New Delhi News:
“ಮಹಿಳೆಯರ ಅದಮ್ಯ ಮನೋಭಾವವನ್ನು ನಾವು ಸಂಭ್ರಮಿಸೋಣ ಮತ್ತು ಗೌರವಿಸೋಣ” ಎಂದ ಅವರು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತಮ್ಮ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರಿಗೆ ಹಸ್ತಾಂತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ತಮ್ಮ ಮಾಸಿಕ ಮನ್ ಕಿ ಬಾತ್ ಭಾಷಣದಲ್ಲಿ ಮಾತನಾಡಿದ ಪ್ರಧಾನಿ, ವಿವಿಧ ಕ್ಷೇತ್ರಗಳಲ್ಲಿನ ಈ ಯಶಸ್ವಿ ಮಹಿಳೆಯರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ಕೆಲಸ ಮತ್ತು ಅನುಭವದ ಬಗ್ಗೆ ಮಾತನಾಡಲಿದ್ದಾರೆ ಎಂದು ಅವರು ಹೇಳಿದರು.ಈ ಮುನ್ನ ಮಾರ್ಚ್ 8, 2020 ರಂದು ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆಯನ್ನು ವಿವಿಧ ಕ್ಷೇತ್ರಗಳಲ್ಲಿನ ಏಳು ಪ್ರಮುಖ ಮಹಿಳೆಯರಿಗೆ ಹಸ್ತಾಂತರಿಸಿದ್ದರು.
ಎಕ್ಸ್, ಯೂಟ್ಯೂಬ್ ಮತ್ತು ಇನ್ ಸ್ಟಾಗ್ರಾಮ್ನಲ್ಲಿ ಹತ್ತು ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಮೋದಿ, ಸಾಮಾಜಿಕ ಮಾಧ್ಯಮದಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಜಾಗತಿಕ ನಾಯಕರಲ್ಲಿ ಒಬ್ಬರಾಗಿದ್ದಾರೆ.ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಅಥವಾ ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರನ್ನು ಪ್ರೇರೇಪಿಸಲು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಕೆಲ ಪ್ರಸಿದ್ಧ ವ್ಯಕ್ತಿಗಳ ಆಡಿಯೋ ಸಂದೇಶಗಳನ್ನು ಪ್ರಧಾನಿ ಪ್ಲೇ ಮಾಡಿದರು.
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಸಂಶೋಧನಾ ಪ್ರಯೋಗಾಲಯಗಳು ಅಥವಾ ತಾರಾಲಯಗಳಿಗೆ ಭೇಟಿ ನೀಡುವ ಮೂಲಕ “ಒಂದು ದಿನದ ವಿಜ್ಞಾನಿ” ಯಾಗಲು ಪ್ರಯತ್ನಿಸುವಂತೆ ಮೋದಿ ಜನರಿಗೆ ಮನವಿ ಮಾಡಿದರು.ಭಾರತವು ಸದೃಢ ಮತ್ತು ಆರೋಗ್ಯಕರ ದೇಶವಾಗಬೇಕಾದರೆ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯನ್ನು ಪರಿಹರಿಸಲು ಗಮನ ಹರಿಸಬೇಕಿದೆ ಎಂದು ಪ್ರಧಾನಿ ಜನರಿಗೆ ಮನವಿ ಮಾಡಿದರು. ಪ್ರತಿ ಎಂಟು ಜನರಲ್ಲಿ ಒಬ್ಬರು ಬೊಜ್ಜಿನಿಂದ ಬಳಲುತ್ತಿದ್ದಾರೆ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಸಂಶೋಧನೆಯನ್ನು ಉಲ್ಲೇಖಿಸಿ ಅವರು ಹೇಳಿದರು.
ಇದು ಮಕ್ಕಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿರುವುದು ಮತ್ತೂ ಆತಂಕಕಾರಿಯಾಗಿದೆ ಎಂದು ಅವರು ನುಡಿದರು.ಖಾದ್ಯ ತೈಲ ಬಳಕೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವಂತೆ ಮೋದಿ ಜನರನ್ನು ಕೇಳಿಕೊಂಡರು. ಆರಂಭದಲ್ಲಿ ಹತ್ತು ಜನ ಈ ರೀತಿಯಾಗಿ ಖಾದ್ಯ ತೈಲ ಬಳಕೆಯನ್ನು ಕಡಿಮೆ ಮಾಡುವಂತೆ ಮತ್ತು ನಂತರ ಅವರಲ್ಲಿನ ಪ್ರತಿಯೊಬ್ಬರೂ ಬೇರೆ 10 ಜನರಿಗೆ ಹಾಗೆ ಮಾಡುವಂತೆ ಸವಾಲು ಹಾಕಬಹುದು ಎಂದು ಅವರು ಹೇಳಿದರು.
ಇದನ್ನು ಓದಿರಿ :Hamas fighters gather at the site of the handing over of Israeli hostages