spot_img
spot_img

ವಿಜಯನಗರ ಜಿಲ್ಲೆಯಲ್ಲಿ 9 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದು : ಸರ್ಕಾರ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ವಿಜಯನಗರ: “₹1.20 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವ 9 ಸಾವಿರ ಕುಟುಂಬಗಳ ಬಿಪಿಎಲ್​ ರೇಷನ್ ಕಾರ್ಡ್​ಗಳನ್ನು ಅಮಾನತು ಮಾಡಲಾಗಿದೆ. ಮುಖ್ಯವಾಗಿ, 101 ಸರ್ಕಾರಿ ನೌಕರರು ಬಿಪಿಎಲ್​ ಕಾರ್ಡ್​ ಹೊಂದಿದ್ದರು. ಅವುಗಳನ್ನು ರದ್ದುಗೊಳಿಸಲಾಗಿದೆ.

ಬಿಪಿಎಲ್ ಕಾರ್ಡ್ ಅಮಾನತು ಆಗಿರುವ ಬಗ್ಗೆ, ಅರ್ಹ ಕಾರ್ಡ್​ದಾರರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ” ಎಂದು ಜಿಲ್ಲೆಯ ಆಹಾರ ಮತ್ತು ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.

ಬಿಪಿಎಲ್​ ಕಾರ್ಡ್​ ಅಮಾನತಾಗಿರುವವರು ತಮ್ಮ ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷವಿರುವ ಬಗ್ಗೆ ಆದಾಯ ಪ್ರಮಾಣಪತ್ರ, ದಾಖಲೆಗಳನ್ನು ಸಲ್ಲಿಸಿದಲ್ಲಿ, ಅದು ಬಿಪಿಎಲ್​ ಕಾರ್ಡ್​ ಆಗಿಯೇ ಮುಂದುವರಿಯಲಿದೆ ಎಂದು ಇಲಾಖೆ ಉಪನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.

ಹೊಸಪೇಟೆ- 11, ಹಗರಿಬೊಮ್ಮನಹಳ್ಳಿ- 28, ಹೂವಿನಹಡಗಲಿ- 23, ಕೂಡ್ಲಿಗಿ- 16, ಕೊಟ್ಟೂರು- 11, ಹರಪನಹಳ್ಳಿ- 12 ತಾಲೂಕುಗಳಲ್ಲಿ ಒಟ್ಟು 101 ಸರ್ಕಾರಿ ನೌಕರರೇ ಬಿಪಿಎಲ್ ಕಾರ್ಡ್ ಹೊಂದಿದ್ದರು. ಅವರ ಕಾರ್ಡ್​ಗಳನ್ನು ರದ್ದುಗೊಳಿಸಲಾಗಿದೆ. ​ಅವರಿಗೆ ನೋಟಿಸ್ ಜಾರಿ ಮಾಡಿ ದಂಡ ಹಾಕಲಾಗಿದೆ ಎಂದು ತಿಳಿಸಿದರು.

“ಕುಟುಂಬ ತಂತ್ರಾಂಶದ ಮೂಲಕ ಬಂದ ಮಾಹಿತಿಯ ಪ್ರಕಾರ, ಜಿಲ್ಲೆಯ ಹಡಗಲಿ 89, ಹಗರಿಬೊಮ್ಮನಹಳ್ಳಿ 108, ಹೊಸಪೇಟೆ 492, ಕೂಡ್ಲಿಗಿ 105, ಕೊಟ್ಟೂರು 66, ಹರಪನಹಳ್ಳಿ 171 ಒಟ್ಟು 1031 ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ.

ಅವುಗಳ ಬಗ್ಗೆ ಕ್ರಮ ಕೈಗೊಂಡಿದ್ದು, ಬಿಪಿಎಲ್​ ಕಾರ್ಡ್​ಗಳನ್ನು ಎಪಿಎಲ್​ ಕಾರ್ಡ್​ಗಳಾಗಿ ಪರಿವರ್ತನೆ ಮಾಡಲಾಗಿದೆ” ಎಂದರು.

“ಹಡಗಲಿ- 112, ಹಗರಿಬೊಮ್ಮನಹಳ್ಳಿ- 136, ಹೊಸಪೇಟೆ- 503, ಕೂಡ್ಲಿಗಿ- 121, ಕೊಟ್ಟೂರು- 77, ಹರಪನಹಳ್ಳಿ- 183 ಒಟ್ಟು 1132 ಕಾರ್ಡ್​ಗಳನ್ನು ಎಪಿಎಲ್​ ಆಗಿ ಪರಿವರ್ತನೆ ಮಾಡಲಾಗಿದೆ” ಎಂದು ತಿಳಿಸಿದರು.

“ಹಡಗಲಿ- 932, ಹಗರಿಬೊಮ್ಮನಹಳ್ಳಿ- 962, ಹೊಸಪೇಟೆ- 1572, ಕೂಡ್ಲಿಗಿ- 1518, ಕೊಟ್ಟೂರು- 1467, ಹರಪನಹಳ್ಳಿ- 2875 ಒಟ್ಟು 9,326 ಬಿಪಿಎಲ್​ ಕಾರ್ಡ್​ ಹೊಂದಿರುವ ಕುಟುಂಬಗಳು ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿವೆ.

ಅವರ ಕಾರ್ಡ್​ಗಳನ್ನು ಅಮಾನತು ಮಾಡಲಾಗಿದೆ. ಇವರು ತಮ್ಮ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಅಧಿಕ ಇಲ್ಲ ಎಂದು ಆದಾಯ ಪ್ರಮಾಣ ಪತ್ರ ದಾಖಲೆಗಳನ್ನು ಸಲ್ಲಿಸಿದಲ್ಲಿ, ಅರ್ಹರಾಗಿದ್ದಲ್ಲಿ ಅಂತಹ ಕಾರ್ಡ್​ಗಳನ್ನು ಬಿಪಿಎಲ್​ ಕಾರ್ಡ್​ಗಳಾಗಿಯೇ ಮುಂದುವರಿಸಲಾಗುತ್ತದೆ” ಎಂದು ಹೇಳಿದರು.

“ಬಿಪಿಎಲ್, ಎಪಿಎಲ್ ಕಾರ್ಡ್​ಗಳ ಅಪ್ಡೇಟ್​ ಕೆಲಸಕ್ಕೆ ಕರೆಂಟ್ ಹೋದರೆ ಯುಪಿಸಿ ಇಲ್ಲದಿರುವುದರಿಂದ ಬಹಳ ಸಮಸ್ಯೆ ಆಗುತ್ತದೆ. ಇಲ್ಲಿ ದ್ವೀತಿಯ ದರ್ಜೆ ಸಹಾಯಕರು ಮಾತ್ರ ಇದ್ದಾರೆ. ಯಾವುದೇ ಕಂಪ್ಯೂಟರ್ ಆಪರೇಟರ್, ಕಚೇರಿ ಸಹಾಯಕರು ಇಲ್ಲ.‌

ಬಿಪಿಎಲ್ ಕಾರ್ಡ್​ಗಳನ್ನು ಪರೀಶಿಲನೆ ಮಾಡಿ, ಯತಾಸ್ಥಿತಿಗೆ ಮಾಡಬೇಕಿದೆ. ಜನರ ಮೊಬೈಲ್​ಗಳಿಗೆ ಎಸ್​ಎಂಎಸ್ ಹೋಗಿದೆ. ಜನ ಆತಂಕದಿಂದ ಇಲಾಖೆ ಕಚೇರಿಗೆ ಬರುತ್ತಿದ್ದಾರೆ. ಪರೀಶಿಲನೆ ಮಾಡಿ ನ್ಯಾಯ ಬೆಲೆ ಅಂಗಡಿ ಮೂಲಕ ಯಥಾಸ್ಥಿತಿಗೆ ಮಾಡಲಾಗುತ್ತದೆ.

ಹೊಸಪೇಟೆ ತಾಲೂಕಿನಲ್ಲಿ ಒಬ್ಬ ಮುಖ್ಯಲಿಪಿಕಾರು ಹಾಗೂ ಒಬ್ಬ ಎಸ್​ಡಿಎ ಮಾತ್ರ ಇದ್ದಾರೆ” ಎಂದು ಮುಖ್ಯ ಲಿಪಿಕಾರ ರುದ್ರೇಶ್ ತಿಳಿಸಿದರು.

“ವಿಜಯನಗರ ಜಿಲ್ಲೆಯಾಗಿ 4 ವರ್ಷ ಕಳೆದರೂ ಇಲ್ಲಿಯ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆ ಇದೆ.

ಆಹಾರ ಮತ್ತು ಸರಬರಾಜು ಇಲಾಖೆಯ ಹಗರಿಬೊಮ್ಮನಹಳ್ಳಿ ಹಾಗೂ ಹೊಸಪೇಟೆ ತಾಲೂಕುಗಳಲ್ಲಿ ಆಹಾರ ನಿರೀಕ್ಷಕರು ಇಲ್ಲ. ಹಾಗಾಗಿ ಬೇರೆ ಇಲಾಖೆಯ ಸಿಬ್ಬಂದಿಯನ್ನು ನೇಮಕ ಮಾಡಿ, ಅವರಿಂದ ಕೆಲಸ ಮಾಡಿಸುತ್ತಿದ್ದೇವೆ” ಎಂದರು.

ರೇಷನ್ ಕಾರ್ಡ್​ನಲ್ಲಿ ಅಮಾನತು ಹಾಗೂ ಐಟಿ ಎಂದು ಬಂದಿದ್ದರೆ ಗ್ರಾಹಕರ ಕುಟುಂಬದ ಪ್ರತಿಯೊಬ್ಬರ ಸದಸ್ಯರ ಆಧಾರ್‌ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಎರಡು ಫೋಟೋಗಳನ್ನು ತಂದು ತಹಶೀಲ್ದಾರ್‌ಗೆ ಮನವಿ ಪತ್ರ ಬರೆದು, ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಬೇಕು.

ಅದನ್ನು ಪರಿಶೀಲನೆ ಮಾಡುತ್ತೇವೆ. ಹೊಸಪೇಟೆ ತಾಲೂಕಿನ ಗ್ರಾಮೀಣ ಮತ್ತು ನಗರದಲ್ಲಿ ಒಟ್ಟು 59 ಸೊಸೈಟಿಗಳಿವೆ. ಪ್ರತಿ ಸೊಸೈಟಿಯ ಕನಿಷ್ಠ 40ರಿಂದ 50 ಕುಟುಂಬದವರಿಗೆ ಬಿಪಿಎಲ್ ಕಾರ್ಡ್ ಇವೆ. ಇಬ್ಬರು ಆಹಾರ ನಿರೀಕ್ಷಕರು ಬೇಕು” ಎಂದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಆಡಲು ಸ್ಪರ್ಧಿಗಳ ಹರಸಾಹಸ

ಕನ್ನಡದ ಬಿಗ್​ಬಾಸ್​ ಸೀಸನ್​ 11ರಲ್ಲಿ ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಸಖತ್​ ಸದ್ದು ಮಾಡುತ್ತಿದ್ದಾರೆ. ತಮ್ಮ ಹಳ್ಳಿ ಸೊಗಡಿನ ರೀತಿಯಲ್ಲೇ ಹಾಡು ಹಾಡಿ ವೀಕ್ಷಕರಿಗೆ ಮನರಂಜನೆ...

ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಕನ್ಯಾಕುಮಾರಿ ಮತ್ತು ಶ್ರೀಲಂಕಾ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮನ್ನಾರ್ ಗಲ್ಫ್...

ಹಿಂದುಳಿದ ವರ್ಗಗಳ ಮೀಸಲಾತಿಗೆ ಆಗ್ರಹ : ಪಂಚಮಸಾಲಿಗರ ಹೋರಾಟ ತೀವ್ರ!

ಬೆಂಗಳೂರು: ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ವಿರೋಧಿಸಿ ಸುವರ್ಣಸೌಧದ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಎದುರು ವಿಪಕ್ಷ ನಾಯಕ ಆರ್, ಅಶೋಕ್ ನೇತೃತ್ವದಲ್ಲಿ...

ಆಸ್ತಿ ತೆರಿಗೆ ಕಟ್ಟಲು ನಿರಾಕರಣೆ : ರಸ್ತೆ ಸರಿಪಡಿಸಿದ ಪಂಚಾಯಿತಿ ಸದಸ್ಯರು

ಬೆಂಗಳೂರು: ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂಬ ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ...