spot_img
spot_img

MICROFINANCE : ಮೈಕ್ರೋ ಫೈನಾನ್ಸ್ಗಳ ಕಿರುಕುಳ ಆರೋಪ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Haveri News:

ಮೈಸೂರು, ಚಾಮರಾಜನಗರ ಬೆನ್ನಲ್ಲೇ ಇದೀಗ ಹಾವೇರಿಯಲ್ಲೀ MICROFINANCE ವಿರುದ್ಧ ಜನರು ಆರೋಪ ಮಾಡಿದ್ದಾರೆ. ರಾಣೆಬೆನ್ನೂರಿನ ಅಡವಿ ಆಂಜನೇಯ ಬಡಾವಣೆಯಲ್ಲಿ ಇದೀಗ ಬಹುತೇಕ ಮನೆಗಳಿಗೆ ಬೀಗಹಾಕಲಾಗಿದೆ. ಮನೆ ಖಾಲಿ ಮಾಡಿರುವ ಜನರು ಎಲ್ಲಿ ಹೋಗುತ್ತಾರೆ ಎಂದು ತಿಳಿಸದೆ ದೂರ ದೂರದ ಊರುಗಳಿಗೆ ತೆರಳುತ್ತಿದ್ದಾರೆ. ಇದಕ್ಕೆ ಕಾರಣ ಕೇಳಿದರೆ MICROFINANCE ಸಿಬ್ಬಂದಿಯ ಕಿರುಕುಳ ಎಂದು ಇಲ್ಲಿಯ ನಿವಾಸಿಗಳು ಆರೋಪಿಸುತ್ತಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ MICROFINANCE​​ಗಳ ಕಿರುಕುಳ ಹೆಚ್ಚಾಗುತ್ತಿರುವುದರಿಂದ ಬೇಸತ್ತ ಜನ ಊರು ತೊರೆಯುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಮೈಸೂರು ಮತ್ತು ಚಾಮರಾಜನಗರದಲ್ಲೂ ಇದೇ ರೀತಿಯ ಘಟನೆಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದವು. MICROFINANCEವರು ಮನೆ ತನಕ ಬಂದು ಸಾಲ ನೀಡಿ ಅದಕ್ಕೆ ಬಡ್ಡಿ ಕಟ್ಟಿಸಿಕೊಳ್ಳುತ್ತಾರೆ.

ಕೆಲವೊಮ್ಮೆ ಬಡ್ಡಿ ಕಟ್ಟುವುದು ಸ್ವಲ್ಪ ತಡವಾದರೂ ಸಾಕು ಬಾಯಿಗೆ ಬಂದಂಗೆ ಬೈಯ್ಯುತ್ತಾರೆ. ಇವರ ಕಿರುಕುಳ ತಾಳಲಾರದೆ ಬಡಾವಣೆಯ ಬಹುತೇಕರು ಮನೆ ತೊರೆದು ಎಲ್ಲೆಲ್ಲೊ ಹೋಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಬಗ್ಗೆ ಸಾಲಪಡೆದ ಅರಿಭಾ ಎಂಬುವವರು ಮಾತನಾಡಿ, ”ಮನೆಯಲ್ಲಿ ಕಷ್ಟ ಇದೆ ಎಂದು ನಾನು ಸಾಲ ತೆಗೆದುಕೊಂಡಿದ್ದೆ. ಒಂದು ವಾರವೂ ಸಾಲ ಕಟ್ಟುವುದನ್ನ ತಪ್ಪಿಸಿಲ್ಲ. ನಾನು ಬ್ಯಾಡಗಿ ಮೆಣಸಿನಕಾಯಿ ಕೆಲಸಕ್ಕೆ ಹೋಗಿದ್ದೆ. ಆಗ ಫೈನಾನ್ಸ್​ನವರು ಮನೆ ಬಳಿ ಬಂದು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ. ಆಗ ನಮ್ಮ ಮನೆಯಲ್ಲಿರುವ ಯುವತಿ, ಅಮ್ಮ ಬರುವವರೆಗೆ ತಡೆಯಿರಿ, ಮನೆ ಮುಂದೆ ಗಲಾಟೆ ಮಾಡಬೇಡಿ ಎಂದಿದ್ದಾಳೆ. ಆಗ MICROFINANCE​ನವರು, ಹಣ ಕಟ್ಟುವವರೆಗೆ ನೀನು ನಮ್ಮ ಮನೆಗೆ ಕೆಲಸಕ್ಕೆ ಬರುತ್ತೀಯಾ? ಎಂದು ಕೇಳಿದ್ದಾರೆ. ಸಾಲಕಟ್ಟಿ ಎಂದು ಮನೆ ಮುಂದೆ ಖುರ್ಚಿ ಹಾಕಿಕೊಂಡು ಕೂರುತ್ತಾರೆ. ಒಂದು ದಿನ ಹೆಚ್ಚು ಕಡಿಮೆಯಾದ್ರು ಮನೆ ಮುಂದೆ ಬಂದು ಜಗಳ ಮಾಡುತ್ತಾರೆ” ಎಂದಿದ್ದಾರೆ.

ಮೈಕ್ರೋ ಫೈನಾನ್ಸ್‌ನವರು ಕಾನೂನು ಚೌಕಟ್ಟು ಮೀರಿ ಸಾಲಗಾರರ ಜೊತೆ ವರ್ತಿಸುತ್ತಿದ್ದಾರೆ. ಇವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಕುರಿತು ಬಡಾವಣೆಯ ನಿವಾಸಿ ರೂಪಾ ಎಂಬುವವರು ಮಾತನಾಡಿ, ”ನಾನು ಒಬ್ಬರಿಗೆ ಲೋನ್ ತೆಗೆಸಿಕೊಟ್ಟಿದ್ದೆ. ಯಾರೂ ನಿಮ್ಮ ಮನೆ ಬಳಿಗೆ ಬರದಂತೆ ಕಟ್ಟಿಕೊಂಡು ಹೋಗುತ್ತೇನೆ ಎಂದಿದ್ದಕ್ಕೆ ತೆಗೆಸಿಕೊಟ್ಟಿದ್ದೆ. ಈಗ ಈ ರೀತಿ ತೊಂದರೆಯಾಗಿದೆ. ನಮ್ಮನೆಯಲ್ಲೂ ತೊಂದರೆ ಇದೆ. ಇನ್ನೂ ಹಣ ಕಟ್ಟುವುದು ಬಾಕಿ ಇದೆ. ಕ್ಲಿಯರ್ ಮಾಡಿ ಅಂದ್ರೆ ಅವರು ಕ್ಲಿಯರ್ ಮಾಡುತ್ತಿಲ್ಲ. ಹೇಳಿದ್ರೆ, ಕಟ್ಟುತ್ತೇವೆ ಎಂದು ಹೇಳ್ತಾರೆ. ಇವರು ಹಣ ಪಾವತಿ ಮಾಡುವುದು ತಡವಾದ್ರೆ,MICROFINANCE​ನವರು ನಮ್ಮ ಬಳಿ ಬಂದು ಹಣ ಕಟ್ಟುವಂತೆ ಹೇಳ್ತಾರೆ. ಒಂದು ದಿನ ತಡವಾದ್ರು ಅವರು ಕಾಯುವುದಿಲ್ಲ. ಅವರಿಗೆ ದುಡ್ಡಿನದೇ ಚಿಂತೆ. ಅವರಿಗೆ ಲೋನ್​ ಕಂತು ಬೇಕು. ಯಾರಾದ್ರು ಕೊಡಲಿ, ಹೇಗಾದ್ರು ಕೊಡಲಿ. ಅವರಿಗೆ ವಾರದ ಕಂತು ಬೇಕು. ಇಲ್ಲದಿದ್ರೆ ಅವರಿಗೆ ಆಫೀಸ್​ನಲ್ಲಿ ಬೈಯ್ತಾರೆ. ಆ ಒತ್ತಡವನ್ನ ನಮ್ಮ ಮೇಲೆ ಹಾಕ್ತಾರೆ” ಎಂದರು.

ಇದನ್ನು ಓದಿರಿ : MINISTER LAKSHMI HEBBALKAR : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀ, ಸುರ್ಜೆವಾಲ, ಡಿಕೆಶಿ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MALLIKARJUN KHARGE : ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್

Bangalore News: ಶಾಸಕರು, ಸಚಿವರು, ಎಂಪಿಗಳಿಗೆ ನನ್ನ ಸಲಹೆ ಇಷ್ಟೇ, ಯಾರೂ ಬಹಿರಂಗ ಹೇಳಿಕೆ ಕೊಡಬಾರದು. ಏನು ಮಾಡಬೇಕು ಅಂತ ನಾವು ತೀರ್ಮಾನ ಮಾಡ್ತೇವೆ ಎಂದು...

BJP MANIFESTO SANKALP PATRA : ಮಹಿಳೆಯರಿಗೆ ಮಾಸಿಕ 2500 ರೂ, ಸಿಲಿಂಡರ್ಗೆ 500 ರೂ ಸಬ್ಸಿಡಿ ನೀಡೋ ಭರವಸೆ

New Delhi News: ಮಹಿಳೆಯರಿಗೆ ಮಾಸಿಕ 2500 ರೂಪಾಯಿ ನೀಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದಲ್ಲದೇ ಬಡ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಮೇಲೆ...

LEMON WITH HONEY WATER BENEFITS : ಬೆಳಗ್ಗೆ ಜೇನುತುಪ್ಪ & ನಿಂಬೆ ರಸ ಕುಡಿದರೆ ದೊರೆಯುತ್ತೆ ಆರೋಗ್ಯದ ಹಲವು ಲಾಭಗಳು

Lemon With Honey Water Benefits: ಜೇನುತುಪ್ಪವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಉಪಯುಕ್ತವಾಗಿದೆ. ಇದು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆ್ಯಂಟಿಫಂಗಲ್ ಗುಣಗಳನ್ನು...

CM SIDDARAMAIAH : ಎಷ್ಟಾದರೂ ಹಣ – ಸವಲತ್ತು ಕೇಳಿ, ಕೊಡ್ತೀನಿ

Mangalore (South Kannada) News: ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರ ಎಲ್ಲ ರೀತಿಯ ಸವಲತ್ತು ಒದಗಿಸಲಿದೆ. ಜೊತೆಗೆ ನೇಮಕಾತಿಯಲ್ಲೂ ಮೀಸಲಾತಿ ಕೊಡಲಾಗುವುದು ಎಂದು CM SIDDARAMAIAH ಭರವಸೆ...