WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Podgorica (Montenegro) News:
MONTENEGRO ನಡೆದ ಗುಂಡಿನ ದಾಳಿಯಲ್ಲಿ 12 ಜನ ಸಾವಿಗೀಡಾಗಿದ್ದಾರೆ.MONTENEGROದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರನ್ನು ಭೀಕರವಾಗಿ ಗುಂಡಿಕ್ಕಿ ಕೊಂದ ನಂತರ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಗುಂಡು ಹಾರಿಸಿದ ವ್ಯಕ್ತಿಯನ್ನು 45 ವರ್ಷದ ಅಕೊ ಮಾರ್ಟಿನೊವಿಕ್ ಎಂದು ಗುರುತಿಸಲಾಗಿದ್ದು, ಬಾರ್ ಮಾಲೀಕ, ಬಾರ್ ಮಾಲೀಕನ ಮಕ್ಕಳು ಮತ್ತು ಅವರ ಕುಟುಂಬ ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು ಗೃಹ ಸಚಿವ ಡ್ಯಾನಿಲೊ ಸರಾನೊವಿಕ್ ತಿಳಿಸಿದ್ದಾರೆ.ಪಶ್ಚಿಮ ಪಟ್ಟಣ ಸೆಟಿಂಜೆಯಲ್ಲಿ ಬುಧವಾರ ಬಾರ್ವೊಂದರಲ್ಲಿ ನಡೆದ ಜಗಳದ ನಂತರ ನಡೆದ ಈ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Fugitive man surrounded by police; The assassin who shot himself in the head – ಪೊಲೀಸರು ಬೀದಿ ಬೀದಿಗಳಲ್ಲಿ ಪತ್ತೆ ಕಾರ್ಯಾಚರಣೆ ನಡೆಸಿ ಹಂತಕನನ್ನು ಪತ್ತೆ ಮಾಡಿದ್ದರು. ಗುಂಡು ಹಾರಿಸಿಕೊಂಡು ಗಾಯಗೊಂಡಿದ್ದ ಮಾರ್ಟಿನೊವಿಕ್ ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಸರನೊವಿಕ್ ಹೇಳಿದರು.
ರಾಜಧಾನಿ ಪೊಡ್ಗೋರಿಕಾದಿಂದ ವಾಯುವ್ಯಕ್ಕೆ 30 ಕಿಲೋಮೀಟರ್ ದೂರದಲ್ಲಿರುವ ಸೆಟಿಂಜೆ ಪಟ್ಟಣದಲ್ಲಿ ದಾಳಿಕೋರನನ್ನು ಹುಡುಕಲು ಪೊಲೀಸರು ವಿಶೇಷ ತಂಡಗಳನ್ನು ಕಳುಹಿಸಿದ್ದರು.ಹಿಂಸಾಚಾರದ ನಂತರ ಪರಾರಿಯಾಗಿದ್ದ ದಾಳಿಕೋರನನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಸುತ್ತುವರೆದಿದ್ದರು. ಈ ಸಂದರ್ಭದಲ್ಲಿ ಆತ ತಲೆಗೆ ಗುಂಡು ಹಾರಿಸಿಕೊಂಡು ಆತ ಮೃತಪಟ್ಟಿದ್ದಾನೆ ಎಂದು ಸರನೋವಿಕ್ ಹೇಳಿದರು.
Civilian deaths, three days of mourning: “ಇಡೀ ದಿನ ಬಾರ್ನಲ್ಲಿದ್ದ ಮಾರ್ಟಿನೊವಿಕ್ ಅಲ್ಲಿ ಜಗಳ ಆರಂಭಿಸಿದ್ದ. ನಂತರ ಮನೆಗೆ ಹೋಗಿ ಬಂದೂಕು ತಂದು ಸಂಜೆ 5.30 ಸುಮಾರಿಗೆ ಗುಂಡು ಹಾರಿಸಿ ನಾಗರಿಕರನ್ನು ಹತ್ಯೆ ಮಾಡಿದ್ದಾನೆ” ಎಂದು ಪೊಲೀಸ್ ಆಯುಕ್ತ ಲಾಜರ್ ಸೆಪನೊವಿಕ್ ಮಾಹಿತಿ ನೀಡಿದರು.
ನಾಗರಿಕರ ಸಾವಿನ ಹಿನ್ನೆಲೆಯಲ್ಲಿ ಸರ್ಕಾರ ಗುರುವಾರದಿಂದ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದು, ಪ್ರಧಾನಿ ಮಿಲೋಜ್ಕೊ ಸ್ಪಾಜಿಕ್ ಈ ಗುಂಡಿನ ದಾಳಿಯನ್ನು ಭಯಾನಕ ದುರಂತ ಎಂದು ಬಣ್ಣಿಸಿದ್ದಾರೆ. MONTENEGROದ ಐತಿಹಾಸಿಕ ರಾಜಧಾನಿ ಸೆಟಿಂಜೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದ ಎರಡನೇ ಗುಂಡಿನ ದಾಳಿ ಇದಾಗಿದೆ.
ಆಗಸ್ಟ್ 2022 ರಲ್ಲಿ ಸೆಟಿಂಜೆಯಲ್ಲಿ ದಾಳಿಕೋರನೊಬ್ಬ ಇಬ್ಬರು ಮಕ್ಕಳು ಸೇರಿದಂತೆ 10 ಜನರನ್ನು ಕೊಂದಿದ್ದನು.(ANI)ಸುಮಾರು 6,20,000 ಜನಸಂಖ್ಯೆಯನ್ನು ಹೊಂದಿರುವ ಸಣ್ಣ ದೇಶವಾದ MONTENEGRO ಬಂದೂಕು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಬಹುತೇಕ ಜನ ಸಾಂಪ್ರದಾಯಿಕವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದಾರೆ.
ಇದನ್ನು ಓದಿರಿ : SOUTH KOREA PLANE CRASH : ದಕ್ಷಿಣ ಕೊರಿಯಾ ಭೀಕರ ವಿಮಾನ ದುರಂತ: