spot_img
spot_img

MILLET : ಸಿರಿಧಾನ್ಯ ಕೃಷಿಯ ಕೇಂದ್ರವಾಗಿ ದಕ್ಷಿಣ ಭಾರತ ಅಭಿವೃದ್ಧಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hyderabad News:

ಸಿರಿಧಾನ್ಯ ಕೃಷಿಯ ವಿಸ್ತರಣೆಗೆ ಕೊಡುಗೆ ನೀಡಿರುವ ಆಧುನಿಕ ಕೃಷಿ ವಿಧಾನಗಳು, ಸುಧಾರಿತ ಬೀಜಗಳು, ಯಾಂತ್ರೀಕರಣ ಮತ್ತು ಸುಧಾರಿತ ಮಾರುಕಟ್ಟೆ ತಂತ್ರಗಳ ಅಳವಡಿಕೆಯ ಬಗ್ಗೆ ಅಧ್ಯಯನವು ಒತ್ತಿ ಹೇಳುತ್ತಿದೆ. ಅರ್ಥಶಾಸ್ತ್ರಜ್ಞ ಮಧುರಾ ಸ್ವಾಮಿನಾಥನ್, ಎಂಎಸ್‌ಎಸ್‌ಆರ್‌ಎಫ್ ವಿಜ್ಞಾನಿ ಪಿ. ಯುವರಾಜ್ ಮತ್ತು ಪೌಷ್ಠಿಕತಜ್ಞ ಡಿಜೆ ನಿಥಿಲಾ ಅವರನ್ನೊಳಗೊಂಡ ತಂಡವು ಸಿದ್ಧಪಡಿಸಿದ ” ಆರ್ಥಿಕತೆ ಬಲಪಡಿಸುವಲ್ಲಿ ಸಣ್ಣ ಧಾನ್ಯಗಳ ಪಾತ್ರ : ದಕ್ಷಿಣ ಭಾರತೀಯ ಅಧ್ಯಯನದಿಂದಾದ ಪಾಠಗಳು” ಎಂಬ ವರದಿಯಲ್ಲಿ ಈ ಸಂಶೋಧನೆಗಳನ್ನು ಬಹಿರಂಗಪಡಿಸಲಾಗಿದೆ. ದಕ್ಷಿಣ ಭಾರತ ರಾಜ್ಯಗಳು ಸಿರಿಧಾನ್ಯ ಕೃಷಿಯ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ ಎಂದು ಎಂಎಸ್​ಎಸ್​ಆರ್​ಎಫ್​ನ ಇತ್ತೀಚಿನ ಅಧ್ಯಯನ ತಿಳಿಸಿದೆ. ಎಂ ಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (ಎಂಎಸ್‌ಎಸ್‌ಆರ್‌ಎಫ್)ನ ಇತ್ತೀಚಿನ ಅಧ್ಯಯನವು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳವು ಸಿರಿಧಾನ್ಯ ಕೃಷಿಯ ಕೇಂದ್ರಗಳಾಗಿ ಬೆಳೆಯುತ್ತಿರುವ ಬಗ್ಗೆ ಉಲ್ಲೇಖಿಸಿದೆ. ವರದಿಯು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ಅನ್ನು ಆಚರಿಸಲು ನಡೆಸಿದ ಅಧ್ಯಯನದ ಭಾಗವಾಗಿದೆ ಮತ್ತು ಆದಾಯ ಹೆಚ್ಚಿಸಲು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಿರಿಧಾನ್ಯ ಕೃಷಿಯ ಸಾಮರ್ಥ್ಯದ ಮೇಲೆ ಇದು ಬೆಳಕು ಚೆಲ್ಲುತ್ತದೆ.

Cereal Cultivation : Current Status and Challenges?:

ಸಿರಿಧಾನ್ಯ ಕೃಷಿಯನ್ನು ರೈತರಿಗೆ ಹೆಚ್ಚು ಲಾಭದಾಯಕವಾಗಿಸಲು ಬೆಂಬಲ ಬೆಲೆ, ಮಾರುಕಟ್ಟೆ ಮಾರ್ಗಗಳು ಮತ್ತು ಸಂಶೋಧನಾ ಹೂಡಿಕೆಗಳು ಸೇರಿದಂತೆ ನೀತಿ ಮಧ್ಯಸ್ಥಿಕೆಗಳ ಅಗತ್ಯವನ್ನು ವರದಿ ಒತ್ತಿಹೇಳುತ್ತದೆ. ಭಾರತವು ವಾರ್ಷಿಕವಾಗಿ 200 ಮಿಲಿಯನ್ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿದ್ದರೆ, ಇದರಲ್ಲಿ ಸಿರಿಧಾನ್ಯ 20 ಮಿಲಿಯನ್ ಟನ್‌ಗಳಿಗಿಂತ ಕಡಿಮೆ ಕೊಡುಗೆ ನೀಡುತ್ತಿವೆ. MILLET ಸಿರಿಧಾನ್ಯ ಕೃಷಿಯ ನಿವ್ವಳ ಆದಾಯ ಪ್ರತಿ ಹೆಕ್ಟೇರ್‌ಗೆ ರೂ. 10,000 ಇದೆ. ಇದು ಅಕ್ಕಿ (224% ಆದಾಯ) ಮತ್ತು ಗೋಧಿ (304% ಆದಾಯ) ನಂತಹ ಇತರ ಧಾನ್ಯಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದನ್ನ ಅಧ್ಯಯನ ತಿಳಿಸಿದೆ.

Cereals as Health Cereals:

ಆಹಾರದಲ್ಲಿ ಸಿರಿಧಾನ್ಯವನ್ನ ಸೇರಿಸುವುದರಿಂದ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಸ್ಥೂಲಕಾಯದಂತಹ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2019-21) ಹೇಳಿದೆ. ಕೇಂದ್ರ ಸರ್ಕಾರವು 2018 ರಿಂದ ಸಿರಿಧಾನ್ಯ ಆಧಾರಿತ ಉತ್ಪನ್ನಗಳನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸೇರಿಸಿದೆ. ಶಾಲಾ ಮಕ್ಕಳಲ್ಲಿಯೂ ಅವುಗಳ ಸೇವನೆಯನ್ನು ಉತ್ತೇಜಿಸಿದೆ. MILLET ಹೆಚ್ಚಿನ ಪೌಷ್ಟಿಕಾಂಶಕ್ಕೆ ಹೆಸರುವಾಸಿಯಾದ ಸಿರಿಧಾನ್ಯದಲ್ಲಿ ಪ್ರೋಟೀನ್, ಫೈಬರ್, ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ. ಅವು ಬಂಜರು ಭೂಮಿಯಲ್ಲಿಯೂ ಬೆಳೆಯುತ್ತವೆ ಮತ್ತು ವಿಪರೀತ ತಾಪಮಾನವನ್ನೂ ತಡೆದುಕೊಳ್ಳುತ್ತವೆ.

K Hill’s Study on Cereals:

ಭಾರತದಲ್ಲಿ ಸಿರಿಧಾನ್ಯ ಉತ್ಪಾದನೆಯಲ್ಲಿ ತಮಿಳುನಾಡು ಏಳನೇ ಸ್ಥಾನದಲ್ಲಿದೆ. 1990 ರಿಂದ MSSRF, ICRISAT ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಕೆ ಹಿಲ್ಸ್ ಅವರು ಸಿರಿಧಾನ್ಯ ಕೃಷಿ ಪುನಶ್ಚೇತನಕ್ಕೆ ಶ್ರಮಿಸಿದ್ದಾರೆ. ಅವರು ನೀಡಿರುವ ಸಲಹೆಗಳು ಹೀಗಿವೆ.

  • ಸುಧಾರಿತ ತಳಿಗಳೊಂದಿಗೆ ಬೀಜ ಬ್ಯಾಂಕ್‌ಗಳನ್ನು ಸ್ಥಾಪಿಸುವುದು.
  • ಆಧುನಿಕ ಕೃಷಿ ಉಪಕರಣಗಳನ್ನು ಒದಗಿಸುವುದು.
  • ನವೀನ ಕೃಷಿ ಮತ್ತು ಸಂಸ್ಕರಣಾ ತಂತ್ರಗಳ ಕುರಿತು ರೈತರಿಗೆ ತರಬೇತಿ ನೀಡುವುದು.
  • ಸಿರಿಧಾನ್ಯ ಸಂಸ್ಕರಣೆ ಮತ್ತು ಮಾರುಕಟ್ಟೆಯನ್ನು ನೋಡಿಕೊಳ್ಳುವ ಕೆ ಹಿಲ್ಸ್ ಆಗ್ರೋ ಡೈವರ್ಸಿಟಿ ಕನ್ಸರ್ವೇಟರ್ಸ್ ಫೆಡರೇಶನ್ ಅನ್ನು ಸ್ಥಾಪಿಸುವುದು.

ಕೆ. ಹಿಲ್ಸ್‌ನ ಸಿರಿಧಾನ್ಯ ಉತ್ಪನ್ನಗಳನ್ನು ಈಗ ತಮಿಳುನಾಡಿನ 12 ಜಿಲ್ಲೆಗಳಲ್ಲಿ “ಕೊಲ್ಲಿ ಹಿಲ್ಸ್ ನ್ಯಾಚುರಲ್ ಫುಡ್” ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. MILLETಈ ಪ್ರಯತ್ನಗಳು ಸ್ಥಳೀಯ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಿದೆ. ನಾಮಕ್ಕಲ್ ಜಿಲ್ಲೆಯಲ್ಲಿ ಕಡಿಮೆ ತೂಕದ ಮಕ್ಕಳ ಪ್ರಮಾಣವನ್ನು 39% ರಿಂದ 18% ಕ್ಕೆ ಇಳಿಸಿದೆ.

ಇದನ್ನು ಓದಿರಿ : TRUMP INAUGURATION ON MONDAY : ಮೊದಲ ದಿನವೇ ಮಹತ್ವದ ಆದೇಶಕ್ಕೆ ಸಜ್ಜು

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

Aryan Khan News: ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ...