Raichur News:
ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಕಾವೇರಿ ಹಾಗೂ ಹಾಲಿ ಅಧ್ಯಕ್ಷೆ ಈರಮ್ಮ MEMBERSHIP CANCELLED, ಜೊತೆಗೆ ಮುಂದಿನ 6 ವರ್ಷಗಳವರೆಗೆ ಇಬ್ಬರೂ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಆದೇಶ ಹೊರಡಿಸಿದ್ದಾರೆ.
15ನೇ ಹಣಕಾಸಿನ ಯೋಜನೆ ಮಾರ್ಗಸೂಚಿ ಅನ್ವಯ ಹಣವನ್ನು ಬಳಸಿಕೊಳ್ಳಬೇಕು. ಆದರೆ ನಿಯಮ ಬಾಹಿರವಾಗಿ ಒಟ್ಟು 16 ಲಕ್ಷದ 96 ಸಾವಿರ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಈ ಸಂಬಂಧ ಇಬ್ಬರ MEMBERSHIP CANCELLED. ಉಟಕನೂರು ಗ್ರಾಮ ಪಂಚಾಯತ್ ಪಿಡಿಒ ರಾಮಪ್ಪ ನಡಗೇರಿ ವಿರುದ್ಧ ಇಲಾಖೆ ವಿಚಾರಣೆ ನಡೆಸುತ್ತಿದ್ದು, ವಿಚಾರಣಾ ವರದಿ ಅನ್ವಯ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಆದೇಶಿಸಲಾಗಿದೆ.
ಕಾಮಗಾರಿಗಳ ಹೆಸರಲ್ಲಿ ಲಕ್ಷಾಂತರ ರೂ. ದುರ್ಬಳಕೆ ಮಾಡಿಕೊಂಡಿರುವ ಆರೋಪ ಹಿನ್ನೆಲೆ ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರ ಸದಸ್ಯತ್ವ ಸ್ಥಾನ ರದ್ದುಗೊಳಿಸಲಾಗಿದೆ.
ಇದನ್ನು ಓದಿರಿ : DEVOTEES DIED : ರಾಮ ಮಂದಿರಕ್ಕೆ ಆಗಮಿಸಿದ್ದ ಇಬ್ಬರು ಭಕ್ತರು ಸಾವು