ಕೊಝಿಕ್ಕೋಡ್: ಚಿತ್ರರಂಗದಲ್ಲಿನ ದೌರ್ಜನ್ಯ ಕುರಿತು ನ್ಯಾ.ಹೇಮಾ ಸಮಿತಿಯ ನೀಡಿರುವ ವರದಿಯಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ರಾಜ್ಯ ಮಾಹಿತಿ ಆಯೋಗ ಬಿಡುಗಡೆ ಮಾಡದಂತೆ ಸೂಚಿಸಿರುವ ಭಾಗವನ್ನು ಮಾತ್ರವೇ ಕೈಬಿಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮಲಯಾಳಂ ಸಿನಿ ಉದ್ಯಮದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ನ್ಯಾ.ಹೇಮಾ ಸಮಿತಿ ನೀಡಿರುವ ವರದಿಯಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ ಎಂದು ಕೇರಳ ಸಾಂಸ್ಕೃತಿಕ ಸಚಿವ ಸಾಜಿ ಚೆರಿಯನ್ ತಿಳಿಸಿದ್ದಾರೆ. ಅಲ್ಲದೇ, ಸಮಿತಿ ನೀಡಿರುವ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸರ್ಕಾರವು ನ್ಯಾಯಾಲಯದ ನಿರ್ದೇಶನಕ್ಕೆ ಕಟ್ಟಿಬದ್ಧವಾಗಿದೆ. ಸದ್ಯ ಈ ಪ್ರಕರಣ ಹೈಕೋರ್ಟ್ ಮುಂದಿದೆ. ರಾಜ್ಯ ಮಾಹಿತಿ ಆಯೋಗ ಬಿಡುಗಡೆ ಮಾಡದಂತೆ ಸೂಚಿಸಿರುವ ಭಾಗವನ್ನು ಮಾತ್ರವೇ ಕೈಬಿಡಲಾಗುವುದು. ಆಯೋಗವೂ ಈ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಸೂಚಿಸಿದರೆ, ನಮಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರವೂ ಚಲನಚಿತ್ರ ನೀತಿ ಕುರಿತು ಕರಡು ಸಿದ್ಧಪಡಿಸಲಿದೆ ಎಂದ ಅವರು ಸರ್ಕಾರವೂ ಕಾನೂನು ಮಿತಿಯೊಳಗೆ ಎಲ್ಲಾ ಕ್ರಮ ನಡೆಸಿದೆ. ಇದೇ ವೇಳೆ ಲೋಪದೋಷದ ಆರೋಪ ತಳ್ಳಿ ಹಾಕಿದ ಅವರು, ವರದಿ ಬಿಡುಗಡೆ ಸಂಬಂಧ ನಮಗೆ ಯಾವುದೇ ಭಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿನಿಮಾ ಉದ್ಯಮದಲ್ಲಿ ಮಹಿಳೆಯರು ಎದುರಿಸಿದ ಸಮಸ್ಯೆಗಳ ಕುರಿತು ತಿಳಿಸಲು ಸರ್ಕಾರವೂ ಬದ್ಧವಾಗಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಇಂತಹ ಒಂದು ಸಮಿತಿಯನ್ನು ರಚಿಸಲಾಗಿದೆ. ವರದಿ ಸಂಬಂಧಿಸಿದಂತೆ ರಾಜ್ಯ ಮಾಹಿತಿ ಆಯೋಗ ನಿರ್ದೇಶನಂತೆ ನಾವು ಎಲ್ಲಾ ಮಾಹಿತಿಯನ್ನು ಬಹಿರಂಗ ಪಡಿಸಿದ್ದು, ಇದು ಪಾರದರ್ಶಕವಾಗಿದೆ. ಚಲನಚಿತ್ರ ನೀತಿ ಸೇರಿದಂತೆ ಹೇಮಾ ಸಮಿತಿ ಶಿಫಾರಸನ್ನು ಸರ್ಕಾರ ಜಾರಿಗೊಳಿಸುತ್ತದೆ ಎಂದರು.
ಕೇರಳ ಚಲನಚಿತ್ರ ಉದ್ಯಮದಲ್ಲಿ ಮಹಿಳೆಯರ ಮೇಲೆ ನಡೆದಿವೆ ಎನ್ನಲಾದ ವ್ಯಾಪಕ ದೌರ್ಜನ್ಯಗಳ ವರದಿ ತಯಾರಿಸಲು ನ್ಯಾಯಮೂರ್ತಿ ಹೇಮಾ ಸಮಿತಿಯನ್ನು 2017ರಲ್ಲಿ ನೇಮಿಸಿತ್ತು. ಈ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿತು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now