ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ದೇಶದ ಅತೀ ದೊಡ್ಡ ನಂದಿ ವಿಗ್ರಹಕ್ಕೆ ಚಾಮುಂಡಿ ಬೆಟ್ಟ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ 19ನೇ ವರ್ಷದ ಮಸ್ತಾಭಿಷೇಕ ಜರುಗಿತು.
34 ಬಗೆಯ ದ್ರವ್ಯಗಳು ಸೇರಿದಂತೆ 38 ವಿಧಗಳಲ್ಲಿ ನಂದಿ ವಿಗ್ರಹಕ್ಕೆ ಅಭಿಷೇಕ ನೆರವೇರಿದೆ. ಚಾಮುಂಡಿ ಬೆಟ್ಟದಲ್ಲಿರುವ ವಿಗ್ರಹ ದೇಶದ ಮೂರನೇ ಅತಿದೊಡ್ಡ ನಂದಿ ವಿಗ್ರಹ ಎಂಬ ಖ್ಯಾತಿ ಗಳಿಸಿದೆ.
ಈ ವಿಗ್ರಹವು 1659 ರಿಂದ 1673ರವರೆಗೆ ಮೈಸೂರು ಸಂಸ್ಥಾನವನ್ನಾಳಿದ ದೊಡ್ಡ ದೇವರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿದ್ದು, 350ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ.
ಚಾಮುಂಡಿ ಬೆಟ್ಟದಲ್ಲಿರುವ ದೇಶದ ಅತೀ ದೊಡ್ಡ ನಂದಿ ವಿಗ್ರಹಕ್ಕೆ ಚಾಮುಂಡಿ ಬೆಟ್ಟ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ 19ನೇ ವರ್ಷದ ಮಸ್ತಾಭಿಷೇಕ ಜರುಗಿತು. 34 ಬಗೆಯ ದ್ರವ್ಯಗಳು ಸೇರಿದಂತೆ 38 ವಿಧಗಳಲ್ಲಿ ನಂದಿ ವಿಗ್ರಹಕ್ಕೆ ಅಭಿಷೇಕ ನೆರವೇರಿದೆ.
ಚಾಮುಂಡಿ ಬೆಟ್ಟದಲ್ಲಿರುವ ವಿಗ್ರಹ ದೇಶದ ಮೂರನೇ ಅತಿದೊಡ್ಡ ನಂದಿ ವಿಗ್ರಹ ಎಂಬ ಖ್ಯಾತಿ ಗಳಿಸಿದೆ. ಈ ವಿಗ್ರಹವು 1659 ರಿಂದ 1673ರವರೆಗೆ ಮೈಸೂರು ಸಂಸ್ಥಾನವನ್ನಾಳಿದ ದೊಡ್ಡ ದೇವರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿದ್ದು, 350ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ.
ಕಾಲ್ನಡಿಗೆಯ ಮೂಲಕ ಚಾಮುಂಡಿ ಬೆಟ್ಟ ಹತ್ತುವಾಗ 700 ಮೆಟ್ಟಿಲುಗಳ ಬಳಿ ಏಕಶಿಲಾ ಮೂರ್ತಿಯನ್ನಾಗಿ ನಂದಿ ವಿಗ್ರಹವನ್ನು ಕೆತ್ತನೆ ಮಾಡಲಾಗಿದೆ.
ಈ ವಿಗ್ರಹವು 16 ಅಡಿ ಎತ್ತರ ಹಾಗೂ 25 ಅಡಿ ಉದ್ದ ಇದೆ.
ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ದೇವಾಲಯದ ನಂದಿ ಹಾಗೂ ಆಂಧ್ರ ಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಸ್ಥಾನದ ನಂದಿಯನ್ನು ಬಿಟ್ಟರೆ, ಚಾಮುಂಡಿ ಬೆಟ್ಟದಲ್ಲಿರುವ ನಂದಿ ವಿಗ್ರಹವು ದೇಶದ ಮೂರನೇ ಅತೀ ದೊಡ್ಡ ನಂದಿ ವಿಗ್ರಹವಾಗಿದೆ.
ಚಾಮುಂಡಿಬೆಟ್ಟದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಹೈರಾಣಾಗುವುದನ್ನು ತಪ್ಪಿಸಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ‘ಸ್ಮಾರ್ಟ್‌ಕಾರ್ಡ್’ ಮೂಲಕ ದರ್ಶನ ಭಾಗ್ಯ ಕಲ್ಪಿಸಲು ಚಿಂತನೆ ನಡೆಸಿದೆ.
ರಾಜ್ಯದ ನಾನಾ ಭಾಗಗಳಿಂದ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆಷಾಢದ ಸಂದರ್ಭದಲ್ಲಂತೂ ಚಾಮುಂಡಿಬೆಟ್ಟ ಭಕ್ತರು ಹಾಗೂ ಪ್ರವಾಸಿಗರಿಂದ ತುಂಬಿರುತ್ತದೆ. ಜತೆಗೆ ವಾರಾಂತ್ಯದಲ್ಲೂ ಭಕ್ತರ ದಟ್ಟಣೆ ಹೆಚ್ಚಿರುತ್ತದೆ.
ಭಕ್ತರ ದಟ್ಟಣೆಯಿಂದ ದೂರದೂರಿನಿಂದ ಬರುವವರು ದೇವಿಯ ದರ್ಶನ ಪಡೆಯದೆ ವಾಪಸ್ ತೆರಳಿರುವ ನಿದರ್ಶನಗಳೂ ನಡೆಯುತ್ತಿವೆ. ಇದನ್ನರಿತ ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ದೇವಿ ದರ್ಶನ ಸುಲಭವಾಗಿಸಲು ‘ಸ್ಮಾರ್ಟ್ ಕಾರ್ಡ್’ ಯೋಜನೆ ಜಾರಿಗೆ ತರಲು ತೀರ್ಮಾನಿಸಿದೆ.
ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್ ಕಾರ್ಡ್ ಪಡೆದು ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡಬಹುದು. ಅದೇ ರೀತಿ ಚಾಮುಂಡಿ ಬೆಟ್ಟಕ್ಕೆ ಬರುವವರು ಕ್ಯೂಆರ್ ಕೋಡ್ ಬಳಸಿ ಸ್ಮಾರ್ಟ್‌ಕಾರ್ಡ್ ಪಡೆಯಬಹುದು.
ವರ್ಷದಲ್ಲಿ ಎಷ್ಟು ಬಾರಿ ಬರಬಹುದು ಎಂದು ಕಾರ್ಡ್‌ನಲ್ಲಿ ನಮೂದಿಸಲಾಗಿರುತ್ತದೆ. ಈ ಕಾರ್ಡ್ ಮೂಲಕ ಭಕ್ತರು ಯಾವುದೇ ಸರತಿ ಸಾಲಿನಲ್ಲಿ ನಿಲ್ಲದೆ, ನೂಕುನುಗ್ಗಲು ಇಲ್ಲದೆ ಚಾಮುಂಡೇಶ್ವರಿ ದರ್ಶನ ಪಡೆಯಬಹುದು.
ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ರಾತ್ರಿಯೂ ‘ದಾಸೋಹ’ ನೀಡುವ ಕಾರ್ಯಕ್ಕೆ ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿದೆ.
ಮೈಸೂರಿನ ಚಾಮುಂಡಿ ಬೆಟ್ಟ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಯಾತ್ರಾಸ್ಥಳವಾಗಿದೆ. 1,898 ಎಕರೆ ವಿಸ್ತೀರ್ಣ ಇರುವ ಚಾಮುಂಡಿಬೆಟ್ಟದಲ್ಲಿ 26.82 ಕೋಟಿ ರೂ. ವಾರ್ಷಿಕ ಆದಾಯ ಸಂಗ್ರಹವಾಗುತ್ತಿದೆ.
ಪ್ರತಿವರ್ಷ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಶಕ್ತಿ ಯೋಜನೆ ಬಂದ ನಂತರವಂತೂ ದುಪ್ಪಟ್ಟಾಗಿದೆ. ವರ್ಷದಲ್ಲಿ ಅಂದಾಜು 50 ಲಕ್ಷಕ್ಕೂ ಹೆಚ್ಚು ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಾರೆ ಎಂದು ಅಂಕಿ-ಅಂಶ ಹೇಳುತ್ತವೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ನಿತ್ಯ ಬೆಳಗ್ಗೆ ಹಾಗೂ ಮಧ್ಯಾಹ್ನ ದಾಸೋಹ ನೀಡಲಾಗುತ್ತಿತ್ತು. ಇದೀಗ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರಿಯೂ ದಾಸೋಹ ನೀಡಲು ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.