spot_img
spot_img

Makhana Health Benefits: ಮಖಾನ ತಿಂದ್ರೆ ದೇಹಕ್ಕೆ ಹಲವು ಲಾಭ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Makhana ಪಾಪ್​ಕಾರ್ನ್​ನಂತೆ ಉಬ್ಬುವ ಕಾಳುಗಳು!

ಪಾಪ್​ಕಾರ್ನ್​ನಂತೆ ಉಬ್ಬುವ ಈ ಕಾಳುಗಳು ಆರೋಗ್ಯಕ್ಕೆ ಹಲವು ಪ್ರಯೋಜನ ನೀಡುತ್ತದೆ ಎಂಬುದು ತಿಳಿದಿದೆಯಾ? ಮಖಾನ ತಿಂದಿದ್ದೀರಾ? ಇದನ್ನು ಆಂಗ್ಲ ಪದದಲ್ಲಿ ಫಾಕ್ಸ್​ ನಟ್​ ಎಂದು ಕರೆಯುತ್ತಾರೆ.

Makhana
Makhana

ಸ್ವಲ್ಪ ದುಬಾರಿ, ಆದರೆ ತುಂಬಾನೇ ಆರೋಗ್ಯಕಾರಿ!

ಮಖಾನ ಎಂದು ಕರೆಯಲ್ಪಡುವ ಲೋಟಸ್‌ ಅಥವಾ ಫಾಕ್ಸ್ ಸೀಡ್ಸ್ ಹಲವರಿಗೆ ಅಪರಿಚಿತ. ಇದು ಯಾವುದೋ ಹೊಸ ಹೆಸರು ಎಂದು ತಿಳಿದು ಕೊಳ್ಳುವವರಿಗೆ ತಾವರೆ ಬೀಜಗಳು ಎಂದು ಸುಲಭವಾಗಿ ಹೇಳಬಹುದು. ತಮ್ಮಲ್ಲಿನ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಮನುಷ್ಯರಿಗೆ ಒದಗಿಸುವ ಕೆಲಸ ಮಖಾನ ಬೀಜಗಳದ್ದು. ಚೀನಾ ದೇಶದಲ್ಲಿ ಇವುಗಳನ್ನು ಔಷಧಿ ತಯಾರಿಕೆಯಲ್ಲಿ ಉಪಯೋಗ ಮಾಡುತ್ತಾರೆ. ಮೂತ್ರ ಪಿಂಡಗಳು ಮತ್ತು ಗುಲ್ಮ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಇವುಗಳನ್ನು ಸೇವಿಸಬಹುದು. ಇನ್ನು ಡ್ರೈ ಫ್ರೂಟ್ ಗಳಾದ ಬಾದಾಮಿ ಬೀಜಗಳು, ವಾಲ್ನಟ್, ಗೋಡಂಬಿ ಬೀಜಗಳೂ ಕೂಡ ಫಾಕ್ಸ್ ಸೀಡ್ಸ್ ಗೆ ಹೋಲಿಸಿದರೆ, ಪೌಷ್ಟಿಕ ಸತ್ವಗಳಲ್ಲಿ ತಳಹದಿಯಲ್ಲಿ ನಿಂತಿರುತ್ತವೆ. ಫಾಕ್ಸ್ ಸೀಡ್ಸ್ ಗಳ ಸೇವನೆ ವಿಷಯಕ್ಕೆ ಬಂದರೆ ಇವುಗಳ ಮೇಲೆ ಕೆಲವು ಮಸಾಲೆ ಪದಾರ್ಥಗಳನ್ನು ಸಿಂಪಡಿಸಿ ಹುರಿದು ತಿನ್ನಬಹುದು. ಇವು ನಾಲಿಗೆಗೆ ಬಹಳ ರುಚಿ ಕೊಡುತ್ತವೆ. ಫಾಕ್ಸ್ ಸೀಡ್ಸ್ ಗಳ ಹಲವಾರು ಆರೋಗ್ಯ ಪ್ರಯೋಜನಗಳು ಈ ರೀತಿ ಇವೆ

ಮಖನಾದ ಪ್ರಯೋಜನ

ಮಖನಾದ ಪ್ರಯೋಜನ ತಿಳಿದವರು ಇದನ್ನು ಆಹಾರದಲ್ಲಿ ಸೇರಿಸಿ ಸೇವಿಸುತ್ತಾರೆ. ಪ್ರೋಟೀನ್​​, ಫೈಬರ್ ಅಂಶ ಇದರಲ್ಲಿರುವ ಕಾರಣ ಹೃದಯದ ಆರೋಗ್ಯವನ್ನು ವೃದ್ಧಿಸುವುದರ ಜೊತೆ ಕಾಪಾಡಲು ಸಹಾಯಕ. ಇದಲ್ಲದೆ ಜೀರ್ಣಕ್ರಿಯೆಗೂ ಮಖಾನ ಸಹಾಯ ಮಾಡುತ್ತದೆ. ಮಖಾನ ಸೇವಿಸುವುದರಿಂದ ಆರೋಗ್ಯ ಲಾಭ ಪಡೆಯಬಹುದಾಗಿದೆ. ತಿನ್ನಲು ರುಚಿಕರವಾಗಿರುವ ಈ ಮಖಾನ ಮಾನವನ ದೇಹದಲ್ಲಿರುವ ಮೂಳೆಯನ್ನು ಬಲಪಡಿಸುವಂತಹ ಶಕ್ತಿಯನ್ನು ಹೊಂದಿದೆ, ಕಾಲ್ಸಿಯಂ ಅಂಶ ಇದರಲ್ಲಿ ಜಾಸ್ತಿ ಇರುವ ಕಾರಣ ಮೂಳೆಯ ಆರೋಗ್ಯ ವೃದ್ಧಿಸುತ್ತದೆ.

ಮಖಾನ ಆರೋಗ್ಯ ದೃಷ್ಟಿಯಿಂದ

ಆರೋಗ್ಯ ದೃಷ್ಟಿಯಿಂದ ಮಖಾನ ಸೇವಿಸಬಹುದಾಗಿದೆ. ಒಬ್ಬ ವ್ಯಕ್ತಿ 20 ಗ್ರಾಂ ತಿಂದರೆ ಬಹಳ ಒಳ್ಳೆಯದು. ಬಾಯಿಗೆ ಹಿಡಿಸುವ ಈ ಮಖಾನ ದೇಹಕ್ಕೂ ಲಾಭ ಕೊಡುತ್ತದೆ ಎಂದರೆ ಲಾಭವೇ ತಾನೆ. ಮಖಾನದಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲಿಯಂ ಅಂಶ ಇವೆ. ಆರೋಗ್ಯದ ತೂಕವನ್ನು ಕಾಪಾಡುವ ಶಕ್ತಿಯು ಇದಕ್ಕಿದೆ. ಅನೇಕರು ಇದನ್ನು ಹುರಿದು ಸೇವಿಸುತ್ತಾರೆ. ಇನ್ನು ಕೆಲವರು ಮಸಾಲೆ ಸೇರಿಸಿ ಸವಿಯುತ್ತಾರೆ. ಬಿಡಿಸಿ ಹೇಳಬೇಕೆಂದರೆ ಬೆಳಗಿನ ಸಮಯದಲ್ಲಿ ಒಂದು ಹಿಡಿ ಮಖಾನ ಬೀಜಗಳನ್ನು ಸೇವಿಸಿದರೆ ಇಡೀ ದಿನ ಹಸಿವಿಲ್ಲದೆ ಸುಲಭವಾಗಿ ತಮ್ಮ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಒಂದು ಬಟ್ಟಲು ಮಖಾನ ಬೀಜಗಳನ್ನು ಸೇವಿಸಿದರೂ ಸಹ ನಿಮ್ಮ ಕ್ಯಾಲರಿಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅಂದರೆ ಮಖಾನ ಬೀಜಗಳು ಕಡಿಮೆ ಕ್ಯಾಲೋರಿ ಅಂಶಗಳನ್ನು ಹೊಂದಿರುತ್ತವೆ.

ಬೀಜಗಳಲ್ಲಿ ಪ್ರೋಟೀನ್

ಮಖಾನ ಬೀಜಗಳಲ್ಲಿ ಪ್ರೋಟೀನ್ ಅಂಶ ಅಧಿಕವಾಗಿದೆ. ಡಯಟ್ ಮಾಡಿ ದೇಹದ ತೂಕ ಕರಗಿಸಿಕೊಳ್ಳುವ ವ್ಯಕ್ತಿಗಳಿಗೆ ಉಪವಾಸದ ಸಮಯದಲ್ಲಿ ಇವುಗಳು ಸಹಾಯಕ್ಕೆ ಬರುತ್ತವೆ. ಪ್ರತಿ ದಿನ ಒಂದು ಹಿಡಿ ಮಖಾನ ಬೀಜಗಳನ್ನು ಸೇವಿಸುವುದರಿಂದ ನಿಮ್ಮ ಸೌಂದರ್ಯ ಹಾಗೂ ಯೌವ್ವನ ಹಾಗೇ ಉಳಿದು ನಿಮ್ಮ ದೇಹದ ಚರ್ಮದ ಹೊಳಪು ಹೆಚ್ಚುತ್ತದೆ. ಆದರೆ ಯಾವುದೇ ಕಾರಣಕ್ಕೂ ಮಖಾನ ಬೀಜಗಳನ್ನು ಎಣ್ಣೆಯಲ್ಲಿ ಕರಿದು ತಿನ್ನಬಾರದು. ಮಖಾನ ಬೀಜಗಳು ಮಧುಮೇಹಿ ಮತ್ತು ಹೃದಯ ರಕ್ತನಾಳಗಳ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ ಒಳ್ಳೆಯ ಆಹಾರ ಎನಿಸಿವೆ. ಏಕೆಂದರೆ ಇವುಗಳಲ್ಲಿ ದೇಹಕ್ಕೆ ಅಗತ್ಯವಿರುವ ಒಳ್ಳೆಯ ಕೊಬ್ಬಿನ ಅಂಶಗಳು ಹೇರಳವಾಗಿದ್ದು, ಸ್ಯಾಚುರೇಟೆಡ್ ಕೊಬ್ಬಿನ ಅಂಶಗಳು ಬಹಳಷ್ಟು ಕಡಿಮೆ ಇವೆ. ಇದೊಂದೇ ಕಾರಣದಿಂದ ಮನುಷ್ಯನ ದೇಹದ ತೂಕವನ್ನು ಕಡಿಮೆ ಮಾಡಬಲ್ಲ ಶಕ್ತಿಯನ್ನು ಮಖಾನ ಬೀಜಗಳು ಪಡೆದಿವೆ ಎಂದು ಯಾರು ಬೇಕಾದರೂ ಹೇಳಬಹುದು.

ಜೀರ್ಣ ಪ್ರಕ್ರಿಯೆಯಲ್ಲಿ ಸಹಾಯಕ!

ಮನುಷ್ಯನ ಜೀರ್ಣ ಪ್ರಕ್ರಿಯೆಯಲ್ಲಿ ಇದು ಬಹಳಷ್ಟು ಸಹಾಯಕ. ಸಾಮಾನ್ಯವಾಗಿ ಮನುಷ್ಯನ ಜೀರ್ಣಾಂಗ ಬಹಳ ಚೆನ್ನಾಗಿ ಕೆಲಸ ಮಾಡಬೇಕೆಂದರೆ ನಾರಿನ ಅಂಶ ಅತ್ಯವಶ್ಯಕ. ಫಾಕ್ಸ್ ನಟ್ಸ್ ಗಳು ಮನುಷ್ಯನ ದೇಹದಿಂದ ವಿಷಕಾರಿ ಅಂಶಗಳನ್ನು ಹೊಡೆದೋಡಿಸುವಂಥಹ ಏಜೆಂಟ್ ಗಳಾಗಿ ಕೆಲಸ ಮಾಡುತ್ತವೆ. ಅದರಲ್ಲೂ ಗುಲ್ಮದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ರಾಮಬಾಣ ಎಂದು ನಂಬಲಾಗಿದೆ. ಮನುಷ್ಯನ ಬಿಳಿ ರಕ್ತ ಕಣಗಳನ್ನು ಮತ್ತು ಪ್ಲೇಟ್ಲೆಟ್ ಗಳನ್ನು ಶೇಖರಿಸಿಡುವ ಗುಲ್ಮ ರೋಗ ನಿರೋಧಕ ವ್ಯವಸ್ಥೆಯ ಕೇಂದ್ರಬಿಂದುವಾಗಿದೆ. ಮಖಾನ ಬೀಜಗಳು ಕೆಂಪು ರಕ್ತ ಕಣಗಳನ್ನು ಪುನಶ್ಚೇತನಗೊಳಿಸುತ್ತವೆ.

ಮಖಾನ ಬೀಜಗಳಲ್ಲಿ ಮ್ಯಾಗ್ನಿಷಿಯಂ

ಮಖಾನ ಬೀಜಗಳಲ್ಲಿ ಮ್ಯಾಗ್ನಿಷಿಯಂ ಮತ್ತು ಪೊಟ್ಯಾಷಿಯಂ ಅಂಶ ಹೆಚ್ಚಿದ್ದು ಸೋಡಿಯಂ ಅಂಶ ಕಡಿಮೆ ಇದೆ. ಇದು ದೇಹದ ತೂಕದ ಮೇಲೆ ಗಮನ ಇಟ್ಟು ಡಯಟ್ ಮಾಡುತ್ತಿರುವ ಮಂದಿಗೆ ಬಹಳಷ್ಟು ಸಹಾಯಕ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಧಿಕ ರಕ್ತದ ಒತ್ತಡ ಹೊಂದಿರುವ ಜನರಿಗೆ ಮಖಾನ ಬೀಜಗಳು ಹೇಳಿ ಮಾಡಿಸಿದ ಆಹಾರಗಳಾಗಿವೆ. ಏಕೆಂದರೆ ಇವುಗಳಲ್ಲಿ ಹೆಚ್ಚಿನ ಪೊಟ್ಯಾಶಿಯಂ ಅಂಶ ಮತ್ತು ಕಡಿಮೆ ಸೋಡಿಯಂ ಅಂಶ ಇರುವುದರಿಂದ ರಕ್ತದ ಒತ್ತಡದಲ್ಲಿ ಯಾವುದೇ ಬಗೆಯ ಹೆಚ್ಚು ಕಡಿಮೆ ಆಗದೇ ನಿಯಂತ್ರಣದಲ್ಲಿರುತ್ತದೆ. ಆದ್ದರಿಂದ ಇನ್ನು ಮುಂದೆ ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವವರು ಮಖಾನ ಬೀಜಗಳನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಾಮಾನ್ಯವಾಗಿ ಈಗಿನ ಸಮಯದಲ್ಲಿ ಮಧುಮೇಹ ಆರ್ಥ್ರೈಟಿಸ್ ಮತ್ತು ರ್ಯುಮ್ಯಾಟಿಸ್ಮ್ ಆರೋಗ್ಯ ಸಮಸ್ಯೆಗಳಿಗೆ ಬಹು ಮುಖ್ಯ ಕಾರಣವೇ ಉರಿಯೂತ ಎಂದು ಹೇಳಲಾಗುತ್ತದೆ. ಮಖಾನ ಬೀಜಗಳು ಆಂಟಿ – ಬ್ಯಾಕ್ಟರಿಯಲ್ ಗುಣ ಲಕ್ಷಣಗಳನ್ನು ಸಹ ಹೊಂದಿವೆ. ಇದರಿಂದ ಹಲವಾರು ಬ್ಯಾಕ್ಟೀರಿಯಾ ಸಂಬಂಧಿತ ಸಮಸ್ಯೆಗಳು ದೂರಾಗುತ್ತವೆ.

ಇನ್ನಷ್ಟು ಓದಿರಿ:

Darshan Thoogudeepa Case Update: ಎಸ್ಪಿ ಶೋಭಾರಾಣಿ ಮಹತ್ವದ ಮಾಹಿತಿ ಏನು?

Darshan Thoogudeepa Case Update: ಎಸ್ಪಿ ಶೋಭಾರಾಣಿ ಮಹತ್ವದ ಮಾಹಿತಿ ಏನು?

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...

ಅಪ್ರಾಪ್ತ ಬಾಲಕಿಯರಿಗೆ ಮಾದರಿಯಾಗಿದ್ದಾಳೆ.! ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ!

ಬೀದರ್, ಕಲಬುರಗಿ: ಬಸವಕಲ್ಯಾಣ ತಾಲೂಕಿನ ಹಳ್ಳಿಯೊಂದರಲ್ಲಿ 9ನೇ ತರಗತಿ ಓದುತ್ತಿರುವ 14 ವರ್ಷದ ಈ ಬಾಲಕಿ ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ ದಿಟ್ಟ ಹೋರಾಟಗಾರ್ತಿ, ಇತರೆ...