MS Dhoni IPL 2025 NEWS:
ವಿಶ್ವ ಕಂಡ ಶ್ರೇಷ್ಠ ನಾಯಕ ಮತ್ತು ವಿಕೆಟ್ ಕೀಪರ್ ಯಾರು ಎಂದರೆ ಥಟ್ಟನೆ ನೆನಪಿಗೆ ಬರುವ ಹೆಸರು MS DHONI.
ಇವರು ಕ್ರಿಕೆಟ್ನಲ್ಲಿ ನಾಯಕನಾಗಿ ಮಾಡಿರುವ ಸಾಧನೆ ಬೇರೆ ಯಾವೊಬ್ಬ ಆಟಗಾರನಿಗೂ ಸಾಧ್ಯವಾಗುತ್ತಿಲ್ಲ. ಇಂದಿಗೂ ಐಸಿಸಿ ಆಯೋಜಿತ ಎಲ್ಲಾ ಟೂರ್ನಿಗಳನ್ನು ಜಯಿಸಿದ ವಿಶ್ವದ ಏಕೈಕ ನಾಯಕ ಎಂಬ ದಾಖಲೆಯೂ ಥಲಾ ಹೆಸರಲ್ಲಿದೆ. ಜೊತೆಗೆ ಅತ್ಯಂತ ವೇಗದ ಸ್ಟಂಪಿಂಗ್ ದಾಖಲೆಯನ್ನೂ ಹೊಂದಿದ್ದಾರೆ.
ಸದ್ಯ MS DHONI ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದು ಇಂದಿಗೆ 5 ವರ್ಷಗಳು ಕಳೆದಿವೆ. ಆದರೆ IPLನಲ್ಲಿ ಮುಂದುವರೆದಿದ್ದಾರೆ. ಈ ಹಿಂದೆ ನಾಯಕನಾಗಿದ್ದ MS DHONI ಇದೀಗ ವಿಕೆಟ್ ಕೀಪರ್ ಆಗಿ ತಂಡದ ಪರ ಆಡುತ್ತಿದ್ದಾರೆ.
ಇತ್ತೀಚೆಗೆ MS DHONI ಐಪಿಎಲ್ ನಿವೃತ್ತಿ ಕುರಿತು ಹಲವಾರು ಸುದ್ದಿಗಳು ಹರಿದಾಡುತ್ತಿವೆ. ‘ಇದು MS DHONI ಕೊನೆಯ ಸೀಸನ್’ ಎಂದು ಹೇಳಲಾಗುತ್ತಿದೆ. ಇದರ ನಡುವೆಯೆ ತಮ್ಮ ಕೊನೆಯ ಐಪಿಎಲ್ ಯಾವಗ ಎಂಬುದರ ಸೂಚನೆ ನೀಡಿದ್ದಾರೆ.
Lucky Captain:
MS DHONI ಶಾಂತ ಸ್ವಭಾವ ಮತ್ತು ನಾಯಕತ್ವಕ್ಕೆ ಹೆಸರುವಾಸಿ ಆಗಿದ್ದಾರೆ. ಇವರು ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದುಕೊಂಡಿದೆ.
ಇದಲ್ಲದೆ ಐಪಿಎಲ್ನಲ್ಲೂ MS DHONI ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. 15 ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. 2010, 2011, 2018, 2021 ಮತ್ತು 2023ರಲ್ಲಿ ಇವರ ನಾಯಕತ್ವದಲ್ಲಿ ಸಿಎಸ್ಕೆ (CSK) ತಂಡ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು.
Uncapped player:
ಕಳೆದ ವರ್ಷ ನಡೆದಿದ್ದ 17ನೇ ಆವೃತ್ತಿಯಲ್ಲಿ MS DHONI ನಾಯಕತ್ವದಿಂದ ಕೆಳಗಿಳಿದಿದ್ದರು. ಸದ್ಯ ಅನ್ಕ್ಯಾಪ್ಡ್ ಪ್ಲೇಯರ್ ಆಗಿ ತಂಡದಲ್ಲಿ ಆಡುತ್ತಿದ್ದಾರೆ. ಧೋನಿ ಬಳಿಕ ರುತುರಾಜ್ ಗಾಯಕ್ವಾಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
Shocking news for fans:
ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ MS DHONI ತಾವು ಧರಿಸಿದ್ದ ಟಿ-ಶರ್ಟ್ ಮೂಲಕ ಸಂದೇಶವೊಂದನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
MS DHONI ಧರಿಸಿರುವ ಟಿ-ಶರ್ಟ್ ಮೇಲೆ ಸ್ಲೋಗನ್ ಬರೆಯಲಾಗಿದೆ. ಅದರಲ್ಲಿನ ಅಕ್ಷರಗಳು ಟೆಲಿ ಕಮ್ಯುನಿಕೆಷನ್ ಮಾರ್ಸ್ ಕೋಡ್ನಲ್ಲಿವೆ.
ಇದನ್ನು ಡಿಕೋಡ್ ಮಾಡಿದರೆ ‘One Last Time’ ‘ಕೊನೆಯ ಬಾರಿ’ ಎಂಬ ಅರ್ಥ ಬರುತ್ತದೆ ಎಂದು ನೆಟಿಜನ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಅಭಿಮಾನಿಗಳಿಗೆ ಮಾಹಿ ಈ ರೀತಿಯಲ್ಲಿ ನಿವೃತ್ತಿ ಸಂದೇಶ ನೀಡಿದ್ದಾರೆ ಎನ್ನಲಾಗುತ್ತಿದೆ. ಇದರೊಂದಿಗೆ, ಇದು MS DHONI ಯ ಕೊನೆಯ ಐಪಿಎಲ್ ಎಂದು ಹೇಳುವ ಅಭಿಯಾನ ಮತ್ತೆ ಪ್ರಾರಂಭಗೊಂಡಿದೆ.