೆ ಮಾರ್ಗದರ್ಶನ ನೀಡುತ್ತದೆ.
“ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ MAHAKUMBHA MELA ನಡೆಯುತ್ತಿದೆ. ರಾಜ್ಯದ ಜನತೆಗೆ ಅಭಿನಂದನೆಗಳು. ಪುಣ್ಯ ಫಲ ನೀಡಲಿ, ಮಹಾಕುಂಭ ನಡೆಯಲಿ. ಈ ಪವಿತ್ರ ಕಾರ್ಯಕ್ರಮವು ಭಾರತದ ಸನಾತನ ಸಂಸ್ಕೃತಿ ಮತ್ತು ನಂಬಿಕೆಗೆ ಜೀವಂತ ಸಾಕ್ಷಿಯಾಗಿದೆ” ಎಂದಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಮೊದಲ ಅಮೃತ ಸ್ನಾನದ ದಿನದಂದು 3.50 ಕೋಟಿಗೂ ಹೆಚ್ಚು ಭಕ್ತರು, ಸಂತರು ಮತ್ತು ಸಾಧುಗಳು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಮೊದಲು ಅಮೃತ ಸ್ನಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸನಾತನ ಧರ್ಮ, MAHAKUMBHA MELAದ ಆಡಳಿತ ಮಂಡಳಿ, ಸ್ಥಳೀಯ ಆಡಳಿತ, ಪೊಲೀಸರು, ನೈರ್ಮಲ್ಯ ಕಾರ್ಯಕರ್ತರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು, ಅಂಬಿಗರು ಮತ್ತು ಎಲ್ಲ ಅಖಾಡಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು” ತಿಳಿಸಿದ್ದಾರೆ.
13 ಅಖಾಡಾಗಳನ್ನು ಸನ್ಯಾಸಿ (ಶೈವ), ಬೈರಾಗಿ (ವೈಷ್ಣವ) ಮತ್ತು ಉದಾಸೀನ್ ಎಂದು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಶೈವ ಅಖಾಡಾಗಳಲ್ಲಿ ಶ್ರೀ ಪಂಚ ದಶನಮ್ ಜುನಾ ಅಖಾಡಾ, ಶ್ರೀ ಪಂಚಾಯತಿ ಅಖಾಡಾ ನಿರಂಜನಿ, ಶ್ರೀ ಶಂಭು ಪಂಚಾಯತಿ ಅಟಲ್ ಅಖಾಡಾ, ಶ್ರೀ ಪಂಚಾಯತಿ ಅಖಾಡಾ ಮಹಾನಿರ್ವಾಣಿ, ಶ್ರೀ ಶಂಭು ಪಂಚಾಗ್ನಿ ಅಖಾಡಾ, ಶ್ರೀ ಪಂಚದಶನಂ ಆವಾಹನ ಅಖಾಡಾ ಮತ್ತು ತಪೋನಿಧಿ ಪಂಚಾ ಅಖಾಡಾ ಪ್ರಮುಖ ಅಖಾಡಾಗಳಾಗಿವೆ.
ತ್ರಿವೇಣಿ ಸಂಗಮದಲ್ಲಿ ‘ಹರ ಹರ ಮಹಾದೇವ್’, ‘ಜೈ ಶ್ರೀ ರಾಮ್’ ಮತ್ತು ‘ಜೈ ಗಂಗಾ ಮಾತೆ’ ಘೋಷಣೆಗಳು ಎಲ್ಲೆಡೆ ಮೊಳಗಿದವು. ಚಳಿಯ ನಡುವೆ ಭಕ್ತರು ಗುಂಪು ಗುಂಪಾಗಿ ಪವಿತ್ರ ಸ್ನಾನ ಮಾಡಿದರು. ಸನಾತನ ಧರ್ಮದ 13 ಅಖಾಡಾಗಳ ಸಾಧುಗಳು ಮಂಗಳವಾರ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸೇರುವ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.
ಇದನ್ನು ಓದಿರಿ : GAVISIDDESHWARA JATRE 2025 : ದಕ್ಷಿಣ ಭಾರತದ ಕುಂಭಮೇಳ ‘ಗವಿಮಠ ರಥೋತ್ಸವ’ಕ್ಕೆ ಕ್ಷಣಗಣನೆ