Ind Was Inga 1st Read News:
ಇದೀಗ ಏಕದಿನ ಸರಣಿ ಆಡಲು MOHAMMED SHAMI ಸಜ್ಜಾಗಿದ್ದು, ಇಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದಲ್ಲಿ MOHAMMED SHAMI ಕಣಕ್ಕಿಳಿಯುವ ಸಾಧ್ಯತೆ ಇದೆ. ಸುಮಾರು 15 ತಿಂಗಳ ನಂತರ ಏಕದಿನ ಪಂದ್ಯ ಆಡಲಿರುವ MOHAMMED SHAMI ದೊಡ್ಡ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
ಇನ್ನೆರಡು ವಿಕೆಟ್ ಪಡೆದರೆ ದಿಗ್ಗಜ ಕ್ರಿಕೆಟರ್ ದಾಖಲೆ ಮುರಿಯಲಿದ್ದಾರೆ.ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಪ್ರಾರಂಭವಾಗಲಿದೆ. 2023ರ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದ ಟೀಂ ಇಂಡಿಯಾದ ಸ್ಟಾರ್ ಬೌಲರ್ MOHAMMED SHAMI ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮೂಲಕ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ.ಹೌದು, ಇಂದು ನಾಗ್ಪುರದ ವಿದರ್ಭ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗುತ್ತಿವೆ.
ಈಗಾಗಲೇ ಆಂಗ್ಲರ ವಿರುದ್ಧ ಟಿ-20 ಸರಣಿ ಗೆದ್ದಿರುವ ಭಾರತ, ಏಕದಿನ ಸರಣಿಯಲ್ಲೂ ಪ್ರಾಬಲ್ಯ ಸಾಧಿಸಲು ಯೋಜನೆ ರೂಪಿಸಿಕೊಂಡಿದೆ. ಇದರ ನಡುವೆ MOHAMMED SHAMI ಮತ್ತೊಂದು ದಾಖಲೆ ಮುರಿಯಲು ಸಜ್ಜಾಗಿದ್ದಾರೆ.MOHAMMED SHAMI ಇದುವರೆಗೆ 101 ಏಕದಿನ ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ 195 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಎರಡು ವಿಕೆಟ್ ಪಡೆದರೆ, ಟೀಮ್ ಇಂಡಿಯಾದ ವೇಗಿ ವೆಂಕಟೇಶ್ ಪ್ರಸಾದ್ ಅವರ ದಾಖಲೆ ಮುರಿಯಲಿದ್ದಾರೆ. ಏಕದಿನ ಪಂದ್ಯದಲ್ಲಿ ವೆಂಕಟೇಶ್ ಪ್ರಸಾದ 196 ವಿಕೆಟ್ ಪಡೆದಿದ್ದಾರೆ.
5 wickets to go:ಸ್ಟಾರ್ಕ್ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು 102 ಪಂದ್ಯಗಳಲ್ಲಿ 200 ವಿಕೆಟ್‌ಗಳನ್ನು ಪಡೆದಿದ್ದಾರೆ. ಸದ್ಯ, ಶಮಿ 101 ಏಕದಿನ ಪಂದ್ಯಗಳನ್ನು ಆಡಿ 195 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ಐದು ವಿಕೆಟ್ ಪಡೆದರೆ, ಅವರು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರ ದಾಖಲೆ ಸರಿಗಟ್ಟಲಿದ್ದಾರೆ.
ಒಂದು ವೇಳೆ 6 ವಿಕೆಟ್ ಪಡೆದರೇ ಸ್ಟಾರ್ಕ್ ಅವರ ದಾಖಲೆ ಮುರಿಯಲಿದ್ದಾರೆ.ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ MOHAMMED SHAMI ಇನ್ನೂ 5 ವಿಕೆಟ್ ಪಡೆದರೆ, 200 ವಿಕೆಟ್ ಕ್ಲಬ್ಗೆ ಸೇರಲಿದ್ದಾರೆ. ಇದರೊಂದಿಗೆ ಅವರು ಟೀಮ್ ಇಂಡಿಯಾ ಪರ ಏಕದಿನ ಪಂದ್ಯದಲ್ಲಿ 200 ವಿಕೆಟ್ ಪಡೆದ ಎಂಟನೇ ಬೌಲರ್ ಆಗಲಿದ್ದಾರೆ. ಒಂದು ವೇಳೆ ಮೊದಲ ಪಂದ್ಯದಲ್ಲೇ MOHAMMED SHAMI 5 ವಿಕೆಟ್ ಪಡೆದರೆ ವೇಗವಾಗಿ ಇನ್ನೂರು ವಿಕೆಟ್ ಪಡೆದ ಬೌಲರ್ ಆಗಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರ ದಾಖಲೆ ಸರಿಗಟ್ಟಲಿದ್ದಾರೆ.
ಇದನ್ನು ಓದಿರಿ :Records Galore At Wankhede: Abhishek Sharma And India Shatter Plethora Of Records In 5th T20I vs England