Makhana Health Benefits:
ಬಿಹಾರದಲ್ಲಿ ಮಖಾನಾ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಶನಿವಾರ) ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದರು. ಇದರ ಈ ಹಿನ್ನೆಲೆಯಲ್ಲಿ ಅನೇಕರು ಮಖಾನ ಬಗ್ಗೆ ಅಂತರ್ಜಾಲದಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ.
MAKHANA HEALTH BENEFITS ಮಖಾನ ಬೀಜಗಳಲ್ಲಿ ಪ್ರೋಟೀನ್, ಫೈಬರ್, ಖನಿಜಗಳು ಸಮೃದ್ಧವಾಗಿವೆ. ಇದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ದೊರೆಯುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಕೇಂದ್ರ ಬಜೆಟ್ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ‘ಮಖಾನ’ಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ.
MAKHANA HEALTH BENEFITS ಮಖಾನ ಎಂದು ಕರೆಯುವ ಕಮಲದ ಬೀಜಗಳು ಅನೇಕ ಪೋಷಕಾಂಶಗಳು ಹೇರಳವಾಗಿವೆ. ಮಖಾನದಲ್ಲಿರುವ ಪ್ರೋಟೀನ್, ಫೈಬರ್, ಉತ್ಕರ್ಷಣ ನಿರೋಧಕಗಳು, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು ದೇಹಕ್ಕೆ ಪ್ರಯೋಜನಕಾರಿ ಎಂದು ತಜ್ಞರು ತಿಳಿಸುತ್ತಾರೆ. 2017ರಲ್ಲಿ ಜರ್ನಲ್ ಆಫ್ ಫುಡ್ ಸೈನ್ಸ್‌ನಲ್ಲಿ (Journal of Food Science) ಪ್ರಕಟವಾದ ‘ಮಖಾನಾದ ಪೌಷ್ಟಿಕಾಂಶ ಮತ್ತು ಫೈಟೊಕೆಮಿಕಲ್ ವಿಶ್ಲೇಷಣೆ (ಯೂರಿಯಾಲ್ ಫೆರಾಕ್ಸ್ ಸಾಲಿಸ್ಬ್)’ (Nutritional and Phytochemical Analysis of Makhana (Euryale ferox Salisb) ಎಂಬ ಅಧ್ಯಯನದಲ್ಲಿ ಇದೇ ವಿಷಯವು ತಿಳಿದಿದೆ.
Let’s know about the various health benefits of consuming Makhana :
- ಮಧುಮೇಹದಿಂದ ಬಳಲುತ್ತಿರುವ ಜನರು ವಾರಕ್ಕೊಮ್ಮೆ ಮಖಾನಾ ಸೇವಿಸಿದರೆ, ರಕ್ತದಲ್ಲಿನ ಶುಗರ್ ಲೆವಲ್ ಕಡಿಮೆಯಾಗುತ್ತದೆ. ಇದರಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
- ಮಖಾನದಲ್ಲಿರುವ ಹೆಚ್ಚಿನ ನಾರಿನ ಅಂಶವು ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
- ಮಖಾನದಲ್ಲಿರುವ ಫೈಟೊನ್ಯೂಟ್ರಿಯೆಂಟ್‌ಗಳು, ಆಲ್ಕಲಾಯ್ಡ್‌ಗಳು, ಸಪೋನಿನ್‌ಗಳು, ಗ್ಯಾಲಿಕ್ ಆಮ್ಲಗಳು ಹೃದಯಕ್ಕೆ ಆರೋಗ್ಯಕ್ಕೆ ಒಳ್ಳೆಯದು.
- ಮಖಾನದಲ್ಲಿರುವ ಮೆಗ್ನೀಸಿಯಮ್ ರಕ್ತ ಪರಿಚಲನೆ ಹಾಗೂ ಆಮ್ಲಜನಕದ ಪೂರೈಕೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.
- ಮಖಾನವು ಗ್ಲುಟನ್-ಮುಕ್ತವಾಗಿರುವುದಲ್ಲದೆ ಇದರಲ್ಲಿ ಸೋಡಿಯಂ, ಕೊಲೆಸ್ಟ್ರಾಲ್ ಕಡಿಮೆ ಹಾಗೂ ಪ್ರೋಟೀನ್ ಅಧಿಕವಾಗಿದೆ. ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಜೊತೆಗೆ ಮೂತ್ರಪಿಂಡಗಳ ಆರೋಗ್ಯಕ್ಕೆ ಉತ್ತಮ ಮತ್ತು ಆಕ್ಸಿಡೇಟಿವ್ ಒತ್ತಡದಿಂದ 6) ತಡೆಯುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
- ದೇಹದಲ್ಲಿ ತ್ಯಾಜ್ಯ, ಕಲ್ಮಶಗಳು ಸಂಗ್ರಹವಾಗುವುದರಿಂದ ಅನೇಕ ರೋಗಗಳಿಗೆ ಗುರಿಯಾಗುತ್ತೇವೆ. ಇವುಗಳನ್ನು ಹೊರಹಾಕಲು ನಿಮ್ಮ ಆಹಾರದಲ್ಲಿ ಮಖಾನವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ತಜ್ಞರು ತಿಳಿಸುತ್ತಾರೆ. ಈ ಆಹಾರಗಳಲ್ಲಿರುವ ಥಯಾಮಿನ್ ನರಗಳ ಕಾರ್ಯವನ್ನು ಸುಧಾರಿಸುತ್ತದೆ. ಜೊತೆಗೆ ಒತ್ತಡ, ಆತಂಕ, ಖಿನ್ನತೆ ನಿವಾರಿಸುತ್ತದೆ.
- ಅಧಿಕ ತೂಕ ಹೊಂದಿರುವವರು ಮಖಾನ ಸೇವಿಸುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಪಡೆಯುತ್ತಾರೆ. ಮಖಾನದಲ್ಲಿ ಕ್ಯಾಲೋರಿಗಳು ಕಡಿಮೆ ಮಾಡುತ್ತವೆ. ಜೊತೆಗೆ ಪ್ರೋಟೀನ್ ಹಾಗೂ ಫೈಬರ್ ಅಂಶವು ನಿಮ್ಮನ್ನು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಆಹಾರ ಸೇವಿಸುವ ಬಯಕೆಯನ್ನು ನಿಯಂತ್ರಿಸಬಹುದು ಹಾಗೂ ಅಧಿಕ ತೂಕ ಕಳೆದುಕೊಳ್ಳಬಹುದು ಎಂದು ತಜ್ಞರು ವಿವರಿಸುತ್ತಾರೆ.
- ಮಖಾನದಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಸೇರಿದಂತೆ ವಿವಿಧ ಪೋಷಕಾಂಶಗಳು ಮೂಳೆಗಳು ಹಾಗೂ ಹಲ್ಲುಗಳನ್ನು ಬಲಪಡಿಸುತ್ತವೆ. ಇದರಲ್ಲಿರುವ ಕಬ್ಬಿಣಾಂಶವು ರಕ್ತಹೀನತೆ ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ.
- ಮಖಾನದಲ್ಲಿ ಸೋಡಿಯಂ ಕಡಿಮೆ ಇರುತ್ತದೆ. ಪೊಟ್ಯಾಸಿಯಮ್ ಹಾಗೂ ಮೆಗ್ನೀಸಿಯಮ್‌ನಂತಹ ಖನಿಜಗಳು ಅಧಿಕವಾಗಿವೆ. ಅದಕ್ಕಾಗಿಯೇ ಇವುಗಳನ್ನು ಆಹಾರದಲ್ಲಿ ಸೇರಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
- ಮಖಾನವು ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ಚರ್ಮದ ಸೌಂದರ್ಯವನ್ನು ಸುಧಾರಿಸಲು ಪೂರಕವಾಗಿದೆ. ಇವುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಮುಖದಲ್ಲಿನ ಮೊಡವೆಗಳು, ಸುಕ್ಕುಗಳಿಂದ ಚರ್ಮವನ್ನು ರಕ್ಷಿಸಬಹುದು ಎಂದು ತಜ್ಞರು ಬಹಿರಂಗಪಡಿಸುತ್ತಾರೆ.
ಇದನ್ನು ಓದಿರಿ : UNION BUDGET 2025 : ಜನಗಣತಿಗಾಗಿ ಕೇವಲ ₹574 ಕೋಟಿ ಹಂಚಿಕೆ