spot_img
spot_img

ಬಿದಿರಿನಿಂದ ಅಲಂಕಾರಿಕ ವಸ್ತುಗಳನ್ನ ತಯಾರಿ : ಕುಗ್ರಾಮದ ಮಹಿಳೆಯರು

spot_img
spot_img

Share post:

ಜುಪಾಂಗ್‌ಬರಿ (ಕಾಮೃಪ್): ಅಸ್ಸಾಂನ ಕಮ್ರೂಪ್​ ಜಿಲ್ಲೆಯ ಜುಪಾಂಗ್ಬರಿ ಗ್ರಾಮದ ಮಹಿಳೆಯರು ಕಾಡಿನಲ್ಲಿ ಸಿಗುವ ಬಿದಿರಿನಿಂದ ಆಭರಣ ತಯಾರಿಕೆಯಲ್ಲಿ ತೊಡಗಿ, ಕುಟುಂಬ ನಿರ್ವಹಣೆಗೆ ಆದಾಯ ಗಳಿಸುತ್ತಿದ್ದಾರೆ.
ಅಸ್ಸಾಂನ ಕಮ್ರೂಪ್ ಜಿಲ್ಲೆಯ ಜುಪಾಂಗ್ಬರಿ ಗ್ರಾಮವು ಹೇರಳವಾಗಿ ಸಿಗುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ಬಿದಿರಿನ ಆಭರಣಗಳು ಮತ್ತು ಅಲಂಕಾರಿಕ ವಸ್ತುಗಳನ್ನ ಉತ್ಪಾದಿಸುವ ಕೇಂದ್ರವಾಗಿ ಮಾರ್ಪಟ್ಟಿದೆ.
ಹಳ್ಳಿಯ ಜನರು, ವಿಶೇಷವಾಗಿ ಮಹಿಳೆಯರು, ಸಾಂಪ್ರದಾಯಿಕ ಪ್ಲಾಸ್ಟಿಕ್ ಅಥವಾ ಗಾಜಿನ ಆಭರಣಗಳಿಗಿಂತ ಭಿನ್ನವಾಗಿ ಸುಸ್ಥಿರ ಮತ್ತು ಪರಿಸರ ಸ್ನೇಹಿಯಾಗಿರುವ ಹತ್ತಿರದ ಕಾಡುಗಳ ಬಿದಿರು ಮತ್ತು ಮರಗಳ ಬೀಜಗಳನ್ನು ಬಳಸಿ ಕೃತಕ ಆಭರಣ ಕ್ಷೇತ್ರದಲ್ಲಿ ಆಭರಣ ತಯಾರಿಕೆಯಲ್ಲಿ ತೊಡಗಿದ್ದಾರೆ. ಜುಪಾಂಗ್ಬರಿ ಗ್ರಾಮದ ಒಟ್ಟು 65 ಕುಟುಂಬಗಳ ಕನಿಷ್ಠ 15 ಮಹಿಳೆಯರು ಈಗ ಈ ಕೃತಕ ಆಭರಣಗಳು ಮತ್ತು ಅಲಂಕಾರಿಕ ವಸ್ತುಗಳನ್ನ ತಯಾರಿಸುವಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಗುವಾಹಟಿ ಮತ್ತು ಇತರ ಸ್ಥಳಗಳಲ್ಲಿ ಮಾರುಕಟ್ಟೆಯನ್ನೂ ಕಂಡುಕೊಂಡಿದ್ದಾರೆ. ಬಹುತೇಕ ಅಲ್ಪ ಕೃಷಿಕ ಕುಟುಂಬಗಳಿಗೆ ಸೇರಿದ ಈ ಹಳ್ಳಿಯ ಮಹಿಳೆಯರು ಈಗ ತಮಗೊಂದು ಗುರುತನ್ನು ಸೃಷ್ಟಿಸಿಕೊಳ್ಳುವುದರ ಜೊತೆಗೆ ಕುಟುಂಬದ ಆದಾಯ ಗಳಿಸುತ್ತಿದ್ದಾರೆ.
ಈ ಬಗ್ಗೆ ಗ್ರಾಮದ ಮಹಿಳೆ ಜುನ್ಮೋನಿ ರಾಭಾ ಅವರು ಮಾತನಾಡಿ,”ನಾವು ಮೂಲತಃ ಕೃಷಿಕರು. ನನ್ನ ಪತಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಾರೆ. ನಾನು ನನ್ನ ಪತಿಗೆ ಗದ್ದೆಯಲ್ಲಿ ಸಹಾಯ ಮಾಡುತ್ತಿದ್ದೆ. ಎರಡು ವರ್ಷಗಳ ಹಿಂದೆ ನಾನು ಬಿದಿರು ಆಭರಣಗಳನ್ನು ತಯಾರಿಸುವ ತರಬೇತಿ ಪಡೆದೆ. ಅಂದಿನಿಂದ ನಾನು ಮನೆ ಕೆಲಸ ಮತ್ತು ಬಿದಿರಿನ ಆಭರಣಗಳನ್ನು ತಯಾರಿಸುವಲ್ಲಿ ತೊಡಗಿಕೊಂಡಿದ್ದೇನೆ ”ಎಂದು ಹೇಳಿದ್ದಾರೆ.
ಈ ಮಹಿಳೆಯರಲ್ಲಿ ಹೆಚ್ಚಿನವರು ರೈತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಮತ್ತು ಆಭರಣ ತಯಾರಿಕೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿಕೆಯು ಅವರಿಗೆ ಪರ್ಯಾಯ ಆದಾಯವನ್ನು ಉತ್ಪಾದಿಸುವ ಕಾರ್ಯವಿಧಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದಾಗಿ ಕೃಷಿಯು ಹೆಚ್ಚು ಲಾಭದಾಯಕವಾಗಿಲ್ಲದ ಕಾರಣ ಈ ಕುಟುಂಬಗಳು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿವೆ. ಹೀಗಾಗಿ ಆಭರಣ ತಯಾರಿಕೆಯಲ್ಲಿ ತೊಡಗಿದ್ದಾರೆ.
ಈ ಕುರಿತು ಗ್ರಾಮಸ್ಥರಾದ ಪಲ್ಲವ್ ರಭಾ ಅವರು ಮಾತನಾಡಿ, ”ಕೆಲವು ವರ್ಷಗಳ ಹಿಂದೆ ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಂಟರ್‌ಪ್ರೆನ್ಯೂರ್‌ಶಿಪ್ (IIE) ನಲ್ಲಿ ಆಭರಣ ತಯಾರಿಕೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿಕೆಯ ತರಬೇತಿಯನ್ನು ಪಡೆದೆ. ಕೆಲವು ತಿಂಗಳುಗಳ ಕಾಲ ಮನೆಯಲ್ಲಿ ಆಭರಣಗಳು ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸಿದೆ. ನಂತರ ಗ್ರಾಮದ ಮಹಿಳೆಯರಿಗೆ ಇದರ ಕುರಿತು ತರಬೇತಿ ನೀಡಲು ಯೋಚಿಸಿದೆ. ಇದು ನನಗೆ ಒಂದು ಗುರುತನ್ನು ನೀಡಿರುವುದಲ್ಲದೇ, ಆರ್ಥಿಕವಾಗಿ ಸ್ವತಂತ್ರರಾಗುವ ಸಾಧನವಾಗಿದೆ” ಎಂದು ತಿಳಿಸಿದ್ದಾರೆ.
“ನಾನು ತಯಾರಿಸಿದ ಕೆಲವು ಉತ್ಪನ್ನಗಳನ್ನು ಗ್ರಾಮದ ಮಹಿಳೆಯರಿಗೆ ತೋರಿಸಿದೆ. ನಂತರ ತರಬೇತಿ ನೀಡುವುದಾಗಿ ಅವರಿಗೆ ಮನವರಿಕೆ ಮಾಡಿದೆ. ಆರಂಭದಲ್ಲಿ ಅವರನ್ನು ತರಬೇತಿಗೆ ಕರೆತರುವುದು ಕಷ್ಟಕರವಾಗಿದ್ದರೂ, ಕ್ರಮೇಣ ಪರಿಸ್ಥಿತಿ ಸುಧಾರಿಸಿತು. ಈಗ ನಾನು 15 ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೇನೆ. ಬಿದಿರು ಮತ್ತು ಮರಗಳ ಇತರ ಬೀಜಗಳು ಮತ್ತು ಅರಣ್ಯ ಉತ್ಪನ್ನಗಳಿಂದ ನಾನು ಅವರಿಗೆ ಅಲಂಕಾರಿಕ ವಸ್ತುಗಳ ತಯಾರಿಕೆಯ ಕೌಶಲ್ಯಗಳನ್ನು ಕಲಿಸಿದ್ದೇನೆ” ಎಂದು ಹೇಳಿದ್ದಾರೆ.
ಈ ಕುರಿತು ಸ್ಥಳೀಯರಾದ ಜುನ್ಮೋನಿ ಅವರು ಮಾತನಾಡಿ, “ಕಳೆದ ಎರಡು ವರ್ಷಗಳಿಂದ ನಾನು ಆಭರಣಗಳನ್ನು ತಯಾರಿಸುತ್ತಿದ್ದೇನೆ. ನಾನು ತಯಾರಿಸಿರುವ ಆಭರಣಗಳಿಗೆ 500 ರಿಂದ 1500 ರೂ ಬೆಲೆ ಇದೆ. ನಾನು ಗ್ರಾಮಕ್ಕೆ ಹತ್ತಿರವಿರುವ ಚಂದುಬಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇವುಗಳನ್ನ ಮಾರಾಟ ಮಾಡಿದ್ದೇನೆ. ಅವರ ಪ್ರತಿಕ್ರಿಯೆ ಉತ್ತಮವಾಗಿದೆ. ನಾನು ಗಳಿಸುವ ಹಣವು ನನ್ನ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲು ನನಗೆ ಸಹಾಯ ಮಾಡಿತು” ಎಂದು ತಿಳಿಸಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...