Prayagraj news :
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ (Prayagraj) ನಡೆಯುತ್ತಿರುವ MAHAKUMBHMELA ಕಾಲ್ತುಳಿತ (Maha Kumbh stampede) ಸಂಭವಿಸಿತ್ತು. ಈ ದುರಂತದಲ್ಲಿ ಮನೆಯ ಸದಸ್ಯನೊಬ್ಬ ನಿಧನರಾಗಿದ್ದಾರೆ ಅಂದುಕೊಂಡ ಕುಟುಂಬ, ದಿನಕಾರ್ಯಕ್ಕೆ ಮುಂದಾಗಿತ್ತು. ಆದರೆ ಆತ, ತಿಥಿ ಕಾರ್ಯದ ದಿನ ಮನೆಗೆ ಎಂಟ್ರಿ ನೀಡಿ ಅಚ್ಚರಿ ಮೂಡಿಸಿದ್ದಾನೆ. ಖುಂಟಿ ಗುರು ಬದುಕಿ ಬಂದಿರುವ ವ್ಯಕ್ತಿ.
MAHAKUMBHMELA ಜನವರಿ 28 ರಂದು ಮೌನಿ ಅಮಾವಾಸ್ಯೆಯ ಸ್ನಾನಕ್ಕೆ ಹೋಗ್ತೀನಿ ಎಂದು ಗುರು ಹೊರಟಿದ್ದ. ಬಳಿಕ ಆತ ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಆತನ ಸಂಪರ್ಕಿಸಲು ನಡೆಸಿದ್ದ ಪ್ರಯತ್ನ ಕೂಡ ವಿಫಲವಾಗಿತ್ತು. ಹೀಗಾಗಿ ಮೌನಿ ಅಮಾವಾಸ್ಯೆಯ ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡಿದ್ದಾನೆ ಎಂದು ಕುಟುಂಬ ನಂಬಿತ್ತು. ಖುಂಟಿ ಗುರು ಮೂಲತಃ ಪ್ರಯಾಗರಾಜ್ ನಿವಾಸಿ.
ಪ್ರಯಾಗರಾಜ್ನ ಝೀರೋ ರೋಡ್ ಏರಿಯಾದ ಚಹ್ಚಂದ್ ಗಾಲಿ ನಿವಾಸಿ. ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಜನವರಿ 29 ರಂದು ನಡೆದ ಕಾಲ್ತುಳಿತದಲ್ಲಿ ಸುಮಾರು 30 ಭಕ್ತರು ನಿಧನರಾಗಿದ್ದಾರೆ. 60 ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, MAHAKUMBHMELA ಆರಂಭವಾಗಿ ಇಲ್ಲಿಯವರೆಗೆ ಒಟ್ಟು 50 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ತಿಳಿಸಿದೆ.
2 ವಾರ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತ ನಿಧನ ಆಗಿರಬಹುದು ಅಂದುಕೊಂಡ ಕುಟುಂಬ, ಕಾರ್ಯಗಳನ್ನ ನೆರವೇರಿಸಿತ್ತು. ಕೊನೆಯ 13ನೇ ದಿನದ ತಿಥಿ ಕಾರ್ಯದ ವೇಳೆ ಖುಂಟಿ ಗುರು ಮನೆಗೆ ಎಂಟ್ರಿ ನೀಡಿದ್ದಾನೆ. ಆತನ ನೋಡುತ್ತಿದ್ದಂತೆಯೇ ಮನೆಯವರೆಲ್ಲ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಇದನ್ನು ಓದಿರಿ : Chandrababu Naidu, Nitish Kumar Support Waqf Bill