spot_img
spot_img

MUSLIM MAN CONVERTS TO HINDU:ಗೆಳತಿಯ ವರಿಸಲು ಹಿಂದು ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ.

spot_img
spot_img

Share post:

 

Basti (Uttar Pradesh) News :

ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿಯನ್ನು ವರಿಸಲು ಹಿಂದು ಧರ್ಮಕ್ಕೆ MUSLIM ಯುವಕ ಮತಾಂತರವಾದ ಪ್ರಕರಣ ಬೆಳಕಿಗೆ ಬಂದಿದೆ.ಮೊದಲು ವಿವಾಹಕ್ಕೆ ನಿರಾಕರಿಸಿದ್ದ ಸದ್ದಾಂ ಇದೀಗ, ಒಪ್ಪಿಕೊಂಡು ತನ್ನಾಕೆಗಾಗಿ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾನೆ.

ತನ್ನ ಹೆಸರಿನ್ನು ಶಿವಶಂಕರ್​​ ಸೋನಿ ಎಂದು ಬದಲಿಸಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. MUSLIM ಯುವಕ ತನ್ನ ಹಿಂದು ಪ್ರೇಯಸಿಗಾಗಿ ತಾನೇ ಸನಾತನ ಧರ್ಮಕ್ಕೆ ಮತಾಂತರವಾದ ಅಪರೂಪದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

34 ವರ್ಷದ MUSLIM ಯುವಕ ಸದ್ದಾಂ ಮತ್ತು 30 ವರ್ಷದ ಹಿಂದು ಯುವತಿ ಕಳೆದ 10 ವರ್ಷಗಳಿಂದ ಪರಸ್ಪರ ಸಂಬಂಧ ಹೊಂದಿದ್ದರು. ಆದರೆ, ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದ ಕಾರಣ, ಯುವಕನ ಕುಟುಂಬಸ್ಥರು ನಿರಾಕರಿಸಿದ್ದರು.

ಇಲ್ಲಿನ ನಗರ ಬಜಾರ್​ ನಿವಾಸಿಯಾಗಿದ್ದ ಸದ್ದಾಂ (ಶಿವಶಂಕರ್​) ಅದೇ ಪ್ರದೇಶದ ಹಿಂದು ಯುವತಿಯನ್ನು ಪ್ರೀತಿಸುತ್ತಿದ್ದ.ಯುವತಿ ಹಲವು ಬಾರಿ ವಿವಾಹಕ್ಕೆ ಒತ್ತಾಯಿಸಿದ್ದಾಳೆ.

Voluntary conversion, marriage: ಇದರ ಬೆನ್ನಲ್ಲೇ, ಅವರಿಬ್ಬರೂ ಸ್ವಇಚ್ಛೆಯಿಂದ ವಿವಾಹವಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಅಧಿಕಾರಿ ದೇವೇಂದ್ರ ಸಿಂಗ್ ಹೇಳಿದ್ದಾರೆ.ಇದರಿಂದ ಯುವತಿ ಕುಟುಂಬಸ್ಥರು ಮೂರು ದಿನಗಳ ಹಿಂದಷ್ಟೇ, ಸದ್ದಾಂ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಮದುವೆಯ ನೆಪದಲ್ಲಿ ಅತ್ಯಾಚಾರ, ಗರ್ಭಪಾತ ಮಾಡಿಸಲು ಒತ್ತಾಯಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು.

ಹಿಂದು ಧರ್ಮಕ್ಕೆ ಮತಾಂತರ ಮತ್ತು ವಿವಾಹಕ್ಕೆ ಸ್ವಇಚ್ಛೆಯಿಂದ ನಿರ್ಧಾರ ಮಾಡಿದ್ದೇವೆ. ತಾವಿಬ್ಬರೂ ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದೆವು ಎಂದು ನವದಂಪತಿ ಪೊಲೀಸರೆದುರು ಹೇಳಿಕೆ ದಾಖಲಿಸಿದ್ದಾರೆ.

 MUSLIMನಾಗಿದ್ದ ಸದ್ದಾಂ ಹಿಂದು ಧರ್ಮಕ್ಕೆ ಮತಾಂತರವಾಗಿ ಶಿವಶಂಕರ್​ ಸೋನಿ ಎಂದು ನಾಮಕರಣ ಮಾಡಿಕೊಂಡಿದ್ದಾನೆ. ಹಿಂದೂ ಪದ್ಧತಿಗಳ ಪ್ರಕಾರ ಭಾನುವಾರ ನಗರದ ಮಾರುಕಟ್ಟೆಯಲ್ಲಿರುವ ದೇವಾಲಯದಲ್ಲಿ ವಿವಾಹವಾದರು. ಇಬ್ಬರೂ ಸಪ್ತಪದಿ ತುಳಿದು, ಜೀವನವನ್ನು ಒಟ್ಟಿಗೆ ಕಳೆಯಲು ಪ್ರತಿಜ್ಞೆ ಮಾಡಿದ್ದಾರೆ ಎಂದರು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...