Mohanlal News:
ಜನಪ್ರಿಯ ನಟ ಮೋಹನ್ ಲಾಲ್, ನಟ-ನಿರ್ದೇಶಕ ಅನೂಪ್ ಮೆನನ್ ಅವರೊಂದಿಗೆ ತಮ್ಮMOHANLAL NEW FILM ಘೋಷಿಸಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟ, “ನನ್ನ ಮುಂದಿನ ಸಿನಿಮಾ ಘೋಷಿಸಲು ಬಹಳ ಸಂತೋಷವಾಗುತ್ತಿದೆ. ಪ್ರೀತಿ, ತವಕ ಮತ್ತು ಸಂಗೀತವನ್ನೊಳಗೊಂಡ ಈ ಡ್ರಾಮ್ಯಾಟಿಕ್ ಜರ್ನಿಯನ್ನು ತಿರುವನಂತಪುರಂ, ಕೋಲ್ಕತ್ತಾ ಮತ್ತು ಶಿಲ್ಲಾಂಗ್‌ನಲ್ಲಿ ಚಿತ್ರೀಕರಿಸಲಾಗುವುದು. ಅನೂಪ್ ಮೆನನ್ ಬರೆದು ನಿರ್ದೇಶಿಸುತ್ತಿದ್ದಾರೆ.
ಈ ಸಬ್ಜೆಕ್ಟ್ ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿದೆ. ನಮ್ಮ ಪ್ರಯಾಣದ ಭಾಗವಾಗಲು ನಿಮ್ಮೆಲ್ಲರನ್ನು ನಾನು ಸ್ವಾಗತಿಸುತ್ತೇನೆ” ಎಂದು ಮೋಹನ್ ಲಾಲ್ ಬರೆದುಕೊಂಡಿದ್ದಾರೆ. MOHANLAL NEW FILM ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದ್ದಾರೆ.
ಹೌದು, ಅವರಿಂದು ತಮ್ಮ ಮುಂದಿನ ಚಿತ್ರಕ್ಕಾಗಿ ನಟ-ನಿರ್ದೇಶಕ ಅನೂಪ್ ಮೆನನ್ ಅವರೊಂದಿಗೆ ಕೈಜೋಡಿಸುತ್ತಿರುವ ವಿಚಾರವನ್ನು ಘೋಷಿಸಿದ್ದಾರೆ. ಈ ಸಿನಿ ಪ್ರಯಾಣದ ಬಗೆಗಿನ ತಮ್ಮ ಉತ್ಸಾಹವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಪ್ರೀತಿ, ತವಕ ಮತ್ತು ಸಂಗೀತದಿಂದ ತುಂಬಿದ ಡ್ರಾಮಾಟಿಕ್ ಪ್ರಯಾಣ ಎಂದು ಬಣ್ಣಿಸಿದ್ದಾರೆ.
MOHANLAL NEW FILM , ಬರಹಗಾರ ಮತ್ತು ನಿರ್ದೇಶಕರಾಗಿ ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿರುವ ಅನೂಪ್ ಮೆನನ್, ಈ ಹಿಂದೆ ‘1983’ (2014) ಮತ್ತು ‘ಪದ್ಮಾ’ (2022) ನಂತಹ ಹಲವು ಯಶಸ್ವಿ ಯೋಜನೆಗಳನ್ನು ನಿರ್ದೇಶಿಸಿ, ಚಿತ್ರಕಥೆ ಬರೆದಿದ್ದಾರೆ. ಸದ್ಯ ಮೋಹನ್ ಲಾಲ್ ಅವರೊಂದಿಗೆ ಕೈ ಜೋಡಿಸಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿದೆ.
ಈ ಅನೌನ್ಸ್ಮೆಂಟ್ ಜೊತೆಗೆ, ಮೋಹನ್ ಲಾಲ್ ಅವರು ಅನೂಪ್ ಮೆನನ್ ಮತ್ತು ನಿರ್ಮಾಣ ಸಂಸ್ಥೆಯಾದ ಟೈಮ್‌ಲೆಸ್ ಮೂವೀಸ್‌ನ ಸದಸ್ಯರೊಂದಿಗಿನ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಕಲಾವಿದರು ಮತ್ತು ಸಿಬ್ಬಂದಿ ಬಗ್ಗೆ ಇನ್ನೂ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲವಾದರೂ, ಇಬ್ಬರು ಅನುಭವಿ ಕಲಾವಿದರ ಕಾಂಬಿನೇಷನ್ ಸಿನಿಪ್ರಿಯರ ನಿರೀಕ್ಷೆಗಳನ್ನು ಹೆಚ್ಚಿಸಿವೆ.
MOHANLAL NEW FILM ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್ಡಮ್ ಹೊಂದಿದ್ದಾರೆ. ಇದೀಗ ತಮ್ಮ ಹೊಸ ಚಿತ್ರ ಘೋಷಿಸಿರುವುದು, ಅದರಲ್ಲೂ ನಟ-ನಿರ್ದೇಶಕ ಅನೂಪ್ ಮೆನನ್ ಅವರೊಂದಿಗೆ ಕೈಜೋಡಿಸಿರುವುದು ಇಂಟ್ರೆಸ್ಟಿಂಗ್ ವಿಚಾರವೇ. ಮುಂದಿನ ದಿನಗಳಲ್ಲಿ ಈ ಪ್ರಾಜೆಕ್ಟ್ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಒದಗಿಸಲಿದ್ದಾರೆ. ಮತ್ತೊಂದೆಡೆ, ಮೋಹನ್ ಲಾಲ್ ಹಲವು ಪ್ರೊಜೆಕ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಎಂಪುರಾನ್. ಇದು 2019ರ ಬ್ಲಾಕ್ಬಸ್ಟರ್ ಲೂಸಿಫರ್ನ ಮುಂದುವರಿದ ಭಾಗ. ಮೋಹನ್ ಲಾಲ್ ನಿರ್ವಹಿಸಿದ ಸ್ಟೀಫನ್ ನೆಡುಂಪಲ್ಲಿ ಪಾತ್ರದ ರೋಮಾಂಚಕ ಕಥೆಯನ್ನು ಮುಂದುವರಿಸುವ ನಿರೀಕ್ಷೆ ಇದೆ. ಅಲ್ಲದೇ, ಅವರು ತರುಣ್ ಮೂರ್ತಿ ನಿರ್ದೇಶನದ ‘ಥುಡರಂ’ ಚಿತ್ರವನ್ನೂ ಸಹ ಹೊಂದಿದ್ದಾರೆ.
ಇದನ್ನು ಓದಿರಿ : Visakhapatnam Espionage Case: NIA Arrests Three More Including Ex-Trainee At Cochin Shipyard