California (USA) News:
ಅಮೆರಿಕದ MEGA MILLIONS LOTTERYಗಳ ಇತಿಹಾಸದಲ್ಲಿ ಇದು ಮೂರನೇ ಅತಿದೊಡ್ಡ ಲಾಟರಿ ಮೊತ್ತವಾಗಿದೆ. ಕಳೆದ ಮೂರು ತಿಂಗಳಿಂದ ಪ್ರತಿ ಬಾರಿ ಲಾಟರಿ ಹೊಡೆದಾಗಲೂ ಗೆಲ್ಲುವ ಸಂಖ್ಯೆ ಯಾರಿಗೂ ಹೊಂದಾಣಿಕೆಯಾಗದ ಕಾರಣ ಟಿಕೆಟ್ ಮಾರಾಟ ಮುಂದುವರಿದಿತ್ತು. ಅದರಿಂದ ಗೆಲುವಿನ ಮೊತ್ತ 10,000 ಕೋಟಿ ರೂ. ದಾಟಿತ್ತು.
ಕ್ಯಾಲಿಫೋರ್ನಿಯಾದ ಕಾಟನ್‌ವುಡ್ ನಗರದ ರೋಂಡಾ ರಸ್ತೆಯಲ್ಲಿರುವ ಸರ್ಕಲ್ ಕೆ ನಲ್ಲಿರುವ ಸನ್‌ಶೈನ್ ಫುಡ್ ಮತ್ತು ಗ್ಯಾಸ್ ಸ್ಟೋರ್ನಲ್ಲಿ ಈ ಲಾಟರಿ ಟಿಕೆಟ್ ಮಾರಾಟವಾಗಿದೆ.ಇಲ್ಲಿನ MEGA MILLIONS LOTTERYಜಾಕ್‌ಪಾಟ್ ಲಾಟರಿ ಫಲಿತಾಂಶ ಪ್ರಕಟವಾಗಿದೆ. ಹೌದು, 3, 7, 37, 49, 55 ಸಂಖ್ಯೆಗಳ ವೈಟ್ ಬಾಲ್ಗಳು ಮತ್ತು 6ನೇ ಸಂಖ್ಯೆಯ ಗೋಲ್ಡನ್ ಮೆಗಾ ಬಾಲ್ ಹೊಂದಿಕೆಯಾದ ಲಾಟರಿ ಟಿಕೆಟ್ 1.22 ಬಿಲಿಯನ್ ಡಾಲರ್ (ಸುಮಾರು ರೂ. 10,418 ಕೋಟಿ) ಬೃಹತ್ ಮೊತ್ತದ ಜಾಕ್‌ಪಾಟ್ ಗೆದ್ದಿದೆ.
ಈ ಟಿಕೆಟ್ ಕ್ಯಾಲಿಫೋರ್ನಿಯಾದಲ್ಲಿ ಮಾರಾಟ ಮಾಡಲಾಗಿದೆ ಎಂದು ಮೆಗಾ ಮಿಲಿಯನ್ಸ್ ವೆಬ್‌ಸೈಟ್ ತಿಳಿಸಿದೆ.ವಿಜೇತರು 29 ವರ್ಷಗಳ ವಾರ್ಷಿಕ ಪಾವತಿಯನ್ನು ಮಾಡಲು ಒಪ್ಪಿಕೊಂಡರೆ ಮಾತ್ರ ಪೂರ್ಣMEGA MILLIONS LOTTERY ನೀಡಲಾಗುತ್ತದೆ.ಈ ಕುರಿತು ಸ್ಟೋರ್ ಮಾಲೀಕರ ಮಗ ಇಶಾರ್ ಗಿಲ್ ಮಾತನಾಡಿ, “ಸುಮಾರು 6,000 ಜನರಿರುವ ಸಣ್ಣ ಗ್ರಾಮೀಣ ಪಟ್ಟಣಕ್ಕೆ ಈ ಬಹುಮಾನದ ಟಿಕೆಟ್ ವರವಾಗಿದೆ.
ಯಾರು ಲಾಟರಿ ಗೆದ್ದಿರಬಹುದು ಎಂಬುದರ ಬಗ್ಗೆ ನಮಗೆ ಸಣ್ಣ ಸುಳಿವು ಇಲ್ಲ. ಆದರೆ ಮುಂಚಿತವಾಗಿಯೇ ವಿಜೇತರಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ.ಮೆಗಾ ಮಿಲಿಯನ್‌ಗಳು ಮತ್ತು ಪವರ್‌ಬಾಲ್ ಅನ್ನು ವಾಷಿಂಗ್ಟನ್ ಡಿ.ಸಿ ಮತ್ತು ವರ್ಜಿನ್ ಐಲ್ಯಾಂಡ್‌ಗಳು ಸೇರಿದಂತೆ ಅಮೆರಿಕದ 45 ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪವರ್‌ಬಾಲ್ ಅನ್ನು ಪೊರ್ಟೊ ರಿಕೊದಲ್ಲಿ ಮಾರಾಟ ಮಾಡಲಾಗುತ್ತದೆ.
ಇನ್ನು ಮೆಗಾ ಮಿಲಿಯನ್ ಟಿಕೆಟ್ ದರಗಳು 2 ಡಾಲರ್ನಿಂದ ರಿಂದ 5 ಡಾಲರ್ಗೆ ಏರಿಕೆಯಾಗಿವೆ.2023ರ ಆಗಸ್ಟ್‌ನಲ್ಲಿ ಫ್ಲೋರಿಡಾದಲ್ಲಿ 1.6 ಶತಕೋಟಿ ಡಾಲರ್ ಮೌಲ್ಯದ ಅತಿದೊಡ್ಡMEGA MILLIONS LOTTERY ಟಿಕೆಟ್ ಅನ್ನು ಮಾರಾಟ ಮಾಡಲಾಗಿತ್ತು.ಮೆಗಾ ಮಿಲಿಯನ್‌ಗಳ ಜಾಕ್‌ಪಾಟ್ ಲಾಟರಿ ಫಲಿತಾಂಶ ಪ್ರಕಟವಾಗಿದೆ. ಭಾರತೀಯ ಮೂಲದ ವ್ಯಕ್ತಿಯ ಸ್ಟೋರ್‌ನಲ್ಲಿ ಜಾಕ್‌ಪಾಟ್ ಗೆಲ್ಲುವ ಲಾಟರಿ ಟಿಕೆಟ್ ಮಾರಾಟವಾಗಿದೆ.
ಇದನ್ನು ಓದಿರಿ : INDIAN ARREST IN PAKISTAN : ಫೇಸ್ಬುಕ್ ಸ್ನೇಹಿತೆ ವರಿಸಲು ಹೋಗಿ ಪಾಕಿಸ್ತಾನದ ಜೈಲು ಪಾಲಾದ ಭಾರತದ ವ್ಯಕ್ತಿ