WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Mahindra Electric SUV Booking Open News:
ಇವುಗಳನ್ನು ನವೆಂಬರ್ 2024ರಲ್ಲಿ ‘XEV 9E’ ಮತ್ತು ‘BE 6’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಎಲೆಕ್ಟ್ರಿಕ್ ಎಸ್ಯುವಿಗಳ ಬೆಲೆಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದೆ.
ದೇಶಿಯ ಕಾರು ತಯಾರಕ MAHINDRA ಆ್ಯಂಡ್ MAHINDRA ಇತ್ತೀಚೆಗೆ ತನ್ನ ಎರಡು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿದೆ.
Bookings open for new electric cars: ಆದರೂ ಕಂಪನಿಯು ಇವುಗಳ ಡೆಲಿವರಿಯನ್ನು ನಂತರ ಪ್ರಾರಂಭಿಸುತ್ತದೆ. ಡೆಲಿವರಿಯ ಸಮಯಸೂಚಿಗಳು ಈ ಕೆಳಗಿನಂತಿವೆ.ಗ್ರಾಹಕರು ಇವುಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬುಕ್ ಮಾಡಬಹುದು.
MAHINDRA ಒದಗಿಸಿದ ಮಾಹಿತಿ ಪ್ರಕಾರ, ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬುಕಿಂಗ್ ಫೆಬ್ರವರಿ 14, 2025ರಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ.ಪ್ಯಾಕ್ ಒನ್ ಮತ್ತು ಪ್ಯಾಕ್ ಒನ್ ಅಬೋವ್ ಡೆಲಿವರಿಗಳು ಆಗಸ್ಟ್ದಿಂದ ಪ್ರಾರಂಭ. ಪ್ಯಾಕ್ ತ್ರೀ ಸೆಲೆಕ್ಟ್ ರೂಪಾಂತರದ ಡೆಲಿವರಿಗಳು ಜೂನ್ನಲ್ಲಿ ಪ್ರಾರಂಭ. ಆದರೆ ಪ್ಯಾಕ್ ಟು ರೂಪಾಂತರವು ಜುಲೈನಲ್ಲಿ ಪ್ರಾರಂಭವಾಗುತ್ತದೆ. ಆದ್ರೆ ಪ್ಯಾಕ್ ತ್ರೀ ಡೆಲಿವರಿ ಮಾರ್ಚ್ 2025ರಿಂದ ಪ್ರಾರಂಭವಾಗಲಿದೆ.
Mahindra BE6 and XEV 9e Variants:ಕಂಪನಿಯು ತನ್ನ XEV 9e ಕಾರನ್ನು 4 ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 21.90 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದರ ಉನ್ನತ ರೂಪಾಂತರದ ಬೆಲೆ ರೂ. 30.50 ಲಕ್ಷ (ಎಕ್ಸ್ ಶೋ ರೂಂ) ದವರೆಗೆ ಇದೆ.
MAHINDRA BE6 ಕಾರು 5 ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.18.90 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದರ ಉನ್ನತ ರೂಪಾಂತರದ ಬೆಲೆ ರೂ. 26.90 ಲಕ್ಷ (ಎಕ್ಸ್ ಶೋ ರೂಂ) ಇದೆ.
Competitors in the market:ಈ ಎರಡು MAHINDRA ಕಾರುಗಳು ಹುಂಡೈ ಕ್ರೆಟಾ ಇವಿ, ಟಾಟಾ ಕರ್ವ್ ಇವಿ, ಎಂಜಿ ವಿಂಡ್ಸರ್ ಇವಿ ಮುಂತಾದ ಕಾರುಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಬಲ್ಲವು.