Motorola Edge 60 Fusion:
ಬಹುನಿರೀಕ್ಷಿತ ‘ MOTOROLA EDGE 60 FUSION’ ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ‘ MOTOROLA EDGE 60 FUSION’ ನ ಉತ್ತರಾಧಿಕಾರಿಯಾಗಿ ಬಿಡುಗಡೆ ಮಾಡಿದೆ.
ಕಳೆದ ವರ್ಷ ಈ ‘ಎ MOTOROLA EDGE 60 FUSION’ ಅನ್ನು ಬಿಡುಗಡೆ ಮಾಡಿತು. ಬಿಡುಗಡೆಯಾದಾಗಿನಿಂದ ಇದು ಅಪಾರ ಜನಪ್ರಿಯತೆ ಮತ್ತು ಉತ್ತಮ ಮಾರಾಟವನ್ನು ಗಳಿಸುವ ಮೂಲಕ ಕಂಪನಿಗೆ ಲಾಭವನ್ನು ತಂದುಕೊಟ್ಟಿದೆ. ಈಗ ಕಂಪನಿಯು ಅದರ ಅಪ್ಡೇಟ್ ಆವೃತ್ತಿಯಾದ ಮೊಟೊರೊಲಾ ಎಡ್ಜ್ 60 ಫ್ಯೂಷನ್ ಮಾದರಿಯನ್ನು ಹೊರ ತಂದಿದೆ. ಈ ಹೊಸ ಫೋನಿನ ಬೆಲೆ, ವೈಶಿಷ್ಟ್ಯಗಳು, ವಿಶೇಷತೆಗಳು ಮತ್ತು ಕೊಡುಗೆಗಳು ಇಲ್ಲಿವೆ..
ರೂಪಾಂತರಗಳ ಪ್ರಕಾರ ಬೆಲೆ: ಮೊಟೊರೊಲಾ ಈ ‘ಎಡ್ಜ್ 60 ಫ್ಯೂಷನ್ MOTOROLA EDGE 60 FUSION’ ಫೋನ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. 8GB RAM + 256GB ಸ್ಟೋರೇಜ್ ಹೊಂದಿರುವ ಬೆಲೆ ರೂ. 22,999 ಆಗಿದ್ರೆ, 12GB RAM + 256GB ಸ್ಟೋರೇಜ್ ಬೆಲೆ ರೂ. 24,999 ಆಗಿದೆ.
ಆಪರ್ಗಳು: ಈ ಫೋನ್ ಬಿಡುಗಡೆಯ ಸಮಯದಲ್ಲಿ ಕಂಪನಿಯು ಕೆಲವು ಬ್ಯಾಂಕ್ ಆಪರ್ಗಳನ್ನು ಸಹ ನೀಡುತ್ತಿದೆ. ಇದನ್ನು 20,999 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ 2,000 ರೂ.ಗಳ ಇನ್ಸ್ಟಂಟ್ ಡಿಸ್ಕೌಂಟ್ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 3050 ರೂ.ಗಳವರೆಗೆ ಇನ್ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು.
Specification and Features:
Design: ಈ ಫೋನ್ 161.2 x 73.08 x 8.25mm ಅಳತೆ ಮತ್ತು 180.1 ಗ್ರಾಂ ತೂಗುತ್ತದೆ. ಈ ಫೋನ್ ರಿಯರ್ನಲ್ಲಿ 3D ಸಿಲಿಕೋನ್ ವೀಗನ್ ಲೇದರ್ ಮತ್ತು ಫ್ರಂಟ್ನಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಸಪೋರ್ಟ್ ಅನ್ನು ಹೊಂದಿದೆ. ಈ ಫೋನ್ ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸಿಗಾಗಿ IP68/69 ರೇಟಿಂಗ್‌ನೊಂದಿಗೆ ಬರುತ್ತದೆ. ಇದರ ಜೊತೆಗೆ ಈ ಫೋನ್ ಮಿಲಿಟರಿ ಗ್ರೇಡ್ ಪ್ರೊಟೆಕ್ಷನ್ ಸರ್ಟಿಫಿಕೇಶನ್ (MIL STD-810H) ನೊಂದಿಗೆ ಪ್ರಮಾಣೀಕರಿಸಲ್ಪಟ್ಟಿದೆ. ಕಂಪನಿಯು ಈ ಫೋನ್‌ನಲ್ಲಿ ಟೈಪ್-ಸಿ ಪೋರ್ಟ್ ಅನ್ನು ಒದಗಿಸಿದೆ.
Battery:
ಈ ಫೋನ್ 5500mAh ಬ್ಯಾಟರಿಯನ್ನು ಹೊಂದಿದೆ. ಇದು 68W ಟರ್ಬೊಪವರ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ನೊಂದಿಗೆ ಬರುತ್ತದೆ.
Rear camera:
ಈ ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಈ ಸೆಟಪ್‌ನಲ್ಲಿರುವ ಮೇನ್ ಕ್ಯಾಮೆರಾ 50MP ಸೋನಿ – LYTIA 700C ಸೆನ್ಸಾರ್ನೊಂದಿಗೆ ಬರುತ್ತದೆ. ಇದರ ಅಪರ್ಚರ್ f/1.88 ಆಗಿದೆ. ಈ ಕ್ಯಾಮೆರಾ OIS ಸಪೋರ್ಟ್ನೊಂದಿಗೆ ರನ್ ಆಗುತ್ತದೆ.
ಈ ಫೋನ್‌ನ ಎರಡನೇ ಕ್ಯಾಮೆರಾ 13MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಬರುತ್ತದೆ. ಇದು 120-ಡಿಗ್ರಿಯ ಫಿಲ್ಡ್ ಆಫ್ ವೀವ್ ಹೊಂದಿದೆ. ಇದರ ಅಪರ್ಚರ್ f/2.2 ಆಗಿದೆ.
ಈ ಫೋನಿನ ಮೂರನೇ ಕ್ಯಾಮೆರಾ 3-ಇನ್-1 ಲೈಟ್ ಸೆನ್ಸಾರ್ (ಆಂಬಿಯೆಂಟ್ ಲೈಟ್ + ಫ್ಲಿಕರ್ ರಿಡಕ್ಷನ್, RGB ಸೆನ್ಸಾರ್) ನೊಂದಿಗೆ ಬರುತ್ತದೆ.
Display:
ಈ ಫೋನ್ 6.67-ಇಂಚಿನ pOLED ಕ್ವಾಡ್, ಸೂಪರ್ HD ಪ್ಲಸ್ 1.5K ರೆಸಲ್ಯೂಶನ್ ಡಿಸ್ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಇದರ ಹೆಚ್ಚಿನ ಬ್ರೈಟ್ನೆಸ್ ಮೋಡ್ 1400 ನಿಟ್ಸ್, HDR ಪೀಕ್ ಬ್ರೈಟ್ನೆಸ್ 4500 ನಿಟ್ಸ್ ಮತ್ತು ಟಚ್ ಶಾಂಪ್ಲಿಂಗ್ ರೇಟ್ 300Hz (ಗೇಮಿಂಗ್ ಮೋಡ್).
ಈ ಫೋನ್‌ನ ಸ್ಕ್ರೀನ್ HDR 10/10+ ಸಪೋರ್ಟ್, ಕಾರ್ನಿಂಗ್ ಗೊರಿಲ್ಲಾ 7i, ಆಂಟಿ-ಫಿಂಗರ್‌ಪ್ರಿಂಟ್ ಕೋಟಿಂಗ್ ಮತ್ತು ಆಕ್ವಾ ಟಚ್ ಸಪೋರ್ಟ್ನೊಂದಿಗೆ ಬರುತ್ತದೆ. ಇದರ ಡಿಸ್ಪ್ಲೇ ರೇಷಿಯೊ 20:09 ಮತ್ತು ಸ್ಕ್ರೀನ್ ಟು ಬಾಡಿ ರೇಷಿಯೊ ಶೇ.96.32 ರಷ್ಟು ಆಗಿದೆ. ಇದರ ಡಿಸ್ಪ್ಲೇ SGS ಬ್ಲೂ ಲೈಟ್ ರಿಡಕ್ಷನ್, SGS ಮೋಷನ್ ಬ್ಲರ್ ರಿಡಕ್ಷನ್, ಪ್ಯಾಂಟೋನ್ ಕ್ಯಾಲಿಬ್ರೇಶನ್ ಮತ್ತು ವಿಷನ್ ಬೂಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
Rear camera features:
ಈ ಫೋನ್‌ನ ಹಿಂದಿನ ಕ್ಯಾಮೆರಾ ಸೆಟಪ್ ಟೈಮ್‌ಲ್ಯಾಪ್ಸ್, ಸ್ಲೋ ಮೋಷನ್, ಪೋರ್ಟ್ರೇಟ್ ವಿಡಿಯೋ, ಡ್ಯುಯಲ್ ಕ್ಯಾಪ್ಚರ್ ವಿಡಿಯೋ, ಮ್ಯಾಕ್ರೋ ಮತ್ತು ಸ್ಪಾಟ್ ಕಲರ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ಇದು ವೀಡಿಯೊ ಸ್ಥಿರೀಕರಣ, ವೀಡಿಯೊ ಸ್ನ್ಯಾಪ್‌ಚಾಟ್, ಆಡಿಯೊ ಜೂಮ್ ಮತ್ತು ಬಾಹ್ಯ ಮೈಕ್ರೊಫೋನ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನ ಹಿಂಬದಿಯ ಕ್ಯಾಮೆರಾ ಬಳಸಿ ನೀವು 30FPS ನಲ್ಲಿ 4K ವೀಡಿಯೊವನ್ನು ರೆಕಾರ್ಡ್ ಮಾಡಬಹುದು.
Front camera features:
ಈ ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದರ ದ್ಯುತಿರಂಧ್ರ f/2.2 ಆಗಿದೆ. ಈ ಫೋನಿನ ಮುಂಭಾಗದ ಕ್ಯಾಮೆರಾ 30fps ನಲ್ಲಿ 4K ವೀಡಿಯೊವನ್ನು ರೆಕಾರ್ಡ್ ಮಾಡಬಹುದು. ಏತನ್ಮಧ್ಯೆ, ಇದರ ಮುಂಭಾಗದ ಕ್ಯಾಮೆರಾ 60FPS ಮತ್ತು 30FPS ನಲ್ಲಿ FHD ವೀಡಿಯೊವನ್ನು ರೆಕಾರ್ಡ್ ಮಾಡಬಹುದು.
Color and Audio:
ಕಂಪನಿಯು ಈ ಫೋನ್ ಅನ್ನು ಪ್ಯಾಂಟೋನ್ ಸ್ಲಿಪ್‌ಸ್ಟ್ರೀಮ್, ಪ್ಯಾಂಟೋನ್ ಅಮೆಜೋನೈಟ್ ಮತ್ತು ಪ್ಯಾಂಟೋನ್ ಜೆಫ್ರಿ ಎಂಬ ಮೂರು ಅದ್ಭುತ ಕಲರ್ಗಳ ಆಪ್ಶನ್ನಲ್ಲಿ ತಂದಿದೆ. ಇನ್ನು ಆಡಿಯೋ ಬಗ್ಗೆ ಹೇಳುವುದಾದ್ರೆ, ಈ ಫೋನ್ ಡಾಲ್ಬಿ ಅಟ್ಮಾಸ್ ಸಪೋರ್ಟ್ನೊಂದಿಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಇದು 2 ಮೈಕ್ರೊಫೋನ್‌ಗಳನ್ನು ಹೊಂದಿದೆ.
ಕಂಪನಿ
Connectivity:
ಯು ಈ ಫೋನ್‌ನಲ್ಲಿ 5G ಗಾಗಿ 6 ಬ್ಯಾಂಡ್‌ಗಳನ್ನು ಒದಗಿಸಿದೆ. ಇದು ಬ್ಲೂಟೂತ್ 5.4, ವೈ-ಫೈ 6, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಮತ್ತು ಡ್ಯುಯಲ್ ಸಿಮ್ ಸಪೋರ್ಟ್ ಹೊಂದಿದೆ. ಆದರೂ ಈ ಫೋನ್ NFC ಅನ್ನು ಸಪೋರ್ಟ್ ಮಾಡುವುದಿಲ್ಲ. ಆದರೆ ಅದರ ಹಿಂದಿನ ಫೋನ್, ‘ಮೊಟೊರೊಲಾ ಎಡ್ಜ್ 50 ಫ್ಯೂಷನ್’ NFC ಸಪೋರ್ಟ್ ಮಾಡುತ್ತಿತ್ತು.
ಇದನ್ನು ಓದಿ: Aashiqui 3: Kartik Aaryan and Sreeleela meet Sikkim Chief Minister Prem Singh Tamang