spot_img
spot_img

ಇನ್​ಸ್ಟಾಗ್ರಾಂ ಬಳಕೆದಾರರಿಗೆ ಅದ್ಭುತ ಫೀಚರ್​ ಪರಿಚಯಿಸುತ್ತಿದೆ ಮೆಟಾ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Instagram AI Profile Picture Generation Feature: ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಹೊಸ ಫೀಚರ್​ ಹೊರತರಲು ಕೆಲಸ ಮಾಡುತ್ತಿದೆ. ಎಐ ಸಹಾಯದಿಂದ ಅದ್ಭುತ ಪ್ರೊಫೈಲ್ ಫೋಟೋಗಳನ್ನು ರಚಿಸಲು ಇದು ಬಳಕೆದಾರರಿಗೆ ನೆರವಾಗುತ್ತದೆ.

ಮೆಟಾ ಒಡೆತನದ ಇನ್​ಸ್ಟಾಗ್ರಾಂ ಶ್ರೀಘ್ರದಲ್ಲೇ ಹೊಸ ಎಐ(ಕೃತಕ ಬುದ್ಧಿಮತ್ತೆ) ಫೀಚರ್​ ಪರಿಚಯಿಸಲಿದೆ. ಇದು ಬಳಕೆದಾರರಿಗೆ ಎಐ ಪ್ರೊಫೈಲ್​ ಫೋಟೋಗಳನ್ನು ಕ್ರಿಯೆಟ್​ ಮಾಡಲು ಅನುಮತಿಸುತ್ತದೆ. ಹೊಸ ಎಐ ಫೀಚರ್​ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಯದಿದ್ದರೂ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಮೆಟಾ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಾಗಿ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ನಿರ್ದಿಷ್ಟ ಅವಧಿಯ ನಂತರ ಅಪ್ಲಿಕೇಶನ್ ಅನ್ನು ತೆರೆಯುವಾಗ ಸ್ವಯಂಚಾಲಿತ ಫೀಡ್ ರಿಫ್ರೆಶ್ ಅನ್ನು ಸೇವೆಯಿಂದ ಕೈಬಿಡಲಾಗಿದೆ ಎಂದು ಇನ್​ಸ್ಟಾಗ್ರಾಂ ಮುಖ್ಯಸ್ಥ ಆಡಮ್ ಮೊಸ್ಸೆರಿ ಇತ್ತೀಚೆಗೆ ಘೋಷಿಸಿದ್ದರು.

ಡೆವಲಪರ್ ಅಲೆಸ್ಸಾಂಡ್ರೊ ಪಲುಝಿ ಅವರು ಇನ್​ಸ್ಟಾಗ್ರಾಂ ಹೊಸ ಎಐ ಫೀಚರ್​ನ​ ಒಂದು ಲುಕ್​ ಅನ್ನು ಥ್ರೆಡ್​ನಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನು ಅಪ್​ಡೇಟ್​ ಮಾಡುವಾಗ ಅವರು ಎಐ ಪ್ರೊಫೈಲ್ ಫೋಟೋ ರಚಿಸಿ ಎಂಬ ಹೊಸ ಮೆನು ಆಯ್ಕೆ ಬಗ್ಗೆ ತಿಳಿಸಿದ್ದಾರೆ.

ಈ ವೈಶಿಷ್ಟ್ಯವು ಎಷ್ಟು ನಿಖರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳುವುದು ಕಷ್ಟ. ಸದ್ಯ ಅಭಿವೃದ್ಧಿಯ ಹಂತದಲ್ಲಿದೆ.

ಮೆಟಾದ ಲಾಮಾ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್‌ಗಳಲ್ಲಿ ಒಂದರಿಂದ ಚಾಲಿತವಾಗಿರುತ್ತದೆ. ಈ ಫೀಚರ್​ ಎರಡು ರೀತಿಯಲ್ಲಿ ಕೆಲಸ ಮಾಡಬಹುದು. ಪಠ್ಯ-ಆಧರಿತ ಪ್ರಾಂಪ್ಟ್‌ಗಳನ್ನು ಬಳಸಿಕೊಂಡು ಮೊದಲಿನಿಂದಲೂ ಎಐ ಚಿತ್ರವನ್ನು ರಚಿಸಲು ಅಥವಾ ಅಸ್ತಿತ್ವದಲ್ಲಿರುವ ಪ್ರೊಫೈಲ್ ಚಿತ್ರಗಳನ್ನು ಎಐ ಬಳಸಿಕೊಂಡು ವಿಭಿನ್ನ ಶೈಲಿಗಳಾಗಿ ಪರಿವರ್ತಿಸಲು ಬಳಕೆದಾರರಿಗೆ ಅವಕಾಶ ನೀಡಬಹುದಾಗಿದೆ.

ಇದು ಇನ್​ಸ್ಟಾಗ್ರಾಂನಲ್ಲಿ ಬರುವ ಮೊದಲ ಎಐ ವೈಶಿಷ್ಟ್ಯವಲ್ಲ. ಈಗಾಗಲೇ ಸಂವಾದಾತ್ಮಕ ಚಾಟ್‌ಬಾಟ್ ಮೆಟಾ ಎಐ ಅನ್ನು ನೀಡುತ್ತದೆ. ಡಿಎಂ ಸಂದೇಶಗಳಿಗಾಗಿ ಎಐ ರಿರೈಟ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಬಳಕೆದಾರರು ತಾವು ಕಳುಹಿಸಿರುವ ಸಂದೇಶಗಳನ್ನು ಮತ್ತೆ ಸರಿಪಡಿಸಬಹುದಾಗಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ನಕಲಿ​ ಜಾಹೀರಾತುಗಳನ್ನು ಪತ್ತೆ ಹಚ್ಚಲು ಎಐ-ಚಾಲಿತ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದೆ ಎಂದು ಇತ್ತೀಚೆಗೆ ಮೆಟಾ ತಿಳಿಸಿತ್ತು. ಈ ವೈಶಿಷ್ಟ್ಯವು ಬಳಕೆದಾರರನ್ನು ಆಕರ್ಷಿಸಲು ತಮ್ಮ ಜಾಹೀರಾತುಗಳಲ್ಲಿ ಸಾರ್ವಜನಿಕ ವ್ಯಕ್ತಿಗಳನ್ನು ಮೋಸದಿಂದ ಬಳಸುವ ಜಾಹೀರಾತುಗಳನ್ನು ಗುರುತಿಸುತ್ತದೆ ಮತ್ತು ನಿರ್ಬಂಧಿಸುತ್ತದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Big shock for Samantha fans:ಗುರುತು ಸಿಗದ ಹಾಗೆ ದಿಢೀರ್ ಬದಲಾಗಿ ಬಿಟ್ಟ ಸ್ಯಾಮ್!

Samantha News: ಟಾಲಿವುಡ್​ ಸ್ಟಾರ್​ ನಟಿ Samantha ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹಲವು ವರ್ಷಗಳಿಂದ ಸಾರ್ವಜನಿಕ ಸಂಪರ್ಕದಿಂದಲೇ ದೂರ ಉಳಿದುಕೊಂಡಿದ್ದ Samantha ಇತ್ತೀಚೆಗೆ...

A bold decision in Tirupati after the Laddu dispute: ಹಿಂದೂಯೇತರರಿಗೆ TTD ಅಧ್ಯಕ್ಷ ಖಡಕ್ ಸೂಚನೆ

Transfer or Retirement Fix! News ತಿರುಪತಿ ಲಡ್ಡು ಪ್ರಸಾದದ ಅಪವಿತ್ರ ವಿವಾದ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. Laddu ವಿವಾದದ ಬಳಿಕ ತಿರುಮಲ ತಿರುಪತಿ...

SPIDER MAN SUITS:ರಿಸರ್ಚ್ ಟೀಂನಿಂದ ರೆಡಿಯಾಗ್ತಿದೆ ಸೂಪರ್ ಮ್ಯಾನ್ ಶೈಲಿಯ ಸೂಟ್!

Spider-Man Suits News: ಇವರು ಧರಿಸಿಕೊಂಡಿರುವ SUITS ಫುಲ್​ ಸ್ಟ್ರಾಂಗ್​ ಆಗಿರುತ್ತದೆ. ಬುಲೆಟ್​ ಸೇರಿದಂತೆ ಅನೇಕ ಆಯುಧಗಳಿಂದ ದಾಳಿ ಮಾಡಿದ್ರೂ ಸಹ ಆ SUITS​ನಿಂದ ಅವರು...

HUSBAND KILLS WIFE:ಅಮ್ಮನ ಮೃತದೇಹದ ಬಳಿ ಕಂದಮ್ಮನ ಆಕ್ರಂದನ

Belgaum News: ಮೀರಾಬಾಯಿ (25) ಎಂಬವರೇ KILLSಯಾದ ಮಹಿಳೆ. ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು...