Ayodhya (Uttar Pradesh) News:
ಲೋಕಸಭಾ ಚುನಾಣೆಯಲ್ಲಿ ಮಿಲ್ಕಿಪುರ ಕ್ಷೇತ್ರದ ಶಾಸಕರಾಗಿದ್ದ ಎಸ್ಪಿ ಅಭ್ಯರ್ಥಿ ಅವದೇಶ್ ಪ್ರಸಾದ್ ಪೈಜಾಬಾದ್ ಕ್ಷೇತ್ರದಿಂದ ಗೆಲುವು ಕಂಡು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ಕ್ಷೇತ್ರ ಉಪ ಚುನಾವಣೆ ಎದುರಿಸಿತು. ಫೆ. 5ರಂದೇ ಕ್ಷೇತ್ರದಲ್ಲಿ ಮತದಾನ ನಡೆದಿತ್ತು.ಮಿಲ್ಕಿಪುರ ಉಪ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಬಿಜೆಪಿ ಅಭ್ಯರ್ಥಿ ಚಂದ್ರಬಾನು ಪಾಸ್ವಾನ್ 61,710 ಅಂತರದ ಮತಗಳಿಂದ ಗೆಲುವು ಸಾಧಿಸಿದ್ದಾರೆ.ಆರಂಭದಿಂದಲೂ ಪಾಸ್ವಾನ್ ಎಸ್ಪಿ ಅಭ್ಯರ್ಥಿ ಪ್ರಸಾದ್ ವಿರುದ್ಧ ನಿರ್ಣಾಯಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. 29 ಸುತ್ತಿನ ಮತ ಎಣಿಕೆ ಬಳಿಕ ಅವರು 61,000 ಮತಗಳಿಂದ ಜಯ ಗಳಿಸಿದ್ದಾರೆ.
29ನೇ ಸುತ್ತಿನಲ್ಲಿ ಪಾಸ್ವಾನ್ 1,45,685 ಮತಗಳನ್ನು ಪಡೆದರೆ, ಪ್ರಸಾದ್ 84,266 ಮತಗಳನ್ನು ಗಳಿಸಿದರು. ಅಜಾದ್ ಸಮಾಜ್ ಪಕ್ಷದ (ಕಾನ್ಷಿ ರಾಮ್) ಅಭ್ಯರ್ಥಿ ಸಂತೋಷ್ ಕುಮಾರ್ ಕೇವಲ 5,158 ಮತಗಳನ್ನು ಪಡೆದರು.ಚುನಾವಣಾ ಆಯೋಗದ ಜಾಲತಾಣದ ಪ್ರಕಾರ, ಪಾಸ್ವಾನ್ 1.46 ಲಕ್ಷ ಮತಗಳನ್ನು ಪಡೆದಿದ್ದರು.
ಅವರ ಸಮೀಪದ ಎದುರಾಳಿ ಸಮಾಜವಾದಿ ಪಕ್ಷದ ಅಜಿತ್ ಪ್ರಸಾದ್ 84,687 ಮತಗಳನ್ನು ಪಡೆದಿದ್ದಾರೆ.ಉತ್ತರ ಪ್ರದೇಶದ ಮಿಲ್ಕಿಪುರ ಉಪಚುನಾವಣೆಯ ಮತ ಎಣಿಕೆ ಕೂಡ ಇಂದು ಸಾಗಿದ್ದು, ಎಸ್ಪಿ ನಾಯಕನ ವಿರುದ್ಧ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.ಇನ್ನು ಮಗ ಅಜಿತ್ ಪ್ರಸಾದ್ ಗೆಲುವಿನ ಭರವಸೆಯಲ್ಲಿದ್ದ ಎಸ್ಪಿ ಸಂಸದ ಅವದೇಶ್ ಪ್ರದೇಶ್, ಬಿಜೆಪಿ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ.
ರಾಜ್ಯ ಸರ್ಕಾರದ ಒತ್ತಡದಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿ ದೊಡ್ಡ ಮಟ್ಟದಲ್ಲಿ ಅಕ್ರಮದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿರುವ ಪಾಸ್ವಾನ್, ಮತದಾರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಡಬಲ್ ಇಂಜಿನ್ ಬಿಜೆಪಿ ಸರ್ಕಾರದಲ್ಲಿ ನಾವು ಅನೇಕ ಕಲ್ಯಾಣ ಕಾರ್ಯಕ್ರಮ ಮತ್ತು ಯೋಜನೆಯನ್ನು ಮಿಲ್ಕಿಪುರ ಜನರಿಗಾಗಿ ಕೈಗೊಂಡಿದ್ದು, ಅದಕ್ಕೆ ಜನರು ಬೆಂಬಲಿಸಿದ್ದಾರೆ ಎಂದಿದ್ದಾರೆ.
ಇದನ್ನು ಓದಿರಿ :CANADIAN LIVING IN ASSAM:ವೀಸಾ ಅವಧಿ ಮುಗಿದರೂ ಭಾರತದಲ್ಲೇ ನೆಲೆಯೂರಿದ್ದ ಕೆನಡಿಯನ್ ಗಡೀಪಾರು.