Srinagar, Jammu – Kashmir News :
ಇಮ್ರಾನ್ ಅಹ್ಮದ್ ಖಾನ್ ಮತ್ತು ಆತನ ತಾಯಿ ಬಂಧಿತ ಆರೋಪಿಗಳು ಶಾಬನಮ್ ಅಖ್ತರ್ ಸಾವನ್ನಪ್ಪಿದ ಮಹಿಳೆ ಆಗಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಇಮ್ರಾನ್ ಈ ಕೃತ್ಯ ಎಸಗಿದ್ದು, ಈ ಭೀಕರ ಕೊಲೆಯ ತನಿಖೆ ನಡೆಸಿದ ಪೊಲೀಸರು, ಗಂಡನಿಂದಲೇ ಈ ಹೀನ ಕೃತ್ಯ ನಡೆದಿದೆ ಎಂಬುದನ್ನು ಪತ್ತೆ ಹಚ್ಚಿ ಇದೇ ಜನವರಿ 10 ರಂದು ಆತನನ್ನು ಬಂಧಿಸಿದ್ದಾರೆ.
ತನಿಖೆಯಲ್ಲಿ ಅಕ್ಟೋಬರ್ 4ರಂದು ತನ್ನ ಹೆಂಡತಿ ಕೊಂದು ಆಕೆಯನ್ನು ಬಳಿಕ ಕೊಟ್ಟಿಗೆಯಲ್ಲಿ ಸುಟ್ಟುಹಾಕಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಹೆಂಡತಿಯನ್ನು ಅಮಾನುಷವಾಗಿ ಕೊಂದ ವ್ಯಕ್ತಿಯೊಬ್ಬ ಆಕೆಯ ದೇಹವನ್ನು ಹಲವು ತುಂಡುಗಳಾಗಿ ಮಾಡಿ, ತಾಯಿಯ ಸಹಾಯದಿಂದ ಕೊಟ್ಟಿಗೆಯಲ್ಲಿ ಸುಟ್ಟು ಹಾಕಿರುವ ಘಟನೆ ದಕ್ಷಿಣ ಕಾಶ್ಮೀರದ ಅನಂತ್ನಾಗ್ನಲ್ಲಿನ ಐಶ್ಮುಕಂ ಪಹಲ್ಗಾಮ್ನಲ್ಲಿ ನಡೆದಿದ್ದು, ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.
Accused who complained that his wife is missing:
ಮೃತಪಟ್ಟ ಮಹಿಳೆ ತನ್ನ ಎರಡನೇ ಹೆಂಡತಿಯಾಗಿದ್ದು, ಎರಡನೇ ಹೆಂಡತಿ ಕೊಲೆ ಮಾಡಿದ ಬಳಿಕ ಆತ ಮೊದಲ ಹೆಂಡತಿ ಜೊತೆ ಜೀವನ ನಡೆಸಲು ಶುರು ಮಾಡಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ. ಈ ಕೃತ್ಯ ಎಸಗಿದ ಬಳಿಕ ಇಮ್ರಾನ್ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ.
ತನಿಖೆಗೆ ಮುಂದಾದ ಪೊಲೀಸರಿಗೆ 10 ದಿನದ ಬಳಿಕ ಆತನ ಮನೆಯ ಕೊಟ್ಟಿಗೆಯಲ್ಲೇ ಮೃತ ದೇಹದ ಮೂಳೆ ಸೇರಿದಂತೆ ಇನ್ನಿತರ ಕುರುಹುಗಳು ಪತ್ತೆಯಾಗಿದ್ದವು.ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ಪರೀಕ್ಷಾ ತಂಡ ಸ್ಥಳದಲ್ಲಿದ್ದ ಕೊಲೆಯಾದ ಮಹಿಳೆಯ ಮೂಳೆ, ಕೂದಲ ಕುರುಹು ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಇನ್ನು ಈತನ ಈ ಹೀನ ಕೃತ್ಯಕ್ಕೆ ಸಹಾಯ ಮಾಡಿದ 35 ವರ್ಷದ ಇಮ್ರಾನ್ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯ ಸಂಬಂಧ ಬಿಎನ್ಎಸ್ ಕಾಯ್ದೆ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.