spot_img
spot_img

MS DHONI:ಚಾಂಪಿಯನ್ಸ್ ಟ್ರೋಫಿಗೆ ಸಿದ್ಧಗೊಳ್ಳುತ್ತಿರುವ ಭಾರತ.

spot_img
spot_img

Share post:

Champions Trophy 2025 News:

ಭಾರತ ತಂಡದ ಮಾಜಿ ನಾಯಕ ಎಂಎಸ್​ DHONI ಟೀಂ ಇಂಡಿಯಾಗೆ ಚಾಂಪಿಯನ್ಸ್​ ಟ್ರೋಫಿಯನ್ನು ಗೆದ್ದು ಅರ್ಪಿಸಿದ್ದರು. 2013ರಲ್ಲಿ ಭಾರತ ಚಾಂಪಿಯನ್ಸ್​ ಟ್ರೋಫಿ ಗೆದ್ದು ಬೀಗಿತ್ತು. ಭಾರತ ಚಾಂಪಿಯನ್ಸ್​ ಟ್ರೋಫಿ ಗೆದ್ದು 12 ವರ್ಷಗಳೇ ಕಳೆದಿವೆ.

ಈಗ ಮತ್ತೊಮ್ಮೆ ಚಾಂಪಿಯನ್ಸ್​ ಟ್ರೋಫಿಗೆ ಮುತ್ತಿಕ್ಕುವ ಕ್ಷಣ ಎದುರಾಗಿದೆ.12 ವರ್ಷಗಳ ನಂತರ ಟೀಮ್ ಇಂಡಿಯಾ ಮತ್ತೆ ಈ ಐಸಿಸಿ ಟ್ರೋಫಿಯನ್ನು ಗೆಲ್ಲಲು ತಯಾರಿ ನಡೆಸುತ್ತಿದೆ. ಭಾರತ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕೆ ಇಳಿಯಲಿದೆ. ಚಾಂಪಿಯನ್ಸ್ ಟ್ರೋಫಿ 2025 ಟೂರ್ನಮೆಂಟ್ ಫೆಬ್ರವರಿ 19 ರಿಂದ ಆರಂಭವಾಗಲಿದೆ.

ರೋಹಿತ್ ಬಳಗ ಆಡುವ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ ಎಂಬುದು ಗಮನಾರ್ಹ. ಎಂಎಸ್ DHONI ನಾಯಕತ್ವದಲ್ಲಿ ಭಾರತ ಏಕದಿನ ಮತ್ತು ಟಿ20 ವಿಶ್ವಕಪ್‌ಗಳನ್ನು ಮಾತ್ರ ಗೆದ್ದುಕೊಂಡಿಲ್ಲ.. ಇದರ ಜೊತೆಗೆ ಚಾಂಪಿಯನ್ಸ್ ಟ್ರೋಫಿಯನ್ನೂ ಸಹ ಗೆದ್ದಿರುವುದು ಗೊತ್ತಿರುವ ಸಂಗತಿ. ಈ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ಟೀಮ್ ಇಂಡಿಯಾ ನಾಯಕ ಕೂಡ DHONI ಅವರೇ.. ಈಗ ಅವರು ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಗೆ ತಯಾರಿ ನಡೆಸುತ್ತಿದ್ದಾರೆ. ಆದರೆ, ಇದು ನಾಯಕನಾಗಿ ಅಲ್ಲ.

ವಿಡಿಯೋದಲ್ಲಿ DHONI ಎಷ್ಟು ಟೆನ್ಷನ್​ ಆಗಿದ್ದಾರೆ ಎಂಬುದನ್ನು ತೋರಿಸಲಾಗಿದೆ. DHONI ಹಿಮಾಲಯದಲ್ಲಿಯೂ ಕುಳಿತರೂ ಸಹ ಅವರು ಬೆವರುತ್ತಿರುವುದಾಗಿ ತೋರಿಸಿದ್ದಾರೆ. ಅಷ್ಟೇ ಅಲ್ಲ, ಅವರ ತಲೆ ಮೇಲೆ ಐಸ್​ ಕ್ಯೂಬ್​ನಿಂದ ಮಾಡಿದ ಟೋಪಿ ಧರಿಸಿದ್ರೂ ಸಹ ಅವರ ಟೆನ್ಷನ್​ ಮಾತ್ರ ಕಡಿಮೆಯಾಗುತ್ತಿಲ್ಲ. ಹಿಮ ಮಳೆ, ಟ್ಯಾಂಕರ್‌ಗಳ ಮೂಲಕ ಐಸ್ ತಂದು ಅವರ ಮೇಲೆ ಸುರಿದರೂ ಸಹ ಹೀಟ್​ ಕಡಿಮೆಯಾಗ್ತಿಲ್ಲ ಎಂದು DHONI ಹೇಳುತ್ತಿದ್ದ ಸನ್ನೆಗಳು ಎಲ್ಲರನ್ನೂ ಬೆರಗುಗೊಳಿಸುತ್ತಿವೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಸದ್ಯ ಭಾರತದ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂಎಸ್​ DHONI ಸುದ್ದಿಯಲ್ಲಿದ್ದಾರೆ. ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಮಾಜಿ ನಾಯಕ ಎಂಎಸ್ DHONI ಅವರ ಪ್ರೋಮೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈಗ ಅದು ಸಖತ್​ ವೈರಲ್ ಆಗ್ತಿದೆ. ಐಸಿಸಿ ಟೂರ್ನಮೆಂಟ್‌ನಲ್ಲಿನ ಸ್ಪರ್ಧೆಯ ಕುರಿತು DHONI ಆಸಕ್ತಿದಾಯಕ ಮಾತುಗಳನ್ನು ಸಹ ಆಡಿದ್ದಾರೆ.

ನಾಯಕನಾಗಿ ತಾನು ಯಾವಾಗಲೂ ಕೂಲ್ ಆಗಿರುತ್ತೇನೆ.ಇದರ ಲೆಕ್ಕಾಚಾರ ನೋಡಿದರೆ ಈ ಪಂದ್ಯಗಳು ರೋಮಾಂಚಕಾರಿಯಾಗಿರಲಿವೆ ಎಂದು ತೋರುತ್ತಿದೆ. ನಮ್ಮ ತಂಡ ಬಲಿಷ್ಠವಾಗಿದ್ದರೂ, ನಾವು ಕೇವಲ ಒಂದು ಪಂದ್ಯ ಸೋತರೆ ಪಂದ್ಯಾವಳಿಯಿಂದ ಹೊರಹೋಗಬೇಕಾಗುತ್ತದೆ. “ಈ ಟೆನ್ಷನ್​ ನಡುವೆ ಹೊರಗೆ ಮಾತ್ರವಲ್ಲದೆ ನನ್ನೊಳಗೂ ಟೆಂಪರೇಚರ್​ ಏರುತ್ತಿದೆ” ಎಂದು DHONI ವಿಡಿಯೋದಲ್ಲಿ ಹೇಳಿದ್ದಾರೆ. ಆದರೆ ಈಗ ಅಭಿಮಾನಿಯಾಗಿ ಪಂದ್ಯಗಳನ್ನು ನೋಡುವಾಗ ತುಂಬಾ ಟೆನ್ಷನ್​ ಆಗಿರುತ್ತೇನೆ ಎಂದು DHONI ಹೇಳಿದ್ದಾರೆ. ಇದಕ್ಕಾಗಿ ಡಿಆರ್‌ಎಸ್ (DHONI ರೆಫ್ರಿಜರೇಷನ್ ಸಿಸ್ಟಮ್) ಸಿದ್ಧಪಡಿಸಲಾಗಿದ್ದರೂ, ಅದು ಸಾಕಾಗುವುದಿಲ್ಲ ಎಂದು ಅವರು ಬಹಿರಂಗಪಡಿಸಿದರು.

 

 

ಇದನ್ನು ಓದಿರಿ :MODI TRUMP PHONE CONVERSATION:’ನ್ಯಾಯಯುತ’ ದ್ವಿಪಕ್ಷೀಯ ವ್ಯಾಪಾರಕ್ಕೆ ಟ್ರಂಪ್ ಒತ್ತು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...