Dharwad News:
ಧಾರವಾಡ ಹೈಕೋರ್ಟ್ನಲ್ಲಿ ಇಂದು MUDA ಕೇಸ್ ತನಿಖೆ ಸಿಬಿಐಗೆ ವಹಿಸುವಂತೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಅರ್ಜಿ ವಿಚಾರಣೆಯನ್ನ ಜ.27ಕ್ಕೆ ಮುಂದೂಡಿದೆ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಜ.27ಕ್ಕೆ ಮುಂದೂಡಿದೆ.
ಆ ತನಿಖೆ ಪ್ರಮಾಣಿಕವಾಗಿ ಆಗಬೇಕೆಂದು ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೆವು. ಲೋಕಾಯುಕ್ತ ರಾಜ್ಯ ಸರ್ಕಾರದ ಕೈ ಗೊಂಬೆಯಂತೆ ಕೆಲಸ ಮಾಡುತ್ತಿದೆ. ಹೀಗಾಗಿ ನಾವು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದೆವು” ಎಂದು ತಿಳಿಸಿದರು.ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತಕುಮಾರ ಮಾತನಾಡಿ, “MUDA ಹಗರಣ ಸಂಬಂಧ ಎರಡ್ಮೂರು ಬಾರಿ ವಿಚಾರಣೆ ಬೆಂಗಳೂರನಲ್ಲಿ ನಡೆದಿತ್ತು.
MUDAಹಗರಣ ಸಂಬಂಧ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗಿದೆ. “MUDA ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೇಳಿದ್ದೆವು. ಧಾರವಾಡ ಹೈಕೋರ್ಟ್ ಪೀಠದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಮಣಿಂದರ್ ಸಿಂಗ್ ಅವರು ಸುದೀರ್ಘವಾಗಿ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ನ್ಯಾಯಪೀಠ ಜ.27ಕ್ಕೆ ವಿಚಾರಣೆಯನ್ನು ಮುಂದೂಡಿದೆ” ಎಂದರು.
“MUDAದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿತ್ತು. ಈ ಸಂಬಂಧ ದೂರು ದಾಖಲು ಮಾಡಿದ್ದೆ. ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಇದರಲ್ಲಿ ಭಾಗಿಯಾಗಿದೆ. ಲೋಕಾಯುಕ್ತ ಹಗರಣದ ಬಗ್ಗೆ ಸೂಕ್ತ ತನಿಖೆ ಆಗುವುದಿಲ್ಲ. ಹೀಗಾಗಿ ಹಗರಣದ ತನಿಖೆ ಸಿಬಿಐಗೆ ವಹಿಸಬೇಕು ಎಂದು ಕೇಳಿದ್ದೇನೆ” ಎಂದಿದ್ದರು.ಸಿಎಂ ಸಿದ್ದರಾಮಯ್ಯ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಿಡಿಯೋ ಕಾಲ್ ಮೂಲಕ ವಾದ ಮಂಡಿಸಿದರು.
ಕೋರ್ಟ್ ಒಳಗೆ ಹೋಗುವುದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, “ಅರ್ಜಿ ಬಗ್ಗೆ ಸಾಕಷ್ಟು ವಿಚಾರಣೆ ಆಗಿದೆ. ಇವತ್ತು ಅಂತಿಮ ಆದೇಶ ಹೊರ ಬರುವ ಸಾಧ್ಯತೆ ಇದೆ. ಜಡ್ಜ್ ಇಂದು ಧಾರವಾಡ ಪೀಠಕ್ಕೆ ಬಂದಿದ್ದಾರೆ. ಹೀಗಾಗಿ ಇಲ್ಲಿ ವಿಚಾರಣೆ ನಡೆಯಲಿದೆ. ನನ್ನ ಪರ ವಕೀಲರಾದ ಮಣಿಂದರ್ ಸಿಂಗ್ ಬಂದಿದ್ದಾರೆ. ಎಲ್ಲರೂ ಇಲ್ಲಿಗೆ ಬಂದಿದ್ದೇವೆ. ನ್ಯಾಯಾಲಯ MUDA ಹಗರಣದ ತನಿಖೆಯನ್ನು ಸಿಬಿಐ ನೀಡುತ್ತದೆ” ಎಂಬ ಭರವಸೆ ಇದೆ ಎಂದು ತಿಳಿಸಿದ್ದರು.
ಇದನ್ನು ಓದಿರಿ : DRIVER RUNS CAR ON STRAY DOG : ಬೀದಿ ನಾಯಿ ಮೇಲೆ ಕಾರು ಹರಿಸಿದ ಚಾಲಕ: