Mahindra Veero Singh Launched News:
MAHINDRA ತನ್ನ ಹೊಸ ವೀರೋ ಸಿಎನ್‌ಜಿ ಲೈಟ್ ಕಮರ್ಶಿಯಲ್ ವಾಹನವನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿ ಎರಡು ರೂಪಾಂತರಗಳಲ್ಲಿ ಪರಿಚಯಿಸಿದ್ದು, ಅದರ ವೈಶಿಷ್ಟ್ಯ, ಬೆಲೆಯ ವಿವರ ಇಲ್ಲಿದೆ.ಇದನ್ನು ಮೊದಲು ಸೆಪ್ಟೆಂಬರ್ 2024 ರಲ್ಲಿ ಪ್ರದರ್ಶಿಸಲಾಗಿದ್ದು, ಸದ್ಯ ಇದರ ಮಾರಾಟ ಪ್ರಾರಂಭವಾಗುತ್ತಿದೆ.
ಕಂಪನಿಯು MAHINDRA ವೀರೋ ಸಿಎನ್‌ಜಿಯನ್ನು ಎರಡು ರೂಪಾಂತರಗಳಲ್ಲಿ ಹೊರ ತಂದಿದೆ.ದೇಶೀಯ ವಾಹನ ತಯಾರಕ MAHINDRA ತನ್ನ ಹೊಸ ವೀರೋ ಸಿಎನ್‌ಜಿ ಲೈಟ್ ಕಮರ್ಶಿಯಲ್ ವಾಹನವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.ಬೇಸ್ 1.4 XXL SD V2 CNG ರೂಪಾಂತರದ ಬೆಲೆ 8.99 ಲಕ್ಷ ರೂ. (ಎಕ್ಸ್ ಶೋ ರೂಂ), ಟಾಪ್-ಸ್ಪೆಕ್ 1.4 XXL SD V4 (A) CNG ರೂಪಾಂತರದ ಬೆಲೆ 9.39 ಲಕ್ಷ ರೂ. (ಎಕ್ಸ್ ಶೋ ರೂಂ) ಆಗಿದೆ.
Mahindra Veero 250cc: ಇದರ ಕ್ಯಾಬಿನ್‌ನ ಸೌಕರ್ಯವನ್ನು ಮತ್ತಷ್ಟು ಸುಧಾರಿಸಲಾಗಿದೆ. ಅಷ್ಟೇ ಅಲ್ಲ, ಚಾಲಕನ ಸೌಕರ್ಯ ಮತ್ತು ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದೆ. ಇದರ ಜೊತೆಗೆ ಈ ವಿಭಾಗದಲ್ಲಿ ಮೊದಲ ಬಾರಿಗೆ ನೀಡಲಾಗಿರುವ ಹಲವು ವೈಶಿಷ್ಟ್ಯಗಳು ಉಪಯುಕ್ತವಾಗಿವೆ.
MAHINDRA ಈಗಾಗಲೇ 3.5 ಟನ್‌ಗಳಿಗಿಂತ ಕಡಿಮೆ ತೂಕದ ಲಘು ವಾಣಿಜ್ಯ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಅಲ್ಲಿ ಶೇಕಡ 51.2 ಮಾರುಕಟ್ಟೆ ಪಾಲನ್ನು ಹೊಂದಿದೆ. ಹೊಸ MAHINDRA ವೀರೋ ಸಿಎನ್‌ಜಿಯೊಂದಿಗೆ ಕಂಪನಿಯು ಈ ವಿಭಾಗದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಇದು ಭಾರತೀಯ ಮಾರುಕಟ್ಟೆಗಳಲ್ಲಿ ನಿರಂತರವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಇದು ಇ-ಕಾಮರ್ಸ್ ವ್ಯವಹಾರಗಳಿಗೆ ಸೂಕ್ತವಾಗಿದೆ.MAHINDRA ವೀರೋವನ್ನು ಕಂಪನಿಯ ಮಾಡ್ಯುಲರ್ ಅರ್ಬನ್ ಪ್ರಾಸ್ಪರ್ ಪ್ಲಾಟ್‌ಫಾರ್ಮ್ (UPP) ಮೇಲೆ ನಿರ್ಮಿಸಲಾಗಿದೆ.
ಸುರಕ್ಷತೆ, ಸಾಮರ್ಥ್ಯ ಮತ್ತು ಇಂಧನ ದಕ್ಷತೆಯ ವಿಷಯದಲ್ಲಿ ಹೊಸ ಮಾನದಂಡಗಳನ್ನು ಪರಿಚಯಿಸುವ ಮೂಲಕ ಇದು ಲಘು ವಾಣಿಜ್ಯ ವಾಹನ ವಿಭಾಗವನ್ನು ಮರು ವ್ಯಾಖ್ಯಾನಿಸುತ್ತದೆ.ರಿಕ್ಲೈನಿಂಗ್ ಡ್ರೈವರ್ ಸೀಟ್, TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.
ಅಷ್ಟೇ ಅಲ್ಲ ಏರ್ ಕಂಡಿಷನ್ ಫೀಚರ್ ಸಹ ಲಭ್ಯವಿದೆ. ಕಂಪನಿಯು ಇದರಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪವರ್ ವಿಂಡ್ಸೋ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳನ್ನು ಸಹ ಸೇರಿಸಿದೆ.ಮಹೀಂದ್ರಾ ವೀರೋದ ಪೇಲೋಡ್ ಸಾಮರ್ಥ್ಯ 1.4 ಟನ್‌ಗಳು.
ಇದು 3035 ಮಿ.ಮೀ ಸರಕು ಉದ್ದವನ್ನು ಹೊಂದಿದ್ದು, ಇದು ಅನೇಕ ಅನ್ವಯಿಕೆಗಳಿಗೆ ಸೂಕ್ತವಾಗಿದೆ. ಇದಲ್ಲದೆ, ಇದು ಮೂರು ಆಸನಗಳ ದೊಡ್ಡ ಕ್ಯಾಬಿನ್ ಹೊಂದಿದೆ. ಇದು ಡ್ರೈವರ್-ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಫಾಲ್ಸ್ ಸ್ಟಾರ್ಟ್ ಅವೈಡೆಂಸ್ ಸಿಸ್ಟಮ್ ಅನ್ನು ಹೊಂದಿದೆ.
ಇದು ಚಾಲಕ ಮತ್ತು ಪ್ರಯಾಣಿಕರಿಗೆ ಹೆಚ್ಚುವರಿ ಸುರಕ್ಷತೆಯನ್ನು ಒದಗಿಸುತ್ತದೆ.ಈ ವಾಣಿಜ್ಯ ವಾಹನದಲ್ಲಿ ಕಂಪನಿಯು ಚಾಲಕನ ಸುರಕ್ಷತೆಗೆ ವಿಶೇಷ ಒತ್ತು ನೀಡಿದೆ. MAHINDRAವೀರೋವನ್ನು ಹೈ-ಟೆನ್ಸೈಲ್ ಸ್ಟೀಲ್‌ನಿಂದ ವಿನ್ಯಾಸಗೊಳಿಸಲಾಗಿದೆ ಮತ್ತು AIS096 ಕ್ರ್ಯಾಶ್ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತದೆ.
Fuel efficiency:ಕಂಪನಿಯು ಎಂಜಿನ್ ಸ್ಟಾಪ್-ಸ್ಟಾರ್ಟ್, ಪವರ್ ಮೋಡ್ ಮತ್ತು ಡ್ರೈವರ್ ಫ್ಯೂಯಲ್ ಕೋಚಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಿದ್ದು, ಇದು ಅದರ ಇಂಧನ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಉತ್ತಮ ಎಕ್ಸ್ಲೆರೆಶನ್ ನೀಡುತ್ತದೆ.
ಈ ವಾಣಿಜ್ಯ ವಾಹನವು 150 ಲೀಟರ್‌ಗಳ ದೊಡ್ಡ CNG ಟ್ಯಾಂಕ್ ಹೊಂದಿದೆ. ಇದರ ಮೈಲೇಜ್ ಪ್ರತಿ ಕೆಜಿಗೆ 19.2 ಕಿ.ಮೀ. ವ್ಯಾಪ್ತಿ ನೀಡುತ್ತದೆ. ಶುದ್ಧ CNG ಸ್ವರೂಪದಲ್ಲಿ ಈ ವಾಹನವು 480 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.ಮಹೀಂದ್ರಾ ವೀರೋ ಸಿಎನ್‌ಜಿಯನ್ನು ಉತ್ತಮ ದಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ.
ಇದರಲ್ಲಿ ಸಿಎನ್‌ಜಿ ಎಂಜಿನ್ ಬಳಸಲಾಗಿದ್ದು, ಇದು 90 ಬಿಎಚ್‌ಪಿ ಪವರ್ ಮತ್ತು 210 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.MAHINDRA ವೀರೋ ಸಿಎನ್‌ಜಿಯಲ್ಲಿ 4.5 ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಪೆಟ್ರೋಲ್ ಟ್ಯಾಂಕ್ ತನ್ನ ವ್ಯಾಪ್ತಿಯನ್ನು 500 ಕಿಲೋಮೀಟರ್‌ಗಳಿಗೂ ವಿಸ್ತರಿಸುತ್ತದೆ. ಮುಂದಿನ ದಿನಗಳಲ್ಲಿ ಹೊಸ MAHINDRA ವೀರೋ LCV ಎಲೆಕ್ಟ್ರಿಕ್ ಆವೃತ್ತಿಯನ್ನು ಕಂಪನಿ ಪರಿಚಯಿಸಲಿದೆ.
ಇದನ್ನು ಓದಿರಿ :HOW TO SLEEP AFTER SLEEPLESS NIGHT:ತಜ್ಞರು ಸೂಚಿಸಿದ ಈ ಟಿಪ್ಸ್ ಪಾಲಿಸಿದರೆ, ಕಣ್ತುಂಬ ಬರುತ್ತೆ ನಿದ್ದೆ.